ಉಚಿತ ಕಾಲು ಬಾಯಿ ರೋಗ ಲಸಿಕಾ ಅಭಿಯಾನ

ಜಿಲ್ಲೆಯಾದ್ಯಂತ ಇದೇ ಏಪ್ರಿಲ್ 26 ರಿಂದ ಜೂನ್ 9 ರವರೆಗೆ ಜಾನುವಾರುಗಳಿಗೆ ಉಚಿತ ಲಸಿಕಾ ಅಭಿಯಾನ ನಡೆಯಲಿದ್ದು, ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.

Join Whatsapp Group NammaDavangere 04
Join Whatsapp Group NammaDavangere 05

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ “ಉಚಿತ ಕಾಲು ಬಾಯಿ ರೋಗ ಲಸಿಕಾ ಅಭಿಯಾನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಲು ಬಾಯಿ ರೋಗವು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಶೇ.100 ರಷ್ಟು ಲಸಿಕೆ ನೀಡುವ ಮೂಲಕ ರೋಗವನ್ನು ಸಂಪೂರ್ಣ ನಿಯಂತ್ರಿಸಿ, ನಿರ್ಮೂಲನೆ ಮಾಡಬೇಕು. ಮಾನವನಿಗೆ ಮಾತು ಬರುವುದರಿಂದ ಸಮಸ್ಯೆಗಳನ್ನು ಹೇಳಿಕೊಂಡು ವೈದ್ಯನ ಬಳಿ ತೆರಳುತ್ತಾನೆ, ಆದರೆ ಮಾತು ಬಾರದ ಮೂಕ ಜೀವಿ ಜಾನುವಾರುಗಳ ಗತಿ ಏನು?. ಆದ್ದರಿಂದ ಸೂಕ್ಷ್ಮವಾಗಿ ಗಮನಿಸಿ ಲೋಪವಾಗದಂತೆ ಪ್ರತಿ ಜಾನುವಾರುಗಳಿಗೆ ಲಸಿಕೆ ನೀಡಬೇಕು ಎಂದ ಅವರು, ಪಶುವೈದ್ಯಕೀಯ ಇಲಾಖೆ ಸಹಾಯವಾಣಿ 1962 ಸಂಖ್ಯೆಯನ್ನು ಪ್ರತಿ ಪಶುವೈದ್ಯಕೀಯ ಇಲಾಖೆಯಲ್ಲಿ ಭಿತ್ತರಿಸಬೇಕು. ಹಾಗೆಯೇ ಇಲಾಖೆ ವತಿಯಿಂದ ಮತ್ತಷ್ಟು ಪರಿಣಾಮಕಾರಿಯಾಗಿ ರೈತರಿಗೆ ತಲುಪುವಂತೆ ಪ್ರಚಾರಪಡಿಸಿ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವಂತೆ ನೋಡಿಕೊಳ್ಳಬೇಕೆಂದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಹೆಚ್.ಎಂ.ಮಹಶ್ ಮಾತನಾಡಿ, ಜಿಲ್ಲೆಯಲ್ಲಿ 2,37,801 ದನ, 91,896 ಎಮ್ಮೆ ಸೇರಿ ಒಟ್ಟು 3,29,697 ಜಾನುವಾರುಗಳಿದ್ದು, 3,13,100 ಲಸಿಕೆ ಲಭ್ಯವಿದೆ. ಜಿಲ್ಲಾದ್ಯದಂತ 3000 ಬ್ಲಾಕ್‍ಗಳನ್ನು ಗುರುತಿಸಿದ್ದು, 321 ಲಸಿಕಾದಾರರು ಪ್ರತಿ ಗ್ರಾಮ ಹಾಗೂ ಮೆನೆಗೆ ತೆರಳಿ ಜಾನುವಾರುಗಳಿಗೆ ಲಸಿಕೆ ನೀಡಲಿದ್ದಾರೆ ಎಂದರು. .

Related Posts

ಗ್ರಾಹಕರಿಗೆ ಅತ್ಯಾಧುನಿಕ ಹೈಯರ್ ಇಂಡಿಯಾ ಗೃಹೋಪಯೋಗಿ ಉಪಕರಣಗಳು ಲಭ್ಯ.

ನಮ್ಮ ದಾವಣಗೆರೆ ಸೆ.(04): ಹೈಯರ್ ಇಂಡಿಯಾ ಬಗ್ಗೆ:2003ರಲ್ಲಿ ಭಾರತದಲ್ಲಿ ಸ್ಥಾಪನೆಯಾದ ಹೈಯರ್ ಅಪ್ಲೈಯನ್ಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಹೈಯರ್ ಇಂಡಿಯಾ), ಹೈಯರ್ ಸಿಂಗಾಪುರ್ ಇನ್ವೆಸ್ಟ್‌ಮೆಂಟ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದ್ದು, ಇದು ಉತ್ತಮ ಜೀವನಕ್ಕಾಗಿ ಪರಿಹಾರಗಳನ್ನು ಒದಗಿಸುವ ವಿಶ್ವದ ಪ್ರಮುಖ ಸಂಸ್ಥೆಯಾಗಿದೆ.ಸದ್ಯ,…

ಗುರುಕುಲ ವಸತಿಯುತ ಶಾಲೆಯಲ್ಲಿ ಸಂಭ್ರಮದ ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಆರೋಗ್ಯವೇ ಭಾಗ್ಯ ಸಂದೇಶ

ನಮ್ಮ ದಾವಣಗೆರೆ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಗುರುಕುಲ ವಸತಿಯುತ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಬೆಳೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗಾಭ್ಯಾಸ ಪ್ರಮುಖ…

Leave a Reply

Your email address will not be published. Required fields are marked *

You Missed

ಗ್ರಾಹಕರಿಗೆ ಅತ್ಯಾಧುನಿಕ ಹೈಯರ್ ಇಂಡಿಯಾ ಗೃಹೋಪಯೋಗಿ ಉಪಕರಣಗಳು ಲಭ್ಯ.

ಗ್ರಾಹಕರಿಗೆ ಅತ್ಯಾಧುನಿಕ ಹೈಯರ್ ಇಂಡಿಯಾ ಗೃಹೋಪಯೋಗಿ ಉಪಕರಣಗಳು ಲಭ್ಯ.

ಶುಕ್ರವಾರದ ರಾಶಿ ಭವಿಷ್ಯ 04 ಸೆಪ್ಟೆಂಬರ್ 2026

ಶುಕ್ರವಾರದ ರಾಶಿ ಭವಿಷ್ಯ 04 ಸೆಪ್ಟೆಂಬರ್ 2026

ಗುರುವಾರದ ರಾಶಿ ಭವಿಷ್ಯ 03 ಸೆಪ್ಟೆಂಬರ್ 2026

ಬುಧವಾರದ ರಾಶಿ ಭವಿಷ್ಯ 02 ಸೆಪ್ಟೆಂಬರ್ 2026

ಬುಧವಾರದ ರಾಶಿ ಭವಿಷ್ಯ 02 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 01 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 01 ಸೆಪ್ಟೆಂಬರ್ 2026

ಸೋಮವಾರದ ರಾಶಿ ಭವಿಷ್ಯ 31 ಆಗಸ್ಟ್ 2026

ಸೋಮವಾರದ ರಾಶಿ ಭವಿಷ್ಯ 31 ಆಗಸ್ಟ್ 2026

ಭಾನುವಾರದ ರಾಶಿ ಭವಿಷ್ಯ 30 ಆಗಸ್ಟ್ 2026

ಭಾನುವಾರದ ರಾಶಿ ಭವಿಷ್ಯ 30 ಆಗಸ್ಟ್ 2026

ಶನಿವಾರದ ರಾಶಿ ಭವಿಷ್ಯ 29 ಆಗಸ್ಟ್ 2026

ಶನಿವಾರದ ರಾಶಿ ಭವಿಷ್ಯ 29 ಆಗಸ್ಟ್ 2026

ಶುಕ್ರವಾರದ ರಾಶಿ ಭವಿಷ್ಯ 28 ಆಗಸ್ಟ್ 2026

ಶುಕ್ರವಾರದ ರಾಶಿ ಭವಿಷ್ಯ 28 ಆಗಸ್ಟ್ 2026

ಗುರುವಾರದ ರಾಶಿ ಭವಿಷ್ಯ 27 ಆಗಸ್ಟ್ 2026

ಗುರುವಾರದ ರಾಶಿ ಭವಿಷ್ಯ 27 ಆಗಸ್ಟ್ 2026
×