76 ನೇ ಗಣರಾಜ್ಯೋತ್ಸವದಲ್ಲಿ ಶಿಸ್ತಿನ ಪಥಸಂಚಲನ – ಪ್ರಶಸ್ತಿ ಯಾರಿಗೆ?

ನಮ್ಮ ದಾವಣಗೆರೆ : ದಾವಣಗೆರೆ ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ 29 ತಂಡಗಳು ತಮ್ಮ ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು, ಪೊಲೀಸ್ ಅಧಿಕಾರಿ ಸೋಮಶೇಖರಪ್ಪ.ಹೆಚ್.ಬಿ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು.

ಮಹೇಶ್ ಪಾಟೀಲ್ ಆರ್.ಎಸ್.ಐ. ನೇತೃತ್ವದ ಡಿಎಆರ್ ತಂಡ, ನಾಗರಿಕ ಪೊಲೀಸ್ ತಂಡ ಇಮ್ತಿಯಾಜ್, ಗೃಹರಕ್ಷಕ ದಳದಿಂದ ಯಲ್ಲಪ್ಪ, ಅಗ್ನಿಶಾಮಕ ದಳ ಪ್ರೇಮಾನಂದ್, ಎನ್.ಸಿ.ಸಿ ಡಿ.ಆರ್.ಎಂ. ವಿಜ್ಞಾನ ಕಾಲೇಜು ಶರ್ನಿಲ್.ಡಿ.ಕೆ., ಎನ್.ಸಿ.ಸಿ ಎಆರ್‍ಜಿ ಕಾಲೇಜಿನ ಚಿನ್ಮಯ್, ಎನ್.ಸಿ.ಸಿ ಎವಿಕೆ ಮಹಿಳಾ ಕಾಲೇಜ್‍ನಿಂದ ಅಶ್ವಿನಿ ಬಾಯಿ.ಯು, ಎನ್.ಸಿ.ಸಿ ಜಿ.ಎಂ.ಐ.ಟಿ. ಕಾಲೇಜ್‍ನಿಂದ ಹರ್ಷಿತ್ ಮಲ್ಲಿಕಾರ್ಜುನ್, ಎನ್.ಸಿ.ಸಿ ಡಿಆರ್‍ಆರ್ ಪಾಲಿಟೆಕ್ನಿಕ್ ಕಾಲೇಜ್‍ನಿಂದ ಮಹಮದ್ ರಿಹಾನ್ ರಾಝ, ಎನ್.ಸಿ.ಸಿ ಪಿಎಸ್‍ಎಸ್‍ಇಎಂಆರ್ ತೋಳಹುಣಸೆ ಶಾಲೆಯಿಂದ ಭಾವನ.ಜಿ, ಎನ್.ಸಿ.ಸಿ ಸೆಂಟ್ ಪಾಲ್ಸ್ ಸ್ಕೂಲ್ ಚಂದನಶ್ರೀ, ಭಾರತ್ ಸೇವಾದಳ ಜಿಲ್ಲಾ ತಂಡ ಬಿಂದು ಎಂ, ಪೊಲೀಸ್ ಪಬ್ಲಿಕ್ ಶಾಲೆಯಿಂದ ಸುಜಯ್ ಹೆಚ್ ಗೌಡ, ಪಿಎಸ್‍ಎಸ್‍ಇಎಂಆರ್ ಶಾಲೆಯಿಂದ ಮಧುಸೂಧನ ಮಾಲಿ ಪಾಟೀಲ್, ರಾಷ್ಟ್ರೋತ್ಥಾನ ಸ್ಕೂಲ್ ತನ್ಮಯ್ ದೀಕ್ಷಿತ್, ಜೈನ್ ಪಬ್ಲಿಕ್ ಸ್ಕೂಲ್ ಸಾಯಿ ನೈನ, ಬಿ.ಹೆಚ್ ಪಿ.ಎಸ್ ಶಾಲೆಯಿಂದ ಅನುಶ್ರೀ, ಎಸ್‍ಎಸ್‍ಎನ್‍ಪಿಎಸ್ ಶಾಲೆಯಿಂದ ವೇದ.ಹೆಚ್.ಎನ್, ಸೇಂಟ್ ಪಾಲ್ ಸೆಂಟ್ರಲ್ ಸ್ಕೂಲ್ ನಿಂದ ಶ್ರೀಲೇಖ, ಜವಾಹರ್ ನವೋದಯ ವಿದ್ಯಾಲಯ ಶಾಲೆಯಿಂದ ಯುವರಾಜ್, ಪುಪ್ಪಾ ಮಹಾಲಿಂಗಪ್ಪ ಶಾಲೆಯಿಂದ ಧ್ರುವ ಎಸ್ ಗೌಡ, ಕೇಂದ್ರಿಯ ವಿದ್ಯಾಲಯದಿಂದ ದಿಲೀಪ್, ಸರ್ಟಿಫೈಡ್ ಸ್ಕೂಲ್‍ನಿಂದ ಅಜಯ್, ಮೌನೇಶ್ವರಿ ಕಿವುಡ ಮತ್ತು ಮೂಗರ ಶಾಲೆಯಿಂದ ತಿಪ್ಪೇಸ್ವಾಮಿ, ಸಿದ್ಧಗಂಗಾ ಹೈಯರ್ ಪ್ರೈಮರಿ ಸ್ಕೂಲ್‍ನಿಂದ ರಶ್ಮಿ, ಭಾರತ ಸ್ಕೌಟ್ಸ್ & ಗೈಡ್ಸ್ ಡಿಸ್ಟ್ರಿಕ್ ಟ್ರೂಪ್‍ನಿಂದ ಪ್ರೇರಣಾ, ಸೇಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಿಂದ ಗೀತಾಂಜಲಿ, ಡಿಎಆರ್‍ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡದಿಂದ ರಾಷ್ಟ್ರಗೀತೆ ಸಹಿತ, ಶುಶ್ರಾವ್ಯ ವಾದ್ಯ ಪ್ರಸ್ತುತಪಡಿಸಿದರು.

ಶಿಸ್ತಿನ ಪಥಸಂಚಲನ – ಪ್ರಶಸ್ತಿ : ಯುನಿಫಾರಂ ವಿಭಾಗದಲ್ಲಿ ಡಿಎಆರ್ ಪ್ರಥಮ, ಅಗ್ನಿಶಾಮಕ ದಳ ದ್ವಿತೀಯ,

ಕಾಲೇಜು ವಿಭಾಗ ಎನ್‍ಸಿಸಿ ಡಿ.ಆರ್.ಎಂ. ವಿಜ್ಞಾನ ಕಾಲೇಜು ಪ್ರಥಮ, ಎ.ಆರ್.ಜಿ ಕಾಲೇಜು ದ್ವಿತೀಯ, ಜಿ.ಎಂ.ಐ.ಟಿ ಕಾಲೇಜು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ವಿಶೇಷ ವಿಭಾಗದಲ್ಲಿ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ತಂಡ ಪ್ರಥಮ, ಸರ್ಟಿಫೈಡ್ ಸ್ಕೂಲ್ ದ್ವಿತೀಯ, ಮೌನೇಶ್ವರಿ ಕಿವುಡ ಮತ್ತು ಮೂಗರ ಶಾಲೆ ತೃತೀಯ,

ಪ್ರೌಢಶಾಲಾ ವಿಭಾಗದಲ್ಲಿ: ಸೇಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪ್ರಥಮ, ರಾಷ್ಟ್ರೋತ್ಥಾನ ಸ್ಕೂಲ್ ದ್ವಿತೀಯ, ಪಿಎಸ್‍ಎಸ್‍ಇಎಂಆರ್ ಶಾಲೆ ತೃತೀಯ,

ಪ್ರಾಥಮಿಕ ವಿಭಾಗದಲ್ಲಿ: ಪೊಲೀಸ್ ಪಬ್ಲಿಕ್ ಶಾಲೆ ಪ್ರಥಮ, ಜೈನ್ ಪಬ್ಲಿಕ್ ಶಾಲೆ ದ್ವಿತೀಯ, ಎಸ್‍ಎಸ್‍ಎನ್‍ಪಿಎಸ್ ಶಾಲೆ ತೃತೀಯ ಸ್ಥಾನ ಲಭಿಸಿತ್ತು.

ಕಣ್ಮನ ಸೆಳೆದ ಸಾಂಸ್ಕತಿಕ ಕಾರ್ಯಕ್ರಮಗಳು: ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಅಲ್ ಇಕ್ರಾ ಶಾಲೆ, ಡಿ.ಆರ್.ಆರ್ ಶಾಲೆಗಳು, ಸೆಂಟ್ ಜಾನ್ಸ್ ಪ್ರೌಢಶಾಲೆಯ ಮಕ್ಕಳು ದೇಶಪ್ರೇಮ, ತ್ಯಾಗ, ಬಲಿದಾನದ ಸಾರವನ್ನು ಹೊಂದಿದಂತಹ ನೃತ್ಯರೂಪಕಗಳನ್ನು ಪ್ರದರ್ಶಿಸಿದ್ದು ನೋಡುಗರ ಕಣ್ಮನ ಸೆಳೆಯುವಂತಿತ್ತು.

ಡಿ.ಆರ್.ಆರ್ ಶಾಲೆಗಳ ತಂಡ ಪ್ರಥಮ ಸ್ಥಾನ, ಅಲ್ ಇಕ್ರಾ ಶಾಲೆಯ ಮಕ್ಕಳು ದ್ವಿತೀಯ ಸ್ಥಾನ, ಸೆಂಟ್ ಜಾನ್ಸ್ ಪ್ರೌಢಶಾಲೆಯ ಮಕ್ಕಳು ತೃತೀಯ ಸ್ಥಾನ ಪಡೆದರು.

Related Posts

ಗ್ರಾಹಕರಿಗೆ ಅತ್ಯಾಧುನಿಕ ಹೈಯರ್ ಇಂಡಿಯಾ ಗೃಹೋಪಯೋಗಿ ಉಪಕರಣಗಳು ಲಭ್ಯ.

ನಮ್ಮ ದಾವಣಗೆರೆ ಸೆ.(04): ಹೈಯರ್ ಇಂಡಿಯಾ ಬಗ್ಗೆ:2003ರಲ್ಲಿ ಭಾರತದಲ್ಲಿ ಸ್ಥಾಪನೆಯಾದ ಹೈಯರ್ ಅಪ್ಲೈಯನ್ಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಹೈಯರ್ ಇಂಡಿಯಾ), ಹೈಯರ್ ಸಿಂಗಾಪುರ್ ಇನ್ವೆಸ್ಟ್‌ಮೆಂಟ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದ್ದು, ಇದು ಉತ್ತಮ ಜೀವನಕ್ಕಾಗಿ ಪರಿಹಾರಗಳನ್ನು ಒದಗಿಸುವ ವಿಶ್ವದ ಪ್ರಮುಖ ಸಂಸ್ಥೆಯಾಗಿದೆ.ಸದ್ಯ,…

ಗುರುಕುಲ ವಸತಿಯುತ ಶಾಲೆಯಲ್ಲಿ ಸಂಭ್ರಮದ ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಆರೋಗ್ಯವೇ ಭಾಗ್ಯ ಸಂದೇಶ

ನಮ್ಮ ದಾವಣಗೆರೆ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಗುರುಕುಲ ವಸತಿಯುತ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಬೆಳೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗಾಭ್ಯಾಸ ಪ್ರಮುಖ…

Leave a Reply

Your email address will not be published. Required fields are marked *

You Missed

ಗ್ರಾಹಕರಿಗೆ ಅತ್ಯಾಧುನಿಕ ಹೈಯರ್ ಇಂಡಿಯಾ ಗೃಹೋಪಯೋಗಿ ಉಪಕರಣಗಳು ಲಭ್ಯ.

ಗ್ರಾಹಕರಿಗೆ ಅತ್ಯಾಧುನಿಕ ಹೈಯರ್ ಇಂಡಿಯಾ ಗೃಹೋಪಯೋಗಿ ಉಪಕರಣಗಳು ಲಭ್ಯ.

ಶುಕ್ರವಾರದ ರಾಶಿ ಭವಿಷ್ಯ 04 ಸೆಪ್ಟೆಂಬರ್ 2026

ಶುಕ್ರವಾರದ ರಾಶಿ ಭವಿಷ್ಯ 04 ಸೆಪ್ಟೆಂಬರ್ 2026

ಗುರುವಾರದ ರಾಶಿ ಭವಿಷ್ಯ 03 ಸೆಪ್ಟೆಂಬರ್ 2026

ಬುಧವಾರದ ರಾಶಿ ಭವಿಷ್ಯ 02 ಸೆಪ್ಟೆಂಬರ್ 2026

ಬುಧವಾರದ ರಾಶಿ ಭವಿಷ್ಯ 02 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 01 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 01 ಸೆಪ್ಟೆಂಬರ್ 2026

ಸೋಮವಾರದ ರಾಶಿ ಭವಿಷ್ಯ 31 ಆಗಸ್ಟ್ 2026

ಸೋಮವಾರದ ರಾಶಿ ಭವಿಷ್ಯ 31 ಆಗಸ್ಟ್ 2026

ಭಾನುವಾರದ ರಾಶಿ ಭವಿಷ್ಯ 30 ಆಗಸ್ಟ್ 2026

ಭಾನುವಾರದ ರಾಶಿ ಭವಿಷ್ಯ 30 ಆಗಸ್ಟ್ 2026

ಶನಿವಾರದ ರಾಶಿ ಭವಿಷ್ಯ 29 ಆಗಸ್ಟ್ 2026

ಶನಿವಾರದ ರಾಶಿ ಭವಿಷ್ಯ 29 ಆಗಸ್ಟ್ 2026

ಶುಕ್ರವಾರದ ರಾಶಿ ಭವಿಷ್ಯ 28 ಆಗಸ್ಟ್ 2026

ಶುಕ್ರವಾರದ ರಾಶಿ ಭವಿಷ್ಯ 28 ಆಗಸ್ಟ್ 2026

ಗುರುವಾರದ ರಾಶಿ ಭವಿಷ್ಯ 27 ಆಗಸ್ಟ್ 2026

ಗುರುವಾರದ ರಾಶಿ ಭವಿಷ್ಯ 27 ಆಗಸ್ಟ್ 2026
×