
ನಮ್ಮ ದಾವಣಗೆರೆ ಮೇ. 07: ದಾವಣಗೆರೆಯಲ್ಲಿ ರೌಡಿಶೀಟರ್ ಸಂತೋಷ್ ಕುಮಾರ್ ಹತ್ಯೆ ಪ್ರಕರಣದಲ್ಲಿ 10 ಆರೋಪಿಗಳು ಹೊಳಲ್ಕೆರೆ ಪೊಲೀಸರ ಎದುರು ಶರಣಾಗಿದ್ದರು. ವಿದ್ಯಾನಗರ ಠಾಣೆಯಲ್ಲಿ 12 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹತ್ಯೆಯಾದ ಸಂತೋಷ್ ಕುಮಾರ್ ನ ಆಪ್ತರೇ ಹೆಚ್ಚಿನ ಆರೋಪಿಗಳು. ಬುಳ್ಳನಾಗ ಹತ್ಯೆಯಲ್ಲೂ ಇವರೇ ಭಾಗಿ ಎನ್ನಲಾಗಿದೆ. ಸಂತೋಷ್ ಕುಮಾರ್ ತನ್ನ ಸಹಚರರಿಗೆ ನೀಡಿದ್ದ ವಾಗ್ದಾನ ಉಳಿಸಿಕೊಳ್ಳದ ಕಾರಣ ಈ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ.

ಆದರೆ ಇಂದು ಅವರಗೆರೆ ಬಳಿ ಮಹಜರಿಗೆ ಹೋದ ವೇಳೆ ಪೇದೆ ಭೋಜಪ್ಪ ಮೇಲೆ ಹಲ್ಲೆಗೆ ಯತ್ನ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ ಸಂತೋಷ್ ಅಲಿಯಾಸ್ ಚಾವಳಿ ಸಂತು ಕಾಲಿಗೆ DYSP ಶರಣ ಬಸವೇಶ್ವರ ಭಜಂತ್ರಿ ಯವರು ಗುಂಡು ಹೊಡೆದಿದ್ದಾರೆ.
Join Whatsapp Group NammaDavangere 04
Join Whatsapp Group NammaDavangere 05