ಸೂರ್ಯ ಘರ್ ಬಿಜಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ, ವಿದ್ಯುತ್ ಬಿಲ್ ಉಳಿತಾಯ ಮಾಡಿ.

ದಾವಣಗೆರೆ, ಡಿ. 10: ಸೋಲಾರ್ ರೂಫ್ ಟಾಪ್ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಸರ್ಕಾರ ಪಿಎಂ ಸೂರ್ಯಘರ್ ಮುಪ್ತ್ ಬಿಜಲಿ ಯೋಜನೆ ರೂಪಿಸಿದೆ. ಗ್ರಾಹಕರು ಯೋಜನೆಗೆ ನೊಂದಾಯಿಸಿಕೊಂಡು ಮನೆಯಲ್ಲಿ ಉಚಿತ ವಿದ್ಯುತ್ ಪಡೆದು ಖರ್ಚು ಕಡಿಮೆ ಮಾಡಿಕೊಳ್ಳಬಹುದೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

Join Whatsapp Group NammaDavangere 04
Join Whatsapp Group NammaDavangere 05

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಪಿಎಂ ಸೂರ್ಯಘರ್ ಮುಪ್ತ್ ಬಿಜಲಿ ಯೋಜನೆಯ ಕುರಿತಂತೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಯೋಜನೆ ಅಡಿಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು, ಮಾನದಂಡ ವೆಚ್ಚದ ಶೇ.60% ರಷ್ಟು ಸಹಾಯಧನ ರೂಪದಲ್ಲಿ ಒದಗಿಸಲಾಗುತ್ತದೆ. 1ಕಿಲೋವ್ಯಾಟ್‍ಗೆ ರೂ.30 ಸಾವಿರ ರೂಪಾಯಿ, 2 ಕಿಲೋವ್ಯಾಟ್‍ಗೆ ರೂ.60 ಸಾವಿರ ರೂಪಾಯಿ ಮತ್ತು 3 ಕಿಲೋವ್ಯಾಟ್‍ಗೆ ರೂ.78 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು, ತಮಗೆ ಸಾಕಾಗುವಷ್ಟು ವಿದ್ಯುತ್ ಬಳಸಿದ ಮೇಲೆ ವಿದ್ಯುತ್‍ನ್ನು ಬೆಸ್ಕಾಂಗೆ ಮಾರಾಟ ಮಾಡಲು ಅವಕಾಶ ಇದೆ.

ಈ ಯೋಜನೆಯ ಲಾಭ ಪಡೆಯಲು ಯಾವುದೇ ಆರ್ಥಿಕ ಮಿತಿ ಇರುವುದಿಲ್ಲ. ಎಲ್ಲಾ ವರ್ಗದ ಗ್ರಾಹಕರು ನೊಂದಣಿ ಮಾಡಿಕೊಳ್ಳಬಹುದಾಗಿದೆ. ತಮ್ಮ ಮನೆ ಆರ್‍ಸಿಸಿ ಹೊಂದಿ ಕನಿಷ್ಠ 10/10 ಸ್ಥಳಾವಕಾಶ ಇದ್ದಲ್ಲಿ ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಫೋಟೋದೊಂದಿಗೆ pmsuryaghar.gov.in ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ನೊಂದಣಿ ಮಾಡಿಕೊಳ್ಳಬಹುದು, ರೂ.1500 ನೊಂದಣಿ ಶುಲ್ಕವಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ತಿಪ್ಪೇಸ್ವಾಮಿ ಎ.ಕೆ ಹಾಗೂ ವಿವಿಧ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Posts

ಸ್ಪ್ಯಾಮ್ (SPAM) ಇ-ಮೇಲ್‌ಗಳಿಂದ ರಕ್ಷಣೆ ಹೇಗೆ?

ನಮ್ಮ ದಾವಣಗೆರೆ ಸೆ.10: ಸ್ಪ್ಯಾಮ್ (SPAM) ಎಷ್ಟು ವ್ಯಾಪಕವಾಗಿದೆ? “ಅಧ್ಯಯನಗಳ ಪ್ರಕಾರ, ಬಳಕೆದಾರರು ಸ್ವೀಕರಿಸುವ ಒಟ್ಟು ಇ-ಮೇಲ್‌ಗಳಲ್ಲಿ ಸುಮಾರು ಅರ್ಧದಷ್ಟು ಇ-ಮೇಲ್‌ಗಳು ಯಾವುದೇ ಆಹ್ವಾನ ಅಥವಾ ಬೇಡಿಕೆ ಇಲ್ಲದೆ ಕಳುಹಿಸಲಾಗುವ ‘ಜಂಕ್ ಇ-ಮೇಲ್‌ಗಳು’ ಅಥವಾ ಸ್ಪ್ಯಾಮ್ ಆಗಿವೆ. ಒಂದು ಕಾಲದಲ್ಲಿ ಸ್ಪ್ಯಾಮ್…

ಗ್ರಾಹಕರಿಗೆ ಅತ್ಯಾಧುನಿಕ ಹೈಯರ್ ಇಂಡಿಯಾ ಗೃಹೋಪಯೋಗಿ ಉಪಕರಣಗಳು ಲಭ್ಯ.

ನಮ್ಮ ದಾವಣಗೆರೆ ಸೆ.(04): ಹೈಯರ್ ಇಂಡಿಯಾ ಬಗ್ಗೆ:2003ರಲ್ಲಿ ಭಾರತದಲ್ಲಿ ಸ್ಥಾಪನೆಯಾದ ಹೈಯರ್ ಅಪ್ಲೈಯನ್ಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಹೈಯರ್ ಇಂಡಿಯಾ), ಹೈಯರ್ ಸಿಂಗಾಪುರ್ ಇನ್ವೆಸ್ಟ್‌ಮೆಂಟ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದ್ದು, ಇದು ಉತ್ತಮ ಜೀವನಕ್ಕಾಗಿ ಪರಿಹಾರಗಳನ್ನು ಒದಗಿಸುವ ವಿಶ್ವದ ಪ್ರಮುಖ ಸಂಸ್ಥೆಯಾಗಿದೆ.ಸದ್ಯ,…

Leave a Reply

Your email address will not be published. Required fields are marked *

You Missed

ಭಾನುವಾರದ ರಾಶಿ ಭವಿಷ್ಯ 13 ಸೆಪ್ಟೆಂಬರ್ 2026

ಭಾನುವಾರದ ರಾಶಿ ಭವಿಷ್ಯ 13 ಸೆಪ್ಟೆಂಬರ್ 2026

ಶನಿವಾರದ ರಾಶಿ ಭವಿಷ್ಯ 12 ಸೆಪ್ಟೆಂಬರ್ 2026

ಶನಿವಾರದ ರಾಶಿ ಭವಿಷ್ಯ 12 ಸೆಪ್ಟೆಂಬರ್ 2026

ಶುಕ್ರವಾರದ ರಾಶಿ ಭವಿಷ್ಯ 11 ಸೆಪ್ಟೆಂಬರ್ 2026

ಶುಕ್ರವಾರದ ರಾಶಿ ಭವಿಷ್ಯ 11 ಸೆಪ್ಟೆಂಬರ್ 2026

ಹಿರಿಯ ನಾಗರಿಕರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ

ಹಿರಿಯ ನಾಗರಿಕರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ

ಸ್ಪ್ಯಾಮ್ (SPAM) ಇ-ಮೇಲ್‌ಗಳಿಂದ ರಕ್ಷಣೆ ಹೇಗೆ?

ಸ್ಪ್ಯಾಮ್ (SPAM) ಇ-ಮೇಲ್‌ಗಳಿಂದ ರಕ್ಷಣೆ ಹೇಗೆ?

ಗುರುವಾರದ ರಾಶಿ ಭವಿಷ್ಯ 10 ಸೆಪ್ಟೆಂಬರ್ 2026

ಗುರುವಾರದ ರಾಶಿ ಭವಿಷ್ಯ 10 ಸೆಪ್ಟೆಂಬರ್ 2026

ಬುಧವಾರದ ರಾಶಿ 09 ಸೆಪ್ಟೆಂಬರ್ 2026

ಬುಧವಾರದ ರಾಶಿ 09 ಸೆಪ್ಟೆಂಬರ್ 2026

ಸೆ.9 ನಾಳೆಯಿಂದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ 2026

ಸೆ.9 ನಾಳೆಯಿಂದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ 2026

ಮಂಗಳವಾರದ ರಾಶಿ ಭವಿಷ್ಯ 08 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 08 ಸೆಪ್ಟೆಂಬರ್ 2026

ಸೋಮವಾರದ ರಾಶಿ ಭವಿಷ್ಯ 07 ಸೆಪ್ಟೆಂಬರ್ 2026

ಸೋಮವಾರದ ರಾಶಿ ಭವಿಷ್ಯ 07 ಸೆಪ್ಟೆಂಬರ್ 2026
×