
ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡಿರುವ ವಕ್ಫ್ ನೋಟಿಸ್ ವಾಪಸ್ ಪಡೆಯುಲು ಸೂಚಿಸಿದ್ದಾರೆ. ಇದೀಗ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕರ್ನಾಟಕದಲ್ಲಿ 50,000 ಎಕರೆಗೂ ಹೆಚ್ಚು ರೈತರ ಭೂಮಿಯನ್ನು ವಕ್ಫ್ ಬೋರ್ಡ್ ಅಕ್ರಮವಾಗಿ ವಶಪಡಿಸಿಕೊಂಡಿದೆ ಹಾಗೂ ಸಿದ್ದರಾಮಯ್ಯನವರೇ ವಕ್ಫ್ ಅದಾಲತ್ ನಡೆಸಲು ಯಾವ ಕಾನೂನಿನಲ್ಲಿ ಹೇಳಿದೆ ತಿಳಿಸಿ ಎಂದು ತೇಜಸ್ವಿ ಸೂರ್ಯ ಕೇಳಿದ್ದಾರೆ.
Join Whatsapp Group NammaDavangere 04
Join Whatsapp Group NammaDavangere 05
ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ವಕ್ಫ್ ಸಚಿವ ಜಮೀರ್ ಅಹಮದ್ ಎಲ್ಲಾ ಜಿಲ್ಲೆಗಳಿಗೆ ವಕ್ಫ್ ಅದಾಲತ್ ಮಾಡುತ್ತಿದ್ದಾರೆ. ವಕ್ಪ್ ಅದಾಲತ್ ಗೆ ಯಾವ ಕಾನೂನಿನ ಮಾನ್ಯತೆ ಇದೆ? ವಕ್ಪ್ ಅದಾಲತ್ ಯಾವ ಕಾನೂನಿನ ಕೆಳಗೆ ಬರಲಿದೆ? ಸಂವಿಧಾನದ ಯಾವ ವಿಧಿಯ ಕೆಳಗೆ ವಕ್ಫ್ ಅದಾಲತ್ ನಡೆಸಬಹುದು? ವಕ್ಫ್ ಅದಾಲತ್ ಕಾಂಗ್ರೆಸ್ ಪಕ್ಷದ ಅನ್ವೇಷಣೆ ಹಾಗೂ ಹಿಂದೂ ವಿರೋಧಿ. ವಕ್ಪ್ ಅದಾಲತ್ ನಿಲ್ಲಿಸುವವರೆಗೆ ಬಿಜೆಪಿ ಹೋರಾಟ ನಡೆಸುತ್ತದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಕಾಂಗ್ರೆಸ್ ಬಸ್ ಫ್ರೀ ಕೊಡ್ತಾರೆ, ಹೆಣ್ಣುಮಕ್ಕಳಿಗೆ 2000 ಕೊಡುತ್ತಾರೆ ಹಾಗೂ ವಿದ್ಯುತ್ ಬಿಲ್ ಫ್ರೀ ಮಾಡುತ್ತಾರೆ ಎಂದು ಜನ ಕಾಂಗ್ರೆಸ್ ಗೆ ವೋಟ್ ಹಾಕಿದರೆ ನಿಮ್ಮ ಜಾಮೀನು, ಮನೆ ಹಾಗೂ ದೇವಸ್ಥಾನಗಳನ್ನು ಕಳೆದುಕೊಳ್ಳುವ ಪ್ರಮೇಯ ಬರಿತ್ತದೆ ಹುಷಾರ್ ಎಂದಿದ್ದಾರೆ.
ಕೇಂದ್ರ ಸರ್ಕಾರ ವಕ್ಪ್ ಕಾಯ್ದೆಗೆ ತಿದ್ದುಪಡಿ ತರಲು ಜೆಪಿಸಿ ಮಾಡಿದೆ. ಈಜಿಪ್ಟ್, ಸಿಂಗಾಪುರದಲ್ಲಿ ಈಗಾಗಲೇ ವಕ್ಪ್ ನಿಷೇಧ ಮಾಡಿದ್ದಾರೆ. ನಾವ್ಯಾರೂ ವಕ್ಪ್ ಬ್ಯಾನ್ ಮಾಡಿ ಅಂತಾ ಹೇಳುತ್ತಿಲ್ಲ, ಅವರ ಜಮೀನೂ ಕೇಳುತ್ತಿಲ್ಲ. ನಿಮಗೆ ನ್ಯಾಯಯುತವಾಗಿರುವುದನ್ನುಇಟ್ಟುಕೊಳ್ಳಿ, ನಮ್ಮ ಜಾಗಕ್ಕೆ ಬರಬೇಡಿ ಅಂತಾ ಅಷ್ಟೇ ನಾವು ಹೇಳುವುದು ಎಂದು ತಿಳಿಸಿದ್ದಾರೆ.