
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಬಗ್ಗೆ ಚರ್ಚಿಸಲಾಯಿತು. ಒಬಿಸಿ ಮೀಸಲಾತಿ ಹೆಚ್ಚಿಸುವಂತೆ ಜಯಪ್ರಕಾಶ್ ಹೆಗ್ಡೆ ಆಯೋಗದಿಂದ ಶಿಫಾರಸು ಮಾಡಲಾಗಿದೆ ಎಂಬ ಸುದ್ದಿ ಇದೆ.
ಒಬಿಸಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಶಿಫಾರಸು ಮಾಡಲಾಗುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು ಮಾಡಿದ್ರೆ ಒಬಿಸಿ ವರ್ಗದವರಿಗೆ ಹೆಚ್ಚಿನ ಲಾಭವಾಗಲಿದೆ. ಮುಸ್ಲಿಂ, ಒಕ್ಕಲಿಗ, ಲಿಂಗಾಯತರ ಮೀಸಲಾತಿ ಹೆಚ್ಚಳಕ್ಕೆ ಪ್ರಯತ್ನಿಸಲಾಗುತ್ತಿದೆ ಎಂಬ ಗುಮಾನಿ ಇದೆ.
Join Whatsapp Group NammaDavangere 04
Join Whatsapp Group NammaDavangere 05
ಒಬಿಸಿ ಮೀಸಲಾತಿಯನ್ನು ಶೇಕಡಾ 32 ರಿಂದ ಶೇಕಡಾ 51 ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಅದೇ ರೀತಿ ಹಾಲಿ ಇರುವ ಪ್ರವರ್ಗ 1 ಬದಲಿಗೆ ಪ್ರವರ್ಗ A, ಪ್ರವರ್ಗ B ರಚನೆಗೆ ಶಿಫಾರಸು ಮಾಡಲಾಗಿದೆ. ಜತೆಗೆ, ಪ್ರವರ್ಗ 1ಎಗೆ ಶೇ 6, 1ಬಿಗೆ ಶೇ 12, 2ಎಗೆ ಶೇ 10 (ಹಿಂದಿನ ಮೀಸಲಾತಿ 15%), 2ಬಿಗೆ ಶೇ 8ರಷ್ಟು (ಹಿಂದಿನ ಮೀಸಲಾತಿ 04%), 3ಎಗೆ ಶೇ 7ರಷ್ಟು (ಹಿಂದಿನ ಮೀಸಲಾತಿ 04%), 3ಬಿಗೆ ಶೇ 8ರಷ್ಟು (ಹಿಂದಿನ ಮೀಸಲಾತಿ 05%), ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗಿದೆ.
ಪ್ರವರ್ಗ 1ಕ್ಕೆ ಶೇ 4, 2ಎಗೆ ಶೇ 15, 2ಬಿಗೆ ಶೇ 4, 3ಎಗೆ ಶೇ 4ರಷ್ಟು, 3ಬಿಗೆ ಶೇ 5, ಎಸ್‌ಸಿಗೆ ಶೇ 17.15, ಎಸ್‌ಟಿಗೆ ಶೇ 6.95ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗಿದೆ.
ಪ್ರಸ್ತುತ ಒಟ್ಟು ಮೀಸಲಾತಿ ಪ್ರಮಾಣ ಶೇಕಡಾ 66 ರಷ್ಟಿದೆ. ಈಗ ಅದನ್ನು ಶೇಕಡಾ 85.1 ರಸ್ತು ಏರಿಸಲಾಗುತ್ತಿದೆ. ಕೆಲ ಜಾತಿಗಳನ್ನು ಕಾಯಕದ ಆಧಾರದಲ್ಲಿ 1 A ಗೆ ವರ್ಗೀಕರಿಸಲು ಶಿಫಾರಸು ಮಾಡಲಾಗಿದೆ. ಪ್ರವರ್ಗ 1 ಹಾಗೂ 2A ನಲ್ಲಿ ಇದ್ದ ಕೆಲ ಸಮುದಾಯಗಳನ್ನು ಹಾಲಿ ಸಾಮಾಜಿಕ ಪರಿಸ್ಥಿತಿ ಆಧರಿಸಿ 1 B ಗೆ ವರ್ಗಿಕರಿಸಲು ಶಿಫಾರಸು ಮಾಡಲಾಗಿದೆ.
