ಸಣ್ಣ ಪುಟ್ಟ ವಿಷಯಗಳಿಗೂ ಸಾರ್ವಜನಿಕರು ಲೋಕಾಯುಕ್ತಕ್ಕೆ ಬರುವುದು ಸರಿಯಲ್ಲ: ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ

ದಾವಣಗೆರೆ ಏ. 24: ಸಣ್ಣ ಪುಟ್ಟ ವಿಷಯಗಳಿಗೂ ಸಾರ್ವಜನಿಕರು ಲೋಕಾಯುಕ್ತಕ್ಕೆ ಬರುವುದು ಸರಿಯಲ್ಲ. ಅಧಿಕಾರಿಗಳು ತಮ್ಮ ಕೆಲಸಗಳನ್ನು ಆತ್ಮಶ್ರದ್ಧೆಯಿಂದ ನಿರ್ವಹಿಸಬೇಕು. ಹಲವು ಕಚೇರಿಗಳಿಗೆ ಭೇಟಿ ನೀಡಿದ ವೇಳೆ ಸಾಕಷ್ಟು ಲೋಪದೋಷಗಳು ಕಂಡು ಬಂದಿವೆ. ಒಮ್ಮೆ ನಾನು ತೀರ್ಪು ಬರೆಯಲು ಪೆನ್ನು ಹಿಡಿದರೆ, ಪೆನ್ನು ಖಡ್ಗಕ್ಕಿಂತಲೂ ಹರಿತವಾಗಿರುತ್ತದೆ. ಯಾವುದೇ ಮುಲಾಜು ಇಲ್ಲದೆ ತೀರ್ಪು ನೀಡುತ್ತೇನೆ. ಇದಕ್ಕೆ ಅವಕಾಶ ನೀಡದೆ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

Join Whatsapp Group NammaDavangere 04
Join Whatsapp Group NammaDavangere 05

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ, ಗುರುವಾರ ಲೋಕಾಯುಕ್ತ ಕಾಯ್ದೆ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಲಾದ ಕಾನೂನು ಅರಿವು ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಲೋಕಾಯುಕ್ತ ಕಾಯ್ದೆ ತುಂಬಾ ಬಲವಾಗಿದೆ. ಲೋಕಾಯುಕ್ತ ಸ್ವಾಯತ್ತ ಸಂಸ್ಥೆಯಾಗಿದ್ದು, ಲೋಕಾಯುಕ್ತ ವರದಿ ಆಧರಿಸಿ ಅಧಿಕಾರದಲ್ಲಿ ಇದ್ದ ಮುಖ್ಯಮಂತ್ರಿಗಳು ಸಹ ಜೈಲಿಗೆ ಹೋಗಿದ್ದಾರೆ. ಸಾರ್ವಜನಿಕರಿಂದ ಸರ್ಕಾರದಿಂದ ಹಾಗೂ ಸ್ವಯಂಪ್ರೇರಿತವಾಗಿ ದಾಖಲಾದ ದೂರುಗಳನ್ನು ಪರಿಶೀಲಿಸಲು ಲೋಕಾಯುಕ್ತಕ್ಕೆ ಜಿಲ್ಲಾ ನ್ಯಾಯಾಧೀಶರು, ಸಿವಿಲ್ ನ್ಯಾಯಾಧೀಶರು, ಆಡಳಿತ ವರ್ಗ ಹಾಗೂ ತಾಂತ್ರಿಕ ಸಲಹಾ ತಂಡಗಳು ಇವೆ. ಈ ತನಿಖಾ ಪಡೆಗಳಿಂದ ಬಂದ ದೂರು, ಅವುಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಟಿಪ್ಪಣಿ ನೀಡುತ್ತಾರೆ. ದೂರಿನಲ್ಲಿ ಮೇಲ್ನೋಟಕ್ಕೆ ಸಾಬೀತು ಆಗಬಹುದಾದ ಅಂಶಗಳಿವೆ ಎಂದು ಎನಿಸಿದಾಗ ಮಾತ್ರ ಲೋಕಾಯುಕ್ತ ಸರ್ಕಾರಿ ನೌಕರರಿಗೆ ನೋಟಿಸು ನೀಡಿ ವಿವರಣೆ ಕೇಳಲಾಗುತ್ತದೆ. ಕೆಲವು ಅಧಿಕ ಆಸ್ತಿಗಳಿಕೆ ಪ್ರಕರಣಗಳಲ್ಲಿ ಸಾಕ್ಷ್ಯಗಳ ಸಂಗ್ರಹಕ್ಕೆ ಸರ್ಚ್ ವಾರೆಂಟ ನೀಡಲಾಗುತ್ತದೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು.

ಸರ್ಕಾರಿ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಕಂಡು ಬಂದರೆ, ಅವರ ಆಸ್ತಿ ಗಳಿಕೆಯ ತನಿಖೆ ಮಾಡಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಅಪಾರ ಪ್ರಮಾಣದ ಬಂಗಾರ, ಆಭರಣ, ನಗದು ಗಳನ್ನು ಜಪ್ತಿ ಮಾಡಲಾಗಿದೆ.ಲೋಕಾಯುಕ್ತದ ನೋಟಿಸ್ ಗೆ ಉತ್ತರಿಸದೇ ಇರುವುದು, ಲೊಕಾಯುಕ್ತ ಸೂಚನೆಗಳನ್ನು ಪಾಲಿಸದೇ ಇರುವುದು ನ್ಯಾಯಾಂಗ ಉಲ್ಲಂಘನೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರತ್ಯೇಕವಾಗಿ ಸರ್ಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನ್ಯಾ.ಬಿ.ವೀರಪ್ಪ ಹೇಳಿದರು.

ಮಾಧ್ಯಮ ದೇಶದ ನಾಲ್ಕನೆಯ ಅಂಗವಾಗಿದೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ವರದಿಗಳ ಮೂಲಕ ಬೆಳಕು ಚೆಲ್ಲಬೇಕು. ಇಂತಹ ವರದಿ ಆಧರಿಸಿ ಲೋಕಾಯುಕ್ತ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತದೆ ಎಂದು ನ್ಯಾ.ಬಿ.ವೀರಪ್ಪ ಹೇಳಿದರು.

ನಂತರ ಕೆಲ ಸಾರ್ವಜನಿಕರು ತಮ್ಮ ದೂರು ಹಾಗೂ ಸಮಸ್ಯೆಗಳ ಬಗ್ಗೆ ನ್ಯಾ.ಬಿ.ವೀರಪ್ಪ ಅವರೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ವೇಲಾ.ಡಿ.ಕೆ. , ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಅರವಿಂದ.ಎನ್.ವಿ., ಮಿಲನ.ವಿಎನ್., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಪೂರೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

Related Posts

ಗುರುಕುಲ ವಸತಿಯುತ ಶಾಲೆಯಲ್ಲಿ ಸಂಭ್ರಮದ ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಆರೋಗ್ಯವೇ ಭಾಗ್ಯ ಸಂದೇಶ

ನಮ್ಮ ದಾವಣಗೆರೆ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಗುರುಕುಲ ವಸತಿಯುತ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಬೆಳೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗಾಭ್ಯಾಸ ಪ್ರಮುಖ…

ಬುಧವಾರದ ರಾಶಿ ಭವಿಷ್ಯ 18 ಫೆಬ್ರವರಿ 2026

ಈ ರಾಶಿಯವರಿಗೆ ದಂಪತಿ ಕಲಹಗಳು ಕೊನೆಗೊಳ್ಳುವುದು ಯಾವಾಗ?ಅಂತೂ ಇಂತೂ ಈ ರಾಶಿಯವರ ಕಂಕಣ ಬಲ ಕೂಡಿ ಬಂತು, ಬುಧವಾರದ ರಾಶಿ ಭವಿಷ್ಯ 18 ಫೆಬ್ರವರಿ 2026 ಸೂರ್ಯೋದಯ – 6:44 ಬೆ.ಸೂರ್ಯಾಸ್ತ – 6:15 ಸಂಜೆ ಶಾಲಿವಾಹನ ಶಕೆ -1947ಸಂವತ್-2081ವಿಶ್ವಾವಸು ನಾಮ…

Leave a Reply

Your email address will not be published. Required fields are marked *

You Missed

ಮಂಗಳವಾರದ ರಾಶಿ ಭವಿಷ್ಯ 21 ಜುಲೈ 2026

ಮಂಗಳವಾರದ ರಾಶಿ ಭವಿಷ್ಯ 21 ಜುಲೈ 2026

ಸೋಮವಾರದ ರಾಶಿ ಭವಿಷ್ಯ 20 ಜುಲೈ 2026

ಸೋಮವಾರದ ರಾಶಿ ಭವಿಷ್ಯ 20 ಜುಲೈ 2026

ಭಾನುವಾರದ ರಾಶಿ ಭವಿಷ್ಯ 19 ಜುಲೈ 2026

ಭಾನುವಾರದ ರಾಶಿ ಭವಿಷ್ಯ 19 ಜುಲೈ 2026

ಗುರುವಾರದ ರಾಶಿ ಭವಿಷ್ಯ 16 ಜುಲೈ 2026

ಗುರುವಾರದ ರಾಶಿ ಭವಿಷ್ಯ 16 ಜುಲೈ 2026

ಬುಧವಾರದ ರಾಶಿ ಭವಿಷ್ಯ 15 ಜುಲೈ 2026

ಬುಧವಾರದ ರಾಶಿ ಭವಿಷ್ಯ 15 ಜುಲೈ 2026

ಮಂಗಳವಾರದ ರಾಶಿ ಭವಿಷ್ಯ 14 ಜುಲೈ 2026

ಮಂಗಳವಾರದ ರಾಶಿ ಭವಿಷ್ಯ 14 ಜುಲೈ 2026

ಭಾನುವಾರದ ರಾಶಿ ಭವಿಷ್ಯ 12 ಜುಲೈ 2026

ಭಾನುವಾರದ ರಾಶಿ ಭವಿಷ್ಯ 12 ಜುಲೈ 2026

ಗುರುವಾರದ ರಾಶಿ ಭವಿಷ್ಯ 09 ಜುಲೈ 2026

ಗುರುವಾರದ ರಾಶಿ ಭವಿಷ್ಯ 09 ಜುಲೈ 2026

ಬುಧವಾರದ ರಾಶಿ ಭವಿಷ್ಯ 08 ಜುಲೈ 2026

ಬುಧವಾರದ ರಾಶಿ ಭವಿಷ್ಯ 08 ಜುಲೈ 2026

ಮಂಗಳವಾರದ ರಾಶಿ ಭವಿಷ್ಯ 07 ಜುಲೈ 2026

ಮಂಗಳವಾರದ ರಾಶಿ ಭವಿಷ್ಯ 07 ಜುಲೈ 2026
×