ಬೆಂಗಳೂರು ಜೂಲೈ 23: ಲಕ್ಸುರಿ ಕಾರುಗಳ ಮೂಲಕ ಪ್ರಖ್ಯಾತಿ ಪಡೆದಿರುವ ಉದ್ಯಮಿ ಹಾಗೂ ರಾಜಕಾರಣಿ ಯುಸುಫ್ ಶರೀಫ್, ಜನಪ್ರಿಯವಾಗಿ “KGF ಬಾಬು” ಎಂದೇ ಗುರುತಿಸಲ್ಪಟ್ಟಿರುವ ವ್ಯಕ್ತಿಗೆ, ಕರ್ನಾಟಕದ ಸಾರಿಗೆ ಇಲಾಖೆ ₹38.26 ಲಕ್ಷ ರೋಡ್ ಟ್ಯಾಕ್ಸ್ ಪಾವತಿ ತಪ್ಪಿಸಿಕೊಂಡ ಪ್ರಕರಣದಲ್ಲಿ ದಂಡ ವಿಧಿಸಿದೆ.
Join Whatsapp Group NammaDavangere 04
Join Whatsapp Group NammaDavangere 05
🚗 ಪ್ರಕರಣದ ಹಿನ್ನಲೆ:
KGF ಬಾಬು ತಮ್ಮ ಬಳಿಯಲ್ಲಿ ಎರಡು ಹೈ ಎಂಡ್ ಕಾರುಗಳನ್ನು ಹೊಂದಿದ್ದಾರೆ:
Rolls-Royce Phantom – ಹಿಂದಿನ ಮಾಲೀಕರು: ಅಮಿತಾಭ್ ಬಚ್ಚನ್
Rolls-Royce Ghost – ಹಿಂದಿನ ಮಾಲೀಕರು: ಆಮೀರ್ ಖಾನ್

ಮಹಾರಾಷ್ಟ್ರದಲ್ಲಿ ಟ್ಯಾಕ್ಸ್ ಕಟ್ಟಿದ್ದರೂ ಈ ಎರಡು ಕಾರುಗಳನ್ನು ಖರೀದಿ ಮಾಡಿದ ನಂತರವೂ, ರಾಜ್ಯ ಸಾರಿಗೆ ಇಲಾಖೆಗೆ ಸೂಕ್ತ ತೆರಿಗೆ ಪಾವತಿಸದೆ ನಂಬರ್ ಪ್ಲೇಟ್ ಬದಲಾಯಿಸದೆ, ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳನ್ನು ಬಳಸಿದ ಕಾರಣ ಈ ದಂಡ ವಿಧಿಸಲಾಗಿದೆ. ಮುಂದೆ ಮಹಾರಾಷ್ಟ್ರ ಆರ್ ಟಿ ಓ ದಿಂದ ಮತ್ತೆ ವಾಪಾಸ್ ಪಡೆಯಬೇಕಾಗುತ್ತದೆ.
📑 ವಾಹನ ತೆರಿಗೆ ನಿಯಮಗಳು:
ಇತರೆ ರಾಜ್ಯದಿಂದ ಲಗ್ಗೆಯಿಟ್ಟ ಕಾರುಗಳನ್ನು 12 ತಿಂಗಳೊಳಗೆ ಸ್ಥಳೀಯ RTOಗೆ ನೋಂದಣಿ ಮಾಡಿಸಿ ರೋಡ್ ಟ್ಯಾಕ್ಸ್ ಪಾವತಿ ಮಾಡುವುದು ಕಡ್ಡಾಯ.
ಈ ನಿಯಮ ಉಲ್ಲಂಘನೆಯಿಂದ, ಪ್ರತಿ ಕಾರಿಗೆ ₹18.53 ಲಕ್ಷ ಹಾಗೂ ₹19.73 ಲಕ್ಷ ಸೇರಿ ₹38.26 ಲಕ್ಷ ದಂಡ ವಿಧಿಸಲಾಗಿದೆ.
👤 ಯಾರು ಈ KGF ಬಾಬು?
ಯುಸುಫ್ ಶರೀಫ್ ಅವರು ಇತ್ತೀಚೆಗೆ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
2021ರಲ್ಲಿ ಸಲ್ಲಿಸಿದ ಆಸ್ತಿಯ ವಿವರಗಳ ಪ್ರಕಾರ ಅವರ ಒಟ್ಟು ಆಸ್ತಿ ಮೌಲ್ಯ ₹1,744 ಕೋಟಿ.
ಅವರು “KGF ಬಾಬು” ಎಂದೇ ಖ್ಯಾತರಾಗಿದ್ದಾರೆ.




