📰 ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆ: ಹೊನ್ನಾಳಿಯಲ್ಲಿ ಪೊಲೀಸ್ ಪಥಸಂಚಲನ

ಹೊನ್ನಾಳಿ (ದಾವಣಗೆರೆ) : ಮುಂಬರುವ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಶಾಂತಿ–ಸೌಹಾರ್ದಯುತವಾಗಿ ಆಚರಿಸುವ ನಿಟ್ಟಿನಲ್ಲಿ ಹಾಗೂ ಪಟ್ಟಣದಲ್ಲಿ ಕಾನೂನು–ಸುವ್ಯವಸ್ಥೆ ಕಾಪಾಡಲು ಇಂದು ಹೊನ್ನಾಳಿ ಪಟ್ಟಣದಲ್ಲಿ ಪೊಲೀಸ್ ಪಥಸಂಚಲನ ನಡೆಯಿತು.

ಈ ಪಥಸಂಚಲನವನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಶ್ರೀಮತಿ ಉಮಾ ಪ್ರಶಾಂತ್ (IPS) ಅವರ ನೇತೃತ್ವದಲ್ಲಿ ನಡೆಸಲಾಯಿತು. ಪಟ್ಟಣದ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆದಿದ್ದು, ಜನರಲ್ಲಿ ಸುರಕ್ಷತೆ ಮತ್ತು ವಿಶ್ವಾಸ ಮೂಡಿಸುವ ಉದ್ದೇಶ ಹೊಂದಿತ್ತು.

Join Whatsapp Group NammaDavangere 04
Join Whatsapp Group NammaDavangere 05

ಈ ಸಂದರ್ಭದಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಅವರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಅಹವಾಲುಗಳನ್ನು ಆಲಿಸಿದರು ಹಾಗೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ 112 ಸಹಾಯವಾಣಿಗೆ ಕರೆಮಾಡಿ ಸಹಾಯ ಪಡೆಯಲು ಜನತೆಗೆ ಮನವಿ ಮಾಡಿದರು.

ಅಲ್ಲದೆ ಇತ್ತೀಚೆಗೆ ಪ್ರಾರಂಭವಾದ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮ ಹಾಗೂ ಪೊಲೀಸ್ ಬೀಟ್ ವ್ಯವಸ್ಥೆ ಕುರಿತು ಜನರಿಗೆ ವಿವರಿಸಿದರು.

ಪಥಸಂಚಲನದಲ್ಲಿ ಚನ್ನಗಿರಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಶ್ರೀ ಸ್ಯಾಮ್ ವರ್ಗೀಸ್ (IPS), ಹೊನ್ನಾಳಿ ಪೊಲೀಸ್ ಠಾಣೆಯ ನಿರೀಕ್ಷಕ ಶ್ರೀ ಸುನೀಲ್ ಕುಮಾರ, ಠಾಣೆಯ ಸಿಬ್ಬಂದಿ, QRT ತಂಡ ಹಾಗೂ DAR ಸಿಬ್ಬಂದಿಗಳು ಭಾಗವಹಿಸಿದ್ದರು.

Related Posts

ಬೋರ್ಡ್ ಗೇಮ್ಸ್: ಆಟಕ್ಕಿಂತ ಹೆಚ್ಚು ಜನರನ್ನು ಒಟ್ಟಿಗೆ ಸೇರಿಸುವ ಒಂದು ಆಕ್ಟಿವಿಟಿ

ನಾವು ಬೋರ್ಡ್ ಗೇಮ್ಸ್ ಎಂದಾಗ, ನಮ್ಮಲ್ಲಿ ಹಲವರಿಗೆ ಚಿಕ್ಕಂದಿನಲ್ಲಿ ಆಡುತ್ತಿದ್ದ ಚೆಸ್, ಕ್ಯಾರಂ, ಲುಡೋ ಅಥವಾ ಸ್ನೇಕ್ಸ್ ಅಂಡ್ ಲ್ಯಾಡರ್ಸ್ ನೆನಪಾಗಬಹುದು. ಆದರೆ ಇಂದಿನ ಬೋರ್ಡ್ ಗೇಮಿಂಗ್ ಇಷ್ಟಕ್ಕೇ ಸೀಮಿತವಾಗಿಲ್ಲ. ಇಂದು ಸ್ಟ್ರಾಟಜಿ, ಕ್ರಿಯೇಟಿವಿಟಿ,ಕಮ್ಯುನಿಕೇಶನ್, ಆಬ್ಸರ್ವೇಶನ್, ಪ್ರಾಬ್ಲಮ್-ಸಾಲ್ವಿಂಗ್, ಟೀಮ್‌ವರ್ಕ್ ಮತ್ತು ಮುಖ್ಯವಾಗಿ…

ದಾವಣಗೆರೆಗೆ ಮೊದಲ ಬಾರಿಗೆ ಬರುತ್ತಿದ್ದೀರಾ? ತಿಳಿದುಕೊಳ್ಳಬೇಕಾದ 10 ವಿಷಯಗಳು

ನಮ್ಮ ದಾವಣಗೆರೆ: ದಾವಣಗೆರೆಗೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದೀರಾ? ಉದ್ಯೋಗ, ಶಿಕ್ಷಣ, ವ್ಯಾಪಾರ, ಪ್ರವಾಸ, ಚಿಕಿತ್ಸೆ ಅಥವಾ ಬೇರೆ ಯಾವುದಾದರೂ ಕಾರಣಕ್ಕಾಗಿ ದಾವಣಗೆರೆಗೆ ಬರುತ್ತಿದ್ದರೆ, ನಗರದ ಬಗ್ಗೆ ಕೆಲವು ಮೂಲಭೂತ ಮಾಹಿತಿಗಳನ್ನು ತಿಳಿದುಕೊಂಡಿರುವುದು ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಲಭವಾಗಿಸುತ್ತದೆ.ಕರ್ನಾಟಕದ ಮಧ್ಯಭಾಗದಲ್ಲಿರುವ ದಾವಣಗೆರೆ…

Leave a Reply

Your email address will not be published. Required fields are marked *

You Missed

ಸೋಮವಾರದ ರಾಶಿ ಭವಿಷ್ಯ 19 ಅಕ್ಟೋಬರ್ 2026

ಸೋಮವಾರದ ರಾಶಿ ಭವಿಷ್ಯ 19 ಅಕ್ಟೋಬರ್ 2026

ಭಾನುವಾರದ ರಾಶಿ ಭವಿಷ್ಯ 18 ಅಕ್ಟೋಬರ್ 2026

ಶನಿವಾರದ ರಾಶಿ ಭವಿಷ್ಯ 17 ಅಕ್ಟೋಬರ್ 2026

ಶನಿವಾರದ ರಾಶಿ ಭವಿಷ್ಯ 17 ಅಕ್ಟೋಬರ್ 2026

ಶುಕ್ರವಾರದ ರಾಶಿ ಭವಿಷ್ಯ 16 ಅಕ್ಟೋಬರ್ 2026

ಶುಕ್ರವಾರದ ರಾಶಿ ಭವಿಷ್ಯ 16 ಅಕ್ಟೋಬರ್ 2026

ಗುರುವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2026

ಗುರುವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2026

ಬುಧವಾರದ ರಾಶಿ ಭವಿಷ್ಯ 14 ಅಕ್ಟೋಬರ್ 2026

ಬುಧವಾರದ ರಾಶಿ ಭವಿಷ್ಯ 14 ಅಕ್ಟೋಬರ್ 2026

ಸೋಮವಾರದ ರಾಶಿ ಭವಿಷ್ಯ 12 ಅಕ್ಟೋಬರ್ 2026

ಸೋಮವಾರದ ರಾಶಿ ಭವಿಷ್ಯ 12 ಅಕ್ಟೋಬರ್ 2026

ಭಾನುವಾರದ ರಾಶಿ ಭವಿಷ್ಯ 11 ಅಕ್ಟೋಬರ್ 2026

ಭಾನುವಾರದ ರಾಶಿ ಭವಿಷ್ಯ 11 ಅಕ್ಟೋಬರ್ 2026

ಶುಕ್ರವಾರದ ರಾಶಿ ಭವಿಷ್ಯ 09 ಅಕ್ಟೋಬರ್ 2026

ಶುಕ್ರವಾರದ ರಾಶಿ ಭವಿಷ್ಯ 09 ಅಕ್ಟೋಬರ್ 2026

ಗುರುವಾರದ ರಾಶಿ ಭವಿಷ್ಯ 08 ಅಕ್ಟೋಬರ್ 2026

ಗುರುವಾರದ ರಾಶಿ ಭವಿಷ್ಯ 08 ಅಕ್ಟೋಬರ್ 2026
×