
ಜಿಲ್ಲೆಯಾದ್ಯಂತ ಇದೇ ಏಪ್ರಿಲ್ 26 ರಿಂದ ಜೂನ್ 9 ರವರೆಗೆ ಜಾನುವಾರುಗಳಿಗೆ ಉಚಿತ ಲಸಿಕಾ ಅಭಿಯಾನ ನಡೆಯಲಿದ್ದು, ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.
Join Whatsapp Group NammaDavangere 04
Join Whatsapp Group NammaDavangere 05
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ “ಉಚಿತ ಕಾಲು ಬಾಯಿ ರೋಗ ಲಸಿಕಾ ಅಭಿಯಾನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಲು ಬಾಯಿ ರೋಗವು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಶೇ.100 ರಷ್ಟು ಲಸಿಕೆ ನೀಡುವ ಮೂಲಕ ರೋಗವನ್ನು ಸಂಪೂರ್ಣ ನಿಯಂತ್ರಿಸಿ, ನಿರ್ಮೂಲನೆ ಮಾಡಬೇಕು. ಮಾನವನಿಗೆ ಮಾತು ಬರುವುದರಿಂದ ಸಮಸ್ಯೆಗಳನ್ನು ಹೇಳಿಕೊಂಡು ವೈದ್ಯನ ಬಳಿ ತೆರಳುತ್ತಾನೆ, ಆದರೆ ಮಾತು ಬಾರದ ಮೂಕ ಜೀವಿ ಜಾನುವಾರುಗಳ ಗತಿ ಏನು?. ಆದ್ದರಿಂದ ಸೂಕ್ಷ್ಮವಾಗಿ ಗಮನಿಸಿ ಲೋಪವಾಗದಂತೆ ಪ್ರತಿ ಜಾನುವಾರುಗಳಿಗೆ ಲಸಿಕೆ ನೀಡಬೇಕು ಎಂದ ಅವರು, ಪಶುವೈದ್ಯಕೀಯ ಇಲಾಖೆ ಸಹಾಯವಾಣಿ 1962 ಸಂಖ್ಯೆಯನ್ನು ಪ್ರತಿ ಪಶುವೈದ್ಯಕೀಯ ಇಲಾಖೆಯಲ್ಲಿ ಭಿತ್ತರಿಸಬೇಕು. ಹಾಗೆಯೇ ಇಲಾಖೆ ವತಿಯಿಂದ ಮತ್ತಷ್ಟು ಪರಿಣಾಮಕಾರಿಯಾಗಿ ರೈತರಿಗೆ ತಲುಪುವಂತೆ ಪ್ರಚಾರಪಡಿಸಿ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವಂತೆ ನೋಡಿಕೊಳ್ಳಬೇಕೆಂದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಹೆಚ್.ಎಂ.ಮಹಶ್ ಮಾತನಾಡಿ, ಜಿಲ್ಲೆಯಲ್ಲಿ 2,37,801 ದನ, 91,896 ಎಮ್ಮೆ ಸೇರಿ ಒಟ್ಟು 3,29,697 ಜಾನುವಾರುಗಳಿದ್ದು, 3,13,100 ಲಸಿಕೆ ಲಭ್ಯವಿದೆ. ಜಿಲ್ಲಾದ್ಯದಂತ 3000 ಬ್ಲಾಕ್‍ಗಳನ್ನು ಗುರುತಿಸಿದ್ದು, 321 ಲಸಿಕಾದಾರರು ಪ್ರತಿ ಗ್ರಾಮ ಹಾಗೂ ಮೆನೆಗೆ ತೆರಳಿ ಜಾನುವಾರುಗಳಿಗೆ ಲಸಿಕೆ ನೀಡಲಿದ್ದಾರೆ ಎಂದರು. .
