📰 ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆ: ಹೊನ್ನಾಳಿಯಲ್ಲಿ ಪೊಲೀಸ್ ಪಥಸಂಚಲನ

ಹೊನ್ನಾಳಿ (ದಾವಣಗೆರೆ) : ಮುಂಬರುವ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಶಾಂತಿ–ಸೌಹಾರ್ದಯುತವಾಗಿ ಆಚರಿಸುವ ನಿಟ್ಟಿನಲ್ಲಿ ಹಾಗೂ ಪಟ್ಟಣದಲ್ಲಿ ಕಾನೂನು–ಸುವ್ಯವಸ್ಥೆ ಕಾಪಾಡಲು ಇಂದು ಹೊನ್ನಾಳಿ ಪಟ್ಟಣದಲ್ಲಿ ಪೊಲೀಸ್ ಪಥಸಂಚಲನ ನಡೆಯಿತು.

ಈ ಪಥಸಂಚಲನವನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಶ್ರೀಮತಿ ಉಮಾ ಪ್ರಶಾಂತ್ (IPS) ಅವರ ನೇತೃತ್ವದಲ್ಲಿ ನಡೆಸಲಾಯಿತು. ಪಟ್ಟಣದ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆದಿದ್ದು, ಜನರಲ್ಲಿ ಸುರಕ್ಷತೆ ಮತ್ತು ವಿಶ್ವಾಸ ಮೂಡಿಸುವ ಉದ್ದೇಶ ಹೊಂದಿತ್ತು.

Join Whatsapp Group NammaDavangere 04
Join Whatsapp Group NammaDavangere 05

ಈ ಸಂದರ್ಭದಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಅವರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಅಹವಾಲುಗಳನ್ನು ಆಲಿಸಿದರು ಹಾಗೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ 112 ಸಹಾಯವಾಣಿಗೆ ಕರೆಮಾಡಿ ಸಹಾಯ ಪಡೆಯಲು ಜನತೆಗೆ ಮನವಿ ಮಾಡಿದರು.

ಅಲ್ಲದೆ ಇತ್ತೀಚೆಗೆ ಪ್ರಾರಂಭವಾದ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮ ಹಾಗೂ ಪೊಲೀಸ್ ಬೀಟ್ ವ್ಯವಸ್ಥೆ ಕುರಿತು ಜನರಿಗೆ ವಿವರಿಸಿದರು.

ಪಥಸಂಚಲನದಲ್ಲಿ ಚನ್ನಗಿರಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಶ್ರೀ ಸ್ಯಾಮ್ ವರ್ಗೀಸ್ (IPS), ಹೊನ್ನಾಳಿ ಪೊಲೀಸ್ ಠಾಣೆಯ ನಿರೀಕ್ಷಕ ಶ್ರೀ ಸುನೀಲ್ ಕುಮಾರ, ಠಾಣೆಯ ಸಿಬ್ಬಂದಿ, QRT ತಂಡ ಹಾಗೂ DAR ಸಿಬ್ಬಂದಿಗಳು ಭಾಗವಹಿಸಿದ್ದರು.

Related Posts

ಗ್ರಾಹಕರಿಗೆ ಅತ್ಯಾಧುನಿಕ ಹೈಯರ್ ಇಂಡಿಯಾ ಗೃಹೋಪಯೋಗಿ ಉಪಕರಣಗಳು ಲಭ್ಯ.

ನಮ್ಮ ದಾವಣಗೆರೆ ಸೆ.(04): ಹೈಯರ್ ಇಂಡಿಯಾ ಬಗ್ಗೆ:2003ರಲ್ಲಿ ಭಾರತದಲ್ಲಿ ಸ್ಥಾಪನೆಯಾದ ಹೈಯರ್ ಅಪ್ಲೈಯನ್ಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಹೈಯರ್ ಇಂಡಿಯಾ), ಹೈಯರ್ ಸಿಂಗಾಪುರ್ ಇನ್ವೆಸ್ಟ್‌ಮೆಂಟ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದ್ದು, ಇದು ಉತ್ತಮ ಜೀವನಕ್ಕಾಗಿ ಪರಿಹಾರಗಳನ್ನು ಒದಗಿಸುವ ವಿಶ್ವದ ಪ್ರಮುಖ ಸಂಸ್ಥೆಯಾಗಿದೆ.ಸದ್ಯ,…

ಗುರುಕುಲ ವಸತಿಯುತ ಶಾಲೆಯಲ್ಲಿ ಸಂಭ್ರಮದ ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಆರೋಗ್ಯವೇ ಭಾಗ್ಯ ಸಂದೇಶ

ನಮ್ಮ ದಾವಣಗೆರೆ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಗುರುಕುಲ ವಸತಿಯುತ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಬೆಳೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗಾಭ್ಯಾಸ ಪ್ರಮುಖ…

Leave a Reply

Your email address will not be published. Required fields are marked *

You Missed

ಗ್ರಾಹಕರಿಗೆ ಅತ್ಯಾಧುನಿಕ ಹೈಯರ್ ಇಂಡಿಯಾ ಗೃಹೋಪಯೋಗಿ ಉಪಕರಣಗಳು ಲಭ್ಯ.

ಗ್ರಾಹಕರಿಗೆ ಅತ್ಯಾಧುನಿಕ ಹೈಯರ್ ಇಂಡಿಯಾ ಗೃಹೋಪಯೋಗಿ ಉಪಕರಣಗಳು ಲಭ್ಯ.

ಶುಕ್ರವಾರದ ರಾಶಿ ಭವಿಷ್ಯ 04 ಸೆಪ್ಟೆಂಬರ್ 2026

ಶುಕ್ರವಾರದ ರಾಶಿ ಭವಿಷ್ಯ 04 ಸೆಪ್ಟೆಂಬರ್ 2026

ಗುರುವಾರದ ರಾಶಿ ಭವಿಷ್ಯ 03 ಸೆಪ್ಟೆಂಬರ್ 2026

ಬುಧವಾರದ ರಾಶಿ ಭವಿಷ್ಯ 02 ಸೆಪ್ಟೆಂಬರ್ 2026

ಬುಧವಾರದ ರಾಶಿ ಭವಿಷ್ಯ 02 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 01 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 01 ಸೆಪ್ಟೆಂಬರ್ 2026

ಸೋಮವಾರದ ರಾಶಿ ಭವಿಷ್ಯ 31 ಆಗಸ್ಟ್ 2026

ಸೋಮವಾರದ ರಾಶಿ ಭವಿಷ್ಯ 31 ಆಗಸ್ಟ್ 2026

ಭಾನುವಾರದ ರಾಶಿ ಭವಿಷ್ಯ 30 ಆಗಸ್ಟ್ 2026

ಭಾನುವಾರದ ರಾಶಿ ಭವಿಷ್ಯ 30 ಆಗಸ್ಟ್ 2026

ಶನಿವಾರದ ರಾಶಿ ಭವಿಷ್ಯ 29 ಆಗಸ್ಟ್ 2026

ಶನಿವಾರದ ರಾಶಿ ಭವಿಷ್ಯ 29 ಆಗಸ್ಟ್ 2026

ಶುಕ್ರವಾರದ ರಾಶಿ ಭವಿಷ್ಯ 28 ಆಗಸ್ಟ್ 2026

ಶುಕ್ರವಾರದ ರಾಶಿ ಭವಿಷ್ಯ 28 ಆಗಸ್ಟ್ 2026

ಗುರುವಾರದ ರಾಶಿ ಭವಿಷ್ಯ 27 ಆಗಸ್ಟ್ 2026

ಗುರುವಾರದ ರಾಶಿ ಭವಿಷ್ಯ 27 ಆಗಸ್ಟ್ 2026
×