ಜನರ ಅಭಿಪ್ರಾಯ: ಕರ್ನಾಟಕದಲ್ಲಿರುವ ಕೈಗಾರಿಕೆ ಹಾಗೂ ಕಂಪನಿಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಬಗ್ಗೆ

ನಮ್ಮ ದಾವಣಗೆರೆ ಜು. 22: ಕರ್ನಾಟಕದಲ್ಲಿರುವ ಕೈಗಾರಿಕೆ ಹಾಗೂ ಕಂಪನಿಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳೇನು ನಮಗೆ ಬರೆದು ಕಳಿಸಿ ಎಂದು ಕೇಳಿಕೊಂಡಿದ್ದೆವು, ನಮಗೆ ಸುಮಾರು ಮೆಸೇಜ್ ಗಳು ಹಾಗೂ ಇಮೇಲ್ ಗಳು ತಲುಪಿದವು, ಅದರಲ್ಲಿ ಕೆಲವೊಂದು ಆಯ್ದ ಜನಾಭಿಪ್ರಾಯಗಳು. ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಮೊದಲ ಆದ್ಯತೆ ಕೊಡಬೇಕು ಎಂಬುದೇ ಬಹಳಷ್ಟು ಜನರ ಅಭಿಪ್ರಾಯವಾಗಿದೆ.

ರಾಜ್ಯದಲ್ಲಿ ಖಾಸಗಿ ಕ್ಷೇತ್ರದ ಸಂಸ್ಥೆಗಳಲ್ಲಿ ಶೇ 50-75ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸುವ ಮಸೂದೆಗೆ ಸಂಪುಟ ಅನುಮೋದನೆ ನೀಡಿದೆ. ಸದ್ಯದಲ್ಲೇ ಇದು ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.

ಮೀಸಲಾತಿಗೆ ಯಾರು ಅರ್ಹರು?

ಕರ್ನಾಟಕದಲ್ಲಿ ಹುಟ್ಟಿದವರು, ಕರ್ನಾಟಕದಲ್ಲಿ 15 ವರ್ಷಗಳಿಂದ ವಾಸಿಸುತ್ತಿರುವವರು, ಕನ್ನಡ ಭಾಷೆಯಲ್ಲಿ ಮಾತಾಡಲು, ಓದಲು ಹಾಗೂ ಬರೆಯಲು ಬರುವವರು ಅಲ್ಲದೇ ನೋಡಲ್ ಏಜೆನ್ಸಿಗಳು ನಡೆಸುವ ಕನ್ನಡ ಭಾಷಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವವರು ಈ ಮೀಸಲಾತಿಗೆ ಅರ್ಹರಿರಲಿದ್ದಾರೆ.

ಮಂಜು ಭಗತ್:
ಬೇರೆ ರಾಜ್ಯದಿಂದ ಬಂದು ನಮ್ ರಾಜ್ಯದಲ್ಲಿ ನೆಲೆಯೂರೋ ಕೈಗಾರಿಕೆಗಳು ಹಾಗೂ ಕಂಪನಿಗಳು ನಮ್ ಕನ್ನಡಿಗರಿಗೆ ಆದ್ಯತೆ ನೀಡುವುದು ಅವಶ್ಯಕ ಯಾಕಂದ್ರೆ ಬೇರೆ ರಾಜ್ಯದೋರು ನಮ್ ರಾಜ್ಯಕ್ಕೆ ಬಂದು ಉದ್ಧಾರ ಆಗ್ತಿದ್ದಾರೆ ಹಾಗೆ ನಮ್ ಕನ್ನಡಿಗರಿಗೆ ಆದ್ಯತೆ ನೀಡಿದರೆ ನಮ್ ರಾಜ್ಯದ ನಿರೋಧ್ಯಗ ಸಮಸ್ಯೆಗೆ ನಿವಾರಣೆ ಆಗೋದಕ್ಕೆ ಸಹಾಯವಾಗುತ್ತದೆ.

ಸಂತೋಷ್ ಜಿ:
ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಕನ್ನಡಿಗರಿಗೆ ಮೊದಲ ಆದ್ಯತೆ ದೊರೆಯಬೇಕು. ಎಷ್ಟೋ ಸರ್ಕಾರೀ ಸಾಮ್ಯದ ಬ್ಯಾಂಕ್ ಗಳಲ್ಲಿ ಸುಮಾರು ಜನ ಉತ್ತರ ಭಾರತದವರೇ ತುಂಬಿದ್ದಾರೆ, ಅವರಿಗೆ ಕನ್ನಡ ಬರಲ್ಲ ನಮಗೆ ಹಿಂದಿ ಗೊತ್ತಾಗಲ್ಲ, ಹಾಗಾಗಿ ಕನ್ನಡಿಗನೇ ಸಾರ್ವಾಭೌಮ.

ಸುನಿಲ್ ಶೆಟ್ಟಿ:

ಮೊದಲು ಕೈಗಾರಿಕೆಗಳಿಗೆ ಆದ್ಯತೆ ನೀಡಿ ಕರ್ನಾಟಕಕ್ಕೆ ಬಂದ ಮೇಲೇ ಶೇಕಡಾ ಇಷ್ಟು ಅಂತ ಕನ್ನಡಿಗರಿಗೆ ಕೊಡಲೇಬೇಕು.

ಗಂಗಜ್ಜಿ. ನಾಗರಾಜ್:
ಕರ್ನಾಟಕದಲ್ಲಿರುವ ಕೈಗಾರಿಕೆಗಳಿಗೆ ಹಾಗೂ ಕಂಪನಿಗಳಿಗೆ ಕರ್ನಾಟಕದ ನೆಲ, ಜಲ, ಖನಿಜ ಸಂಪನ್ಮೂಲಗಳು ಬೇಕು ಆದ್ರೆ ಕನ್ನಡಿಗರಿಗೆ ಮೊದಲ ಆದ್ಯತೆ ಇಲ್ಲಾ ಅಂದ್ರೆ ಹೇಗೆ. ನೂರಕ್ಕೆ ಕನಿಷ್ಠ 80 ರಷ್ಟು ಆದ್ರು ಕನ್ನಡಿಗರಿಗೆ ಆದ್ಯತೆ ನೀಡಬೇಕು. ಪ್ರಸ್ತುತ ಸರ್ಕಾರ ಕನ್ನಡಿಗರ ಪರವಾಗಿದೆ ನೆಲ ಜಲ ಭಾಷೆ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ.

ಶಿವು ಎಚ್:
ಕರ್ನಾಟಕದಲ್ಲಿ ಕನ್ನಡಿಗರಿಗಲ್ಲದೆ ಇನ್ನಾರಿಗೆ ಉದ್ಯೋಗ, ಕನ್ನಡಿರಿಗೆ ಉದ್ಯೋಗ ಇದೊಂದು ಉತ್ತಮ ನಿರ್ಧಾರ.

ಶಿವಾಜಿ ಮರಾಠ:
ಕರ್ನಾಟಕದಲ್ಲಿರುವ ಕೈಗಾರಿಕೆಗಳಿಗೆ ಹಾಗೂ ಕಂಪನಿಗಳಿಗೆ ಕರ್ನಾಟಕದ ಜನರ ಆಯ್ಕೆ ಒಳ್ಳೆಯದೇ… ಆದರೆ ಕೈಗಾರಿಕೆಗಳಿಗೆ ಉತ್ತಮ ಕೆಲಸಗಾರರು ಬೇಕು, ಅವರು ಬಂಡವಾಳ ಹೂಡಿರುತ್ತಾರೆ… ಹಾಗಾಗಿ ಉತ್ತಮ ಕೆಲಸದವರು ಇಲ್ಲದಿದ್ದರೆ ಕೈಗಾರಿಕೆಗಳು ಕರ್ನಾಟಕವನ್ನೇ ತೊರೆಯುವ ಸಂದರ್ಭ ಒದಗಿ ಬಂದರೆ ಕಷ್ಟ ವಾಗುತ್ತದ್ದೆ.

ಸಮರ್ಥ್ ರಾಯ್:
ಕರ್ನಾಟಕದ ನೆಲ, ಜಲ, ಖನಿಜ ಸಂಪನ್ಮೂಲಗಳು ಕನ್ನಡಿಗನಿಗೇ ಮೀಸಲು. ನಮ್ಮ ನಾಡು… ನಮ್ಮ ಹಕ್ಕು… ನಮಗೇ ಕೆಲಸದಲ್ಲಿ ಮೊದಲ ಆದ್ಯತೆ. ಜೈ ಕರ್ನಾಟಕ.

ಹರ್ಷಿತ ವಿ. ಬಿ
ಕರ್ನಾಟಿಕ್ದಲ್ಲಿ ಕನ್ನಡಿಗರಿಗೆ 75% ಕೆಲಸ ಕೊಡಬೇಕು, ಬೇರೆಯವರಿಗೆ 25% ಕೊಡಬೇಕು. ಕಾನ್ನಡಿಗರಿಗೆ ಮೊದಲ ಆದ್ಯತೆ ಇರಬೇಕು. ಜೈ ಕರ್ನಾಟಕ….

ಸೈಯದ್ ನೂರ್:
ನಮ್ಮ ಕನ್ನಡ ಜನಕ್ಕೆ ಮೊದಲು ಕೆಲಸ ಕೊಡಬೇಕು , ಇಲ್ಲವಾದಲ್ಲಿ ಕನ್ನಡಿಗರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರ… ನಮ್ಮಾ ಜನ … ನಮ್ಮ ಜಲ ಮುಖ್ಯ.

ಮಂಜಣ್ಣ ಬ್ಯಾಡಗಿ:
ನಾವು ಕರ್ನಾಟಕದವರು ಶಾಂತಿ ಪ್ರಿಯರು. ನಮ್ಮ ಕಾರ್ರ್ನಾಟಕದವರಿಗೆ 80% ಕೆಲಸ ಕೊಡಲೇ ಬೇಕು. ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ ಅಷ್ಟೇ. 

ಕನ್ನಡ ಕುಮಾರ:
ಕನ್ನಡಿಗರಿಗೆ ಕೆಲಸ…. ಭಿಕ್ಷೆ ಅಲ್ಲ… ನಮ್ಮ ಹಕ್ಕು… ನಮ್ಮ ಹಕ್ಕನ್ನು ಯಾರಿಂದಲೂ ಯಾವ ಸರ್ಕಾರದಿಂದಲೋ ಕಸಿದು ಕೊಳ್ಳಲು ಸಾಧ್ಯವಿಲ್ಲ.

ನಾಗರಾಜ್ ಎಸ್. ಜಿ.:
ಕನ್ನಡಿಗರು ಮನವಿ ಮಾಡೋದಲ್ಲಾ…ಆದೇಶ ಮಾಡುತ್ತಿದ್ದೇವೆ, ನಮ್ಮ ಕರ್ನಾಟಕದ ಜನತೆಗೆ ಬೇಕು ಕೆಲಸ… ಕೆಲಸ… ಕೆಲಸ ಅಷ್ಟೇ…

ಚೈತ್ರ ಎಂ. ಜಿ.:
ಕನ್ನಡಿಗರಿಗೆ ಕಡ್ಡಾಯ ಉದ್ಯೋಗದಲ್ಲಿ ಮೀಸಲಾತಿ ಕಾನೂನನ್ನು ತರಲೆಬೇಕು. ಕನ್ನಡಿಗರ 40 ವರ್ಷದ ಕನಸು ನನಸಾಗುತ್ತದ್ದೆ ಎಂಬುದು ನನ್ನ ಆಶಯ.

ರವಿ ಪೂಜಾರಿ:
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ವಿಧೇಯಕ ವಿಧಾನಮಂಡಲದ ಉಭಯದ ಅಧಿವೇಶನಗಳಲ್ಲಿ ಮಂಡನೆಯಾಗಿ ಅಂಗೀಕಾರಆಗಲೇಬೇಕು…. ಜೈ ಕರ್ನಾಟಕ

ಸಮೀರ್ ಹಸ್ಸನ್:
ಭಾರತ ದಾದ್ಯಂತ ನಮ್ಮ ಅಭಿಯಾನ ಸದ್ದು ಮಾಡುತ್ತಿದೆ, ಸಡ್ಡು ಹೊಡೆದಿದೆ. ಕನ್ನಡಿಗರಿಗೆ ಮೊದಲ ಆದ್ಯತೆ ದೊರೆಯಲಿ ಎಂಬುದೇ ನಮ್ಮ ಆಶಯ.

ಭರದ್ವಾಜ ಸತ್ಯ:
ಕರ್ನಾಟಕದ ಜಮೀನು, ನೀರು ಸಂಪನ್ಮೂಲ, ಮೂಲಭೂತ ಸೌಕರ್ಯಗಳು,ರಿಯಾಯಿತಿ ಪಡೆದು ಕೊಬ್ಬಿರುವ ಬಲಿತ ಕನ್ನಡ ವಿರೋಧಿ ಉದ್ಯಮಿಗಳು ಲಾಭಿ, ಒತ್ತಡದ ಮೂಲಕ ಕರ್ನಾಟಕ ಸರ್ಕಾರದ ಕೈಕಟ್ಟುವಹಂತಕ್ಕೆ ತಲುಪಿದ್ದಾರೆ, ಇವರಿಗೆ ನಮ್ಮದೊಂದು ಛೀ ಮಾರಿ.

ಬ್ಯಾಡಗಿ ಶಂಕರ:
ಕನ್ನಡಿಗರ ಬಹುದಿನಗಳ ಕನಸು ನನಸಾಗಬೇಕು. ಕನ್ನಡ ನಾಡಿನ ಜನ ನಿರುದ್ಯೋಗ ಸಮಸ್ಯೆಯಿಂದ ನರಳುವುದು ತಪ್ಪುತ್ತದೆ. ಕೈ ತುಂಬಾ ಸಂಬಳ ಕನ್ನಡ ಮಕ್ಕಳು ಪಡೆಯಲಿ.

ರಾಜಶೇಖರ್ ರಾವ್:
ಜನಪ್ರತಿನಿಧಿಗಳು ಸರ್ವಾನುಮತದಿಂದ ಈ ವಿಧೇಯಕವನ್ನು ಅನುಮೋದಿಸಿ, ಅಂಗೀಕಾರ ಕೊಟ್ಟರೆ ಕರ್ನಾಟಕದ ಜನತೆಗೆ ಬಹಳ ಒಳ್ಳೆಯದಾಗುತ್ತದೆ. ನಮ್ಮ ರಾಜ್ಯದ ಕೆಲಸ ಗಳು ನಮ್ಮ ಜನಕ್ಕೆ ಸಿಗುವಂತಾಗಲಿ.

ಪ್ರಸಾದ್ ನಾಯಕ್:
ಕೇವಲ ಸಿ. ಮತ್ತು ‌ಡಿ. ಅಲ್ಲ. ಎಲ್ಲಾ ಹಂತದ ಉದ್ಯೋಗದಲ್ಲೂ ಕರ್ನಾಟಕದವರಿಗೆ ಪ್ರಾಮುಖ್ಯತೆ ಸಿಗಬೇಕು. ಈ ಹೋರಾಟ ನಮ್ಮ ಗುರಿ ಮುಟ್ಟುವವರೆಗೂ ನಿಲ್ಲಬಾರದು. ನಾವೆಲ್ಲ ಒಂದು ನಾವೆಲ್ಲ ಕನ್ನಡ ತಾಯಿಯ ಮಕ್ಕಳು. ಜೈ ಕರ್ನಾಟಕ.. ಜೈ ಹಿಂದ್ \

ಉಮೇಶ್ ಗೌಡ:
ಒಬ್ಬ ಸಾಮಾನ್ಯ ಕನ್ನಡಿಗ ಹೇಗೆ ಬದಲಾಗಿದ್ದಾನೆ ನೋಡಿ. ಈ ಮಟ್ಟದಲ್ಲಿ ಅವನಿಗೆ ಕನ್ನಡತನ ಅರಿವಾಗಿರೋದು ಕನ್ನಡನಾಡಿಗೆ ಚೇತೋಹಾರಿ ಸಂಗತಿ. ನಮ್ಮ ಹಕ್ಕನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ.

ದೇವರಾಜ್ ಕನ್ನಡಿಗ:
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸುತ್ತಿರುವ ಎಲ್ಲರನ್ನು ಕರ್ನಾಟಕದಿಂದ ಹೊರಗೆ ಹಾಕಿ, ನಮ್ಮ ಜಲ ಮತ್ತು ನಮ್ಮ ಸಂಪತ್ತನ್ನು ಕೊಳ್ಳೆಹೊಡೆಯ್ತಿದ್ದಾರೆ. ಆದರೆ ನಮಗೆ ಮಾತ್ರ ಕೆಲಸ ಕೊಡುವುದಿಲ್ಲ ವೆಂದರೆ ಹೇಗೆ? ಇದು ಅನ್ಯಾಯ… ಅನ್ಯಾಯ…

ರಜನಿ ಶಾ:
ಕನ್ನಡಿಗರಿಗೆ 70% ಮೀಸಲಾತಿ ಕೆಲಸ ಸಿಗುವುದು ಕಷ್ಟ ಸಾಧ್ಯ. ಅದಕ್ಕಾಗಿಯೇ ಕಾನೂನು ಆಗಲೇಬೇಕು ಮತ್ತು ಕನ್ನಡಿಗರಾದ ನಾವೆಲ್ಲ ಹೋರಾಡಲೇ ಬೇಕು.

ಸಂತೋಷ್ ಸರ್ಕಾರ್:
ನಾನು ಕರ್ನಾಟಕದವನೇ, ಆದರೆ ಮೀಸಲಾತಿ ಕೆಲಸಕ್ಕೆ ನನ್ನ ವಿರೋಧವಿದೆ. ಏಕೆಂದರೆ ಬಂಡವಾಳ ಹೂಡಿ ಒಂದು ಕಂಪನಿ ಮಾಡಿ ಅದರಲ್ಲಿ ನನಗೆ ಇಷ್ಟ ಆದವರನ್ನು ನಾನು ಆಯ್ಕೆ ಮಾಡಲಿಲ್ಲ ವೆಂದರೆ ಮುಂದಿನ ದಿನ ನನ್ನ ಕಂಪನಿಯನ್ನು ನಾನೇ ಮುಚ್ಚ ಬೇಕಾಗುತ್ತದೆ. ನನ್ನ ಕಂಪನಿ…. ನನ್ನ ಆಯ್ಕೆ….

ಜಹಾಂಗೀರ್ ಪಾಷಾ:
ಕನ್ನಡಿಗರ ಹಕ್ಕು ಆಶೂತ್ತರಗಳಿಗೆ ತಡೆ ಹಾಕುವವ ನಾಡ ದ್ರೋಹಿ! ಸರ್ಕಾರದ ಜೊತೆ ಜೊತೆಯಾಗಿ ಕಾನೂನು ಅನುಷ್ಠಾನ ವಾಗಲೇ ಬೇಕು. ಇಲ್ಲದಿದ್ದರೆ ಹೊರ ರಾಜ್ಯದವರ ಹಾವಳಿ ಬಹಳ ವಾಗುತ್ತದ್ದೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ.

ಸಿದ್ದನಗೌಡ ಟಿ. ಆರ್,:
ಮೀಸಲಾತಿ ಸಾದ್ಯವಿಲ್ಲ, ಏಕೆಂದರೆ ವಿವಿಧತೆಯಿಂದ ಕೂಡಿದ ಸಂಸ್ಕೃತಿಯ ನಾಡು ನಮ್ಮ ಕರ್ನಾಟಕ ,ಹೈದರಾಬಾದ್ ಕರ್ನಾಟಕ,ಕರಾವಳಿ ಕರ್ನಾಟಕ,ಮದ್ಯ ಕರ್ನಾಟಕ,ಬೆಳಗಾವಿಯಲ್ಲಿ ಮರಾಠಿ ಮಿಶ್ರಿತ ಕರ್ನಾಟಕ,ಮೈಸೂರು ಕರ್ನಾಟಕ,ಆಂಧ್ರ ತಮಿಳುನಾಡು ಗಡಿ ಗುರುತಿಸುವ ಕರ್ನಾಟಕ,ಹಾಗಾಗಿ ಕರ್ನಾಟಕ ಎಂಬ ಸೂತ್ರದ ಅಡಿಯಲ್ಲಿ ಅಖಂಡ ಭಾರತದ ಭಾಗವಾಗಲಿ ಕರ್ನಾಟಕ. ಅದನ್ನು ಬಿಟ್ಟು ಕೆಲಸದಲ್ಲಿ ಕಂಪನಿ ಯಲ್ಲಿ ಮೀಸಲಾತಿ ಒಳ್ಳೆಯದಲ್ಲ ಎಂಬುದು ನನ್ನ ಆಶಯ.

ರಂಜಿತಾ ರಾಣಿ:
ಕನ್ನಡ ನೆಲ ಮೂಲದ ರಾಜ-ರಾಣಿ-ಕವಿ-ಸಂತ-ಸಾಧಕರ ಅರಿವು ಮೂಡಿಸುವ ಕೆಲಸ ಮಾಡಬೇಕು. ಕಾವೇರಿ, ಕೃಷ್ಣ, ಮಹದಾಯಿ ವಿವಾದಗಳು, ಮಹಾರಾಷ್ಟ್ರ & ಕೇರಳ ಗಡಿವಿವಾದ,
ಪರರಾಜ್ಯದವರ ಅತಿಕ್ರಮಣ & ದಬ್ಬಾಳಿಕೆ, ಪರಭಾಷಾ ಹೇರಿಕೆ, ಕರ್ನಾಟಕದ ಕೆಲಸಗಳು ಕನ್ನಡಿಗರಿಗೆ ಮಾತ್ರ ಇಂತಹ ಸಮಸ್ಯೆಗೆ ಪರಿಹರಿಸಲು ಆನೆಬಲ ಬತ್ತದೆ.

ರಾಜೇಶ್ ಹುರುಜಿ:
ಮೀಸಲಾತಿ ಒಳೆಯದಲ್ಲ ಏಕೆಂದರೆ ನಾಳೆ ಆ ಕಂಪನಿ ನಮ್ಮ ಕರ್ನಾಟಕದಿಂದ ಜಾಗ ಕಾಲಿ ಮಾಡಿದ್ರೆ ಕೆಲ್ಸಾ ಮಾಡ್ತಾ ಇರೋ ವ್ಯಕ್ತಿ ಮತ್ತು ಅವನ ಕುಟುಂಬಕ್ಕೆ ಯಾರು ಸಂಬಳ ಕೊಡ್ತಾರೆ? ಇಲ್ಲೇ ಇರೋರಿಗೆ ಕನ್ನಡ ಕಲಿಸಲು ಸರಕಾರ ಹೆದರಿ ಸಾಯಿತ ಇದೆ, ಬೇರೆ ರಾಜ್ಯದವರಿಗೆ ಕನ್ನಡ ಕಲಿಸೋ ಆಲೋಚನೆ ಮಾಡ್ತಾ ಇದ್ದೀರಿ, ಹೀಗಿರುವಾಗ ಮೀಸಲಾತಿ ಒಳ್ಳೆಯದಲ್ಲ.

ಅಮರ್ನಾಥ್ ಭಟ್ಟಾಚಾರ್ಯ:
ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸಬೇಕು.

ಭೀಮಣ್ಣ ಉಪಾಧ್ಯಾಯ:
“ಕರ್ನಾಟಕದಲ್ಲಿನ ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ“ ದೊರಕಲಿ ಬೇಕು.
ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಪರಿಗಣಿಸಿ, ಖಾಸಗಿ ಕ್ಷೇತ್ರದಲ್ಲಿ ಸಿ ಮತ್ತು ಡಿ ದರ್ಜೆಯ ಉದ್ಯೋಗಗಳಿಗೆ ಕನ್ನಡಿಗರಿಗೆ 100% ಮೀಸಲಾತಿ ಕಾನೂನು ಬರಲೇಬೇಕು. ಇದು ನಮ್ಮ ಹಕ್ಕು ಸಹ ಆಗಿದೆ.

ತಾಜ್ ಉದ್ದೀನ್:
ದಯವಿಟ್ಟು ಮೀಸಲಾತಿ ವಿಷಯದ ಬಗ್ಗೆ ಕ್ರಮ ತೆಗೆದುಕೊಂಡು ಕರ್ನಾಟಕ ದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಿ ಎಂದು ನಾವು ವಿನಂತಿ ಸಿಕೊಳ್ಳುತ್ತೇನೆ. ನಮ್ಮ ಕನ್ನಡ ಜನಕ್ಕೆ ಉದ್ಯೋಗ ದೊರೆಯಬೇಕು.

ನಿತಿನ್ ರಾಮಾಚಾರಿ :
ನಮ್ಮ ಕನ್ನಡಮ್ಮನ ಮಕ್ಕಳಿಗೆ ಮೊದಲು ಕೆಲಸ ಸಿಗುವ ರೀತಿ ಮಾಡಿ. ಸ್ಕಿಲ್ ಡೆವಲಪ್ಮೆಂಟ್ ಸ್ಕೀಮ್ ತನ್ನಿ, ಸರೋಜಿನಿ ಮಹಿಷಿ ಜಾರಿಗೆ ತನ್ನಿ. ಮನೆ ಕಟ್ಟುವ, ಎಲೆಕ್ಟ್ರಿಕ್, ಪ್ಲಮ್ಬಿಂಗ್, ಟೈಲ್ಸ್ ಕೆಲಸ ಗಳಿಗೆ ಟ್ರೈನಿಂಗ್ ಕೊಡಿ. ಕಡಿಮೆ ಓದಿರುವ ಕನ್ನಡಿಗರಿಗೆ ಕೆಲ್ಸಾ ಬೆಂಗಳೂರಿನಲ್ಲಿ ಸಿಗಲಿ.

ರಜತ್ ರಾಮಿ:
ಕೆಲಸ ಇಲ್ಲದ ಮೂರು ಜನ ಕರ್ನಾಟಕದ ನನ್ನ ಸ್ನೇಹಿತರು ಬೆಂಗಳೂರಿನಲ್ಲಿ ಇದ್ದಾರೆ. ಅವರಿಗೆ ಇಲ್ಲಿಯವರೆಗೂ ಒಬ್ಬ ರೆಫರೆನ್ಸ್ ಕೊಟ್ಟಿಲ್ಲ, ಬೇರೆ ಸ್ಕಿಲ್ ಟ್ರೈನ್ ಮಾಡಿಸಿ ಒಳಗೂ ತಗೊಂಡಿಲ್ಲ. ಅದೇ ನಾನು ನೋಡಿದ ಹಾಗೆ ತೆಲುಗು ತಮಿಳು ಮಲಯಾಳಿ ಮತ್ತು ಉತ್ತರದ ಜನಕ್ಕೆ ರೆಫ್ಯಾರೆನ್ಸ್ ಸಿಗುತ್ತೆ..ಕೆಲಸನೂ ಸಿಗುತ್ತೆ. ಇದು ಬೆಂಗಳೂರಿನಲ್ಲಿ ಕನ್ನಡಿಗರ ಸಾಫ್ಟವೇರ್ ಕೆಲಸದ ಕತೆ ಹಾಗೂ ಕನ್ನಡಿಗರ ವ್ಯಥೆ.

ಸೂರ್ಯದೇಸಾಯ್:
ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಅಂದರೆ ಅರ್ಥ ಇಷ್ಟೇ ಒಗ್ಗಟ್ಟು ಇಲ್ಲ, ಅಭಿಮಾನ ಇಲ್ಲ, ಭಾಷಾ ಪ್ರೀತಿ ಇಲ್ಲ, ಸಹಾಯ ಮಾಡೋ ಬುದ್ಧಿ ಇಲ್ಲ ಹಾಗೂ ಅಹಂಕಾರ ಜಾಸ್ತಿ ಉಂಟು.

ಸಹನಾ ಸುಂದರ್ :
ನಾನು ನೋಡಿದ ಪ್ರಕಾರ ಚಿಕ್ಕಮಗಳೂರು, ಕೊಡಗು, ಮಂಗಳೂರು ಮತ್ತು ಉಡುಪಿಯಲ್ಲಿ ಹಲವು ಉದ್ಯೋಗ ಖಾಲಿ ಇವೆ. ಅಲ್ಲಿನ ಮನೆ, ತೋಟ ಮತ್ತು ಇತರ ಕಡೆ ಕೆಲಸ ಖಾಲಿ ಇದೆ. ಯಾರೂ ಇತ್ತ ಮುಖ ಮಾಡುವುದಿಲ್ಲ. ಹೆಚ್ಚಿನವರಿಗೆ ಬೆಂಗಳೂರಿನಲ್ಲಿ ಕೆಲಸ ಬೇಕು. ಇದು ಹೇಗೆ ಸಾಧ್ಯ? ಹಾಗಾಗಿ ಕನ್ನಡಿಗರಿಗೆ ಮೀಸಲಾತಿ ಎಂದು ಹೊಡೆದಾಡುತ್ತಾರೆ ಅಷ್ಟೇ.

Related Posts

ಬುಧವಾರದ ರಾಶಿ ಭವಿಷ್ಯ 18 ಫೆಬ್ರವರಿ 2026

ಈ ರಾಶಿಯವರಿಗೆ ದಂಪತಿ ಕಲಹಗಳು ಕೊನೆಗೊಳ್ಳುವುದು ಯಾವಾಗ?ಅಂತೂ ಇಂತೂ ಈ ರಾಶಿಯವರ ಕಂಕಣ ಬಲ ಕೂಡಿ ಬಂತು, ಬುಧವಾರದ ರಾಶಿ ಭವಿಷ್ಯ 18 ಫೆಬ್ರವರಿ 2026 ಸೂರ್ಯೋದಯ – 6:44 ಬೆ.ಸೂರ್ಯಾಸ್ತ – 6:15 ಸಂಜೆ ಶಾಲಿವಾಹನ ಶಕೆ -1947ಸಂವತ್-2081ವಿಶ್ವಾವಸು ನಾಮ…

ನವಂಬರ್ 18 ರಂದು ದಾವಣಗೆರೆಯ ವಿವಿಧಢೆ ವಿದ್ಯುತ್ ವ್ಯತ್ಯಯ

ನಮ್ಮ ದಾವಣಗೆರೆ ನ. 17: ಕಾಡಜ್ಜಿ ಮತ್ತು ಮೇಳ್ಳೆಕಟ್ಟೆ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ನವಂಬರ್ 18 ರಂದು ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ Join Whatsapp Group NammaDavangere…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×