ಯೆಮೆನ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ನಿಮಿಷಾ ಪ್ರಿಯಾ: ಏನಿದು ಬ್ಲಡ್‌ ಮನಿ?

ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ಕೇರಳ ಮೂಲದ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಜುಲೈ 16ರಂದು ಯೆಮೆನ್ ದೇಶದಲ್ಲಿ ಗಲ್ಲಿಗೇರಿಸಲಾಗುವುದು.

ನಿಮಿಶಾ ಪ್ರಿಯಾ 2008 ರಲ್ಲಿ ಯೆಮೆನ್‌ಗೆ ತೆರಳಿದ್ದರು. ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ, ಅವರು ಅಂತಿಮವಾಗಿ ತಮ್ಮದೇ ಸ್ವಂತ ಕ್ಲಿನಿಕ್ ಅನ್ನು ತೆರೆಯಲು ಯೋಚಿಸಿದರು, ಅಲ್ಲಿಯ ಯೆಮೆನ್ ಪ್ರಜೆಯನ್ನು ಬಿಸಿನೆಸ್ ಪಾರ್ಟ್ನರ್ ಮಾಡಿಕೊಂಡರೆ ಮಾತ್ರ ಸ್ವಂತ ಕ್ಲಿನಿಕ್ ತೆರೆಯಲು ಅವಕಾಶ ವಿರುತ್ತದೆ. 2014 ರಲ್ಲಿ ತಲಾಲ್ ಅಬ್ದೋ ಮಹ್ದಿ ಅವರನ್ನು ಕ್ಲಿನಿಕ್ ಲೈಸನ್ಸ್ ಪಡೆಯಲು ಮಾತ್ರ ನಮ್ಮ ಪಾರ್ಟ್ನರ್ ಸೀಮಿತ ಎಂದು ಅಗ್ರಿಮೆಂಟ್ ಮಾಡಿಕೊಂಡಿದ್ದಳು.

Join Whatsapp Group NammaDavangere 04
Join Whatsapp Group NammaDavangere 05

ಆದರೆ ಕೆಲವು ದಿನಗಳ ನಂತರ ತಲಾಲ್ ಅಬ್ದೋ ಮಹ್ದಿ ಅವಳಿಗೆ ಕಿರುಕುಳ ಕೊಡಲು ಶುರು ಮಾಡಿದನು, ದೈಹಿಕವಾಗಿ ಹಲ್ಲೆ ಮಾಡುವುದು ಪೀಡಿಸಿವುದು ಶುರು ಮಾಡಿದನು. ಇದನ್ನು ಸಹಿಸಲು ಅಸಾಧ್ಯ ಎಂದೆನಿಸಿದಾಗ ಅವನ ವಿರುದ್ಧ ದೂರು ದಾಖಲಿಸಿದಳು, ನಂತರ ಅವನನ್ನು 2016 ರಲ್ಲಿ ಬಂಧಿಸಲಾಯಿತು ಆದರೆ ಅವನು ಜೈಲಿನಿಂದ ಬಿಡುಗಡೆ ಆದ ನಂತರ ಅವಳಿಗೆ ಇನ್ನಷ್ಟು ಕಿರುಕುಳ ಹಾಗೂ ಬೆದರಿಕೆ ಹಾಕುವುದನ್ನು ಮುಂದುವರೆಸಿದನು ಮತ್ತು ನಿಮಿಷಾ ಪ್ರಿಯಾಳ ಎಲ್ಲ ಧಾಖಲೆಗಳನ್ನು ಹಾಗೂ ಪಾಸ್‌ಪೋರ್ಟ್ ಅನ್ನು ತನ್ನ ಬಳಿ ಇಟ್ಟುಕೊಂಡಿದ್ದನು.

ಅವನಿಂದ ಅ ಧಾಖಲೆಗಳನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಅವನಿಗೆ ಅಮಲಿನ ಡ್ರಗ್ ಚುಚ್ಚಿದಳು. ಆದರೆ, ಅದು ಓವರ್ ಡೋಸ್ ಆಗಿ ಆತ ಸಾವನ್ನಪ್ಪಿದನು. ಇದರಿಂದ ಆಕೆಯನ್ನು ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು. ಇದೆ ತಿಂಗಳು ಜೂಲೈ 16 ರಂದು ನಿಮಿಷಾ ಪ್ರಿಯಾ ಳನ್ನು ಗಲ್ಲಿಗೇರಿಸಲಾಗುವುದು.

ಏನಿದು ಬ್ಲಡ್‌ ಮನಿ?
ಬ್ಲಡ್‌ ಮನಿ ಅಂದರೆ ರಕ್ತಕ್ಕೆ ಹಣ. ಯಾರು ಕೊಲೆ ಗೀಡಾಗಿರತ್ತಾರೋ ಅವರ ತಂದೆ, ತಾಯಿ ಅಥವಾ ಕುಟುಂಬಸ್ಥರು ಕೊಲೆ ಮಾಡಿದವರನ್ನು ಇಂತಿಷ್ಟು ಹಣ ನಿಗದಿ ಮಾಡಿ ಅವರನ್ನು ಕ್ಷಮಿಸೋದು. ಹಾಗೇ ಅವರು ಎಷ್ಟು ಹಣ ಕೇಳುತ್ತಾರೋ ಅಷ್ಟು ಹಣವನ್ನು ಹತ್ಯೆ ಮಾಡಿದವರ ಕುಟುಂಬ ಕೊಡಬೇಕು ಮತ್ತು ಅದನ್ನು ಅವರು ಒಪ್ಪಿಕೊಂಡರೆ ಮರಣದಂಡನೆ ಶಿಕ್ಷೆ ರದ್ದಾಗುತ್ತದೆ. ಇದನ್ನು ಬ್ಲಡ್‌ ಮನಿ ಎಂದು ಕರೆಯುತ್ತಾರೆ.

Related Posts

ಐಫೋನ್ ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಎಲ್ಲರ ಮನಸ್ಸನ್ನು ಕಲಕುವಂತಿದೆ. “ಐಫೋನ್ ಕೊಡಿಸಲಿಲ್ಲ ಎಂದು ಯುವಕ ಸಾವಿಗೆ ಶರಣು, ಮಗನನ್ನು ರಕ್ಷಿಸಲು ಹೋಗಿ ತಂದೆ-ತಾಯಿಯೂ ಬಲಿ” ಎಂಬ ಶೀರ್ಷಿಕೆ ಕೇಳಿದರೆ ಯಾರಿಗಾದರೂ ಆಘಾತವಾಗುತ್ತದೆ.ಒಂದು ಮೊಬೈಲ್ ಫೋನ್ಗಾಗಿ ಇಡೀ ಕುಟುಂಬವೇ…

ಬಾಲ್ಯ ವಿವಾಹ ನಿಷೇಧ ಕುರಿತ ಚಿಂತನಾ-ಮಂಥನ ಕಾರ್ಯಗಾರ

ನಮ್ಮ ದಾವಣಗೆರೆ ಆ.22: ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಅವಿರತವಾಗಿ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ…

Leave a Reply

Your email address will not be published. Required fields are marked *

You Missed

ಶುಕ್ರವಾರದ ರಾಶಿ ಭವಿಷ್ಯ 04 ಸೆಪ್ಟೆಂಬರ್ 2026

ಶುಕ್ರವಾರದ ರಾಶಿ ಭವಿಷ್ಯ 04 ಸೆಪ್ಟೆಂಬರ್ 2026

ಗುರುವಾರದ ರಾಶಿ ಭವಿಷ್ಯ 03 ಸೆಪ್ಟೆಂಬರ್ 2026

ಬುಧವಾರದ ರಾಶಿ ಭವಿಷ್ಯ 02 ಸೆಪ್ಟೆಂಬರ್ 2026

ಬುಧವಾರದ ರಾಶಿ ಭವಿಷ್ಯ 02 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 01 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 01 ಸೆಪ್ಟೆಂಬರ್ 2026

ಸೋಮವಾರದ ರಾಶಿ ಭವಿಷ್ಯ 31 ಆಗಸ್ಟ್ 2026

ಸೋಮವಾರದ ರಾಶಿ ಭವಿಷ್ಯ 31 ಆಗಸ್ಟ್ 2026

ಭಾನುವಾರದ ರಾಶಿ ಭವಿಷ್ಯ 30 ಆಗಸ್ಟ್ 2026

ಭಾನುವಾರದ ರಾಶಿ ಭವಿಷ್ಯ 30 ಆಗಸ್ಟ್ 2026

ಶನಿವಾರದ ರಾಶಿ ಭವಿಷ್ಯ 29 ಆಗಸ್ಟ್ 2026

ಶನಿವಾರದ ರಾಶಿ ಭವಿಷ್ಯ 29 ಆಗಸ್ಟ್ 2026

ಶುಕ್ರವಾರದ ರಾಶಿ ಭವಿಷ್ಯ 28 ಆಗಸ್ಟ್ 2026

ಶುಕ್ರವಾರದ ರಾಶಿ ಭವಿಷ್ಯ 28 ಆಗಸ್ಟ್ 2026

ಗುರುವಾರದ ರಾಶಿ ಭವಿಷ್ಯ 27 ಆಗಸ್ಟ್ 2026

ಗುರುವಾರದ ರಾಶಿ ಭವಿಷ್ಯ 27 ಆಗಸ್ಟ್ 2026

ಬುಧವಾರದ ರಾಶಿ ಭವಿಷ್ಯ 26 ಆಗಸ್ಟ್ 2026

ಬುಧವಾರದ ರಾಶಿ ಭವಿಷ್ಯ 26 ಆಗಸ್ಟ್ 2026
×