ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ದಾವಣಗೆರೆಯಲ್ಲಿ ಕಾರ್ಯಾಗಾರ.

ದಾವಣಗೆರೆ, ಜುಲೈ 29: ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜುಲೈ 30 ರಂದು ಬೆಳಿಗ್ಗೆ 11 ಗಂಟೆಗೆ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಸಂಯುಕ್ತವಾಗಿ ಹಮ್ಮಿಕೊಂಡಿವೆ.

Join Whatsapp Group NammaDavangere 04
Join Whatsapp Group NammaDavangere 05

ಕಾರ್ಯಾಗಾರವನ್ನು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಎಂ.ಕರೆಣ್ಣವರ ಉದ್ಘಾಟನೆ ಮಾಡಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ್.ಕೆ.ಎಸ್. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು.

ಈ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ಆಯೋಗದ ಮಾಜಿ ಸದಸ್ಯರೂ, ಜಿಲ್ಲಾ ಮಾನವ ಕಳ್ಳ ಸಾಗಾಣಿಕೆ ತಡೆ ಸಮಿತಿಯ ಸದಸ್ಯರೂ ಆಗಿರುವ ರೂಪಾನಾಯ್ಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಟಿ.ಎನ್, ಹಾಗೂ ವಕೀಲರಾದ ಅನಿತಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಜಿಲ್ಲಾ ನಿರೂಪಣಾಧಿಕಾರಿ ಗುರುಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಲಿಂಗ ತಜ್ಞರಾದ ರಾಧಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಕಾರ್ಯಾಗಾರದಲ್ಲಿ ಮಾನವ ಕಳ್ಳ ಸಾಗಾಣಿಕೆಯ ಹಿನ್ನಲೆ, ಸಾಂಸ್ಥಿಕ ಜವಾಬ್ದಾರಿಗಳು, ಪ್ರತಿಬಂಧಕ ಕಾನೂನುಗಳು ಮತ್ತು ನೈಜ ಘಟನೆಗಳ ಅಧ್ಯಯನ ಕುರಿತು ಚರ್ಚಿಸಲಾಗುವುದು. ಈ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ರಕ್ಷಣಾತ್ಮಕ ಕ್ರಮಗಳನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ.

Related Posts

ಐಫೋನ್ ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಎಲ್ಲರ ಮನಸ್ಸನ್ನು ಕಲಕುವಂತಿದೆ. “ಐಫೋನ್ ಕೊಡಿಸಲಿಲ್ಲ ಎಂದು ಯುವಕ ಸಾವಿಗೆ ಶರಣು, ಮಗನನ್ನು ರಕ್ಷಿಸಲು ಹೋಗಿ ತಂದೆ-ತಾಯಿಯೂ ಬಲಿ” ಎಂಬ ಶೀರ್ಷಿಕೆ ಕೇಳಿದರೆ ಯಾರಿಗಾದರೂ ಆಘಾತವಾಗುತ್ತದೆ.ಒಂದು ಮೊಬೈಲ್ ಫೋನ್ಗಾಗಿ ಇಡೀ ಕುಟುಂಬವೇ…

ಬಾಲ್ಯ ವಿವಾಹ ನಿಷೇಧ ಕುರಿತ ಚಿಂತನಾ-ಮಂಥನ ಕಾರ್ಯಗಾರ

ನಮ್ಮ ದಾವಣಗೆರೆ ಆ.22: ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಅವಿರತವಾಗಿ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ…

Leave a Reply

Your email address will not be published. Required fields are marked *

You Missed

ಗ್ರಾಹಕರಿಗೆ ಅತ್ಯಾಧುನಿಕ ಹೈಯರ್ ಇಂಡಿಯಾ ಗೃಹೋಪಯೋಗಿ ಉಪಕರಣಗಳು ಲಭ್ಯ.

ಗ್ರಾಹಕರಿಗೆ ಅತ್ಯಾಧುನಿಕ ಹೈಯರ್ ಇಂಡಿಯಾ ಗೃಹೋಪಯೋಗಿ ಉಪಕರಣಗಳು ಲಭ್ಯ.

ಶುಕ್ರವಾರದ ರಾಶಿ ಭವಿಷ್ಯ 04 ಸೆಪ್ಟೆಂಬರ್ 2026

ಶುಕ್ರವಾರದ ರಾಶಿ ಭವಿಷ್ಯ 04 ಸೆಪ್ಟೆಂಬರ್ 2026

ಗುರುವಾರದ ರಾಶಿ ಭವಿಷ್ಯ 03 ಸೆಪ್ಟೆಂಬರ್ 2026

ಬುಧವಾರದ ರಾಶಿ ಭವಿಷ್ಯ 02 ಸೆಪ್ಟೆಂಬರ್ 2026

ಬುಧವಾರದ ರಾಶಿ ಭವಿಷ್ಯ 02 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 01 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 01 ಸೆಪ್ಟೆಂಬರ್ 2026

ಸೋಮವಾರದ ರಾಶಿ ಭವಿಷ್ಯ 31 ಆಗಸ್ಟ್ 2026

ಸೋಮವಾರದ ರಾಶಿ ಭವಿಷ್ಯ 31 ಆಗಸ್ಟ್ 2026

ಭಾನುವಾರದ ರಾಶಿ ಭವಿಷ್ಯ 30 ಆಗಸ್ಟ್ 2026

ಭಾನುವಾರದ ರಾಶಿ ಭವಿಷ್ಯ 30 ಆಗಸ್ಟ್ 2026

ಶನಿವಾರದ ರಾಶಿ ಭವಿಷ್ಯ 29 ಆಗಸ್ಟ್ 2026

ಶನಿವಾರದ ರಾಶಿ ಭವಿಷ್ಯ 29 ಆಗಸ್ಟ್ 2026

ಶುಕ್ರವಾರದ ರಾಶಿ ಭವಿಷ್ಯ 28 ಆಗಸ್ಟ್ 2026

ಶುಕ್ರವಾರದ ರಾಶಿ ಭವಿಷ್ಯ 28 ಆಗಸ್ಟ್ 2026

ಗುರುವಾರದ ರಾಶಿ ಭವಿಷ್ಯ 27 ಆಗಸ್ಟ್ 2026

ಗುರುವಾರದ ರಾಶಿ ಭವಿಷ್ಯ 27 ಆಗಸ್ಟ್ 2026
×