ಕರ್ನಾಟಕದಲ್ಲಿ ಖಾಸಗಿ ಸಂಸ್ಥೆಗಳು ಕನ್ನಡಿಗರಿಗೆ ಉದ್ಯೋಗಗಳನ್ನು ಕಾಯ್ದಿರಿಸುವಂತೆ ನಿರ್ದೇಶಿಸುವ ಮಸೂದೆಯ ಕುರಿತು ಭಾರಿ ಕೋಲಾಹಲದ ನಡುವೆ, ರಾಜ್ಯ ಸರ್ಕಾರವು ಈಗ ಐಟಿ ಸಿಬ್ಬಂದಿಯ ಕೆಲಸದ ಸಮಯವನ್ನು ದಿನಕ್ಕೆ 14 ಘಂಟೆಗೆ ಹೆಚ್ಚಿಸಲು ನಿರ್ಧಾರ ಕೈಗೊಂಡಿದೆ ಎಂದು ಕರ್ನಾಟಕ ರಾಜ್ಯ ಐಟಿ / ಐಟಿಇಎಸ್ ನೌಕರರ ಒಕ್ಕೂಟ (ಕೆಐಟಿಯು) ತಿಳಿಸಿದೆ.
ಕರ್ನಾಟಕ ಸರ್ಕಾರ ಐಟಿ ಸಿಬ್ಬಂದಿಯು ದಿನಕ್ಕೆ 14 ಗಂಟೆಗಳ ಕೆಲಸದ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಕಾರ್ಮಿಕ ಇಲಾಖೆಯು ಉದ್ಯಮದ ವಿವಿಧ ಪಾಲುದಾರರೊಂದಿಗೆ ಕರೆದ ಸಭೆಯಲ್ಲಿ ಮಂಡಿಸಿತು.
ಈಗ ಅಸ್ತಿತ್ವದಲ್ಲಿರುವ ಕಾಯಿದೆಯು ಓವರ್‌ಟೈಮ್ ಸೇರಿದಂತೆ ದಿನಕ್ಕೆ ಗರಿಷ್ಠ 10 ಗಂಟೆಗಳ ಕೆಲಸವನ್ನು ಮಾತ್ರ ಅನುಮತಿಸುತ್ತದೆ, ಇದನ್ನು ಪ್ರಸ್ತುತ ತಿದ್ದುಪಡಿಯಲ್ಲಿ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಐಟಿ ವಲಯದ ಒಕ್ಕೂಟಗಳು ಈ ಕ್ರಮದ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟನೆಗೆ ಇಳಿದಿವೆ, ಇದು ‘ಅಮಾನವೀಯ’ ಎಂದು ಸಹ ಕರೆದಿವೆ, ಇದು ರಾಜ್ಯದ 2 ಮಿಲಿಯನ್ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ ಅಲ್ಲದೇ ಈ ಕಾಯ್ದೆ ಕಾರ್ಯಗತಗೊಂಡರೆ, ವಿಸ್ತೃತ ಕೆಲಸದ ಅವಧಿಯು ದೇಶದ ಐಟಿ ಹಬ್ ಎಂದು ಕರೆಯಲ್ಪಡುವ ರಾಜ್ಯದ ರಾಜಧಾನಿ ಬೆಂಗಳೂರಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಒಕ್ಕೂಟ ಹೇಳಿದೆ.
ಈ ತಿದ್ದುಪಡಿಯು “ಈ ಯುಗದಲ್ಲಿ ಕಾರ್ಮಿಕ ವರ್ಗದ ಮೇಲೆ ಇದುವರೆಗಿನ ಅತಿದೊಡ್ಡ ದಾಳಿ” ಎಂದು ಕರ್ನಾಟಕ ರಾಜ್ಯ ಐಟಿ / ಐಟಿಇಎಸ್ ನೌಕರರ ಒಕ್ಕೂಟ (ಕೆಐಟಿಯು) ತಿಳಿಸಿದೆ. ಕರ್ನಾಟಕ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಮತ್ತು ಕಾರ್ಮಿಕ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ, ಐಟಿ ಉದ್ಯೋಗಿಗಳಲ್ಲಿ ಹೆಚ್ಚಿನ ಕೆಲಸದ ಅವಧಿಯು ಅವರ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಯ ಮೇಲೆ ಪ್ರಭಾವ ಬೀಳುತ್ತದೆ ಇದನ್ನು ನಾವು ಒಪ್ಪವುದಿಲ್ಲ ಎಂದು ಕರ್ನಾಟಕ ರಾಜ್ಯ ಐಟಿ / ಐಟಿಇಎಸ್ ನೌಕರರ ಒಕ್ಕೂಟ (ಕೆಐಟಿಯು) ಸೂಚಿಸಿದೆ.





