ಸಾಂಸ್ಕೃತಿಕ ರಾಯಭಾರಿಗಳಿಗೊಂದು ಸಲಾಂ: ಲೇಖಕರು ಗಂಗಜ್ಜಿ ನಾಗರಾಜ್

ಮಠದ ಪಾಟೀಲ್ ಪ್ರಕಾಶ್ ನಮ್ಮ ಭಾಗದಲ್ಲಿ ಎಂ. ಪಿ. ಪ್ರಕಾಶ್ ಎಂದೇ ಪ್ರಖ್ಯಾತಿ ಪಡೆದ ನೇರ ನುಡಿಯ ರಾಜಕಾರಣಿಗಳು, ರಾಜಕೀಯವೆಂಬ ಸಾಗರದಲ್ಲಿ ನಿಸ್ಕಲ್ಮಷ ಮನಸ್ಸಿನ ದೋಣಿಯನ್ನು ನಿಷ್ಠೆ ಪ್ರಾಮಾಣಿಕತೆ ಯಿಂದ ದಡ ಸೆರೆಸುವ ಧೀಮಂತ ನಾವಿಕರು, ಹಂಪಿ ವಿಶ್ವವಿದ್ಯಾಲಯ ಹಾಗೂ ಹಂಪಿ ಉತ್ಸವದ ರೂವಾರಿಗಳು ನಾಡುಕಂಡ ಧೀಮಂತ ನಾಯಕರು ಸಾಂಸ್ಕೃತಿಕ ಲೋಕವನ್ನು ಶ್ರೀಮಂತ ಗೊಳಿಸಿದ ಸಿರಿವಂತರು ಕರ್ನಾಟಕ ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾಗಿ ಹಲವಾರು ಖಾತೆಯನ್ನು ನಿಭಾಯಿಸಿದ ನನ್ನ ನೆಚ್ಚಿನ ರಾಜಕೀಯ ಗುರುಗಳಿಗೆ 84 ನೇ ಹುಟ್ಟುಹಬ್ಬದ ಸಂಭ್ರಮ.

ಎಂ. ಪಿ. ಪ್ರಕಾಶ್ ಸಾಹೇಬ್ರು ಅವರು (1940-2011) ಕರ್ನಾಟಕದ ಹಿರಿಯ ರಾಜಕಾರಣಿಗಳು. ಪ್ರಕಾಶ್ ರವರು ಈಗಿನ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಜುಲೈ 11-1940 ರಂದು ಜನಿಸಿದರು. ಪ್ರಕಾಶ್ ಅವರು ಎಂ.ಎ, ಎಲ್. ಎಲ್. ಬಿ. ಪದವಿ ಪಡೆದಿದ್ದು ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನ ಕಥೆ ಕಾದಂಬರಿಯನ್ನ ನಾಟಕಗಳನ್ನು ರಚಿಸಿದ್ದಾರೆ. ಅಗೆಯೇ ಅನೇಕ ನಾಟಕಗಳಲ್ಲೂ ನಟನೆ ಕೂಡ ಮಾಡಿ ಜನ ಮಾನಸದಲ್ಲಿ ಪ್ರಕಾಶ್ ಅವರು ಒಬ್ಬ ಕಲಾವಿದರು ಆಗಿ ಉಳಿದರು.

ಪ್ರಕಾಶ್ ಸಾಹೇಬ್ರುರವರ ತಾಯಿಯ ತವರೂರು ಮಾಗಳ.ನಾರಾಯಣದೇವರಕೆರೆ ಹುಟ್ಟೂರಾದರು ಹೂವಿನಹಡಗಲಿ ಅವರಿಗೆ ತವರಿನಷ್ಟು ಪ್ರೀತಿ ಮತ್ತು ಕಾಳಜಿ ಕೂಡ. ಬೆಂಗಳೂರುನಲ್ಲಿ ಎಂ.ಎ ಪದವಿ ಪಡೆದ ಸಾಹೇಬ್ರು ಎಲ್. ಎಲ್. ಬಿ ಕಾನೂನಿನ ಪದವಿಯನ್ನು ಬೊಂಬಾಯ್ನಲ್ಲಿ ಪಡೆದರು. ಪ್ರಕಾಶ್ ಸಾಹೇಬ್ರು ಅವರು ತಮ್ಮ ನೆಚ್ಚಿನ ಸಂಗಾತಿಯೊಂದಿಗೆ 1963 ರಲ್ಲಿ ರುದ್ರಾಂಬ ಅವರೊಂದಿಗೆ ವಿವಾಹವಾದರು. ನಂತರ 1964ರಲ್ಲಿ ತಮ್ಮ ಇಷ್ಟದ ವಕೀಲ ವೃತ್ತಿಯನ್ನು ಆರಂಭಿಸಿದರು. ಪ್ರಕಾಶ್ ಸಾಹೇಬ್ರುಗೆ ಎಂ. ಪಿ. ರವೀಂದ್ರ, ಲತಕ್ಕ, ವೀಣಕ್ಕ, ಸುಮಕ್ಕ, ಎಂಬ ನಲ್ಮೆಯ ಮಕ್ಕಳು ಜನಿಸಿದರು.ಪ್ರಕಾಶ್ ರವರ ಸಹಪಾಠಿಗಳಾಗಿದ್ದ ಮಾಜಿ ಶಾಸಕ ಸೋಮಪ್ಪ, ಇ. ಟಿ. ಶಂಭುನಾಥ್, ಜೊತೆಗೂಡಿ ಕಿತ್ ಅಂಡ್ ಕಿನ್ ಸಂಘ ಸ್ಥಾಪನೆ ಮಾಡಿದರು. ಹೂವಿನಹಡಗಲಿಯಲ್ಲಿ ರಾಜಕೀಯವನ್ನು ಪ್ರಾರಂಭಿಸಿದ ಪ್ರಕಾಶ್ ಅವರು ಹೂವಿನ ಹಡಗಲಿಯನ್ನು ರಾಜ್ಯದಲ್ಲಿ ಗುರುತಿಸುವಂತ ಅಪೂರ್ವ ಸಾಧನೆಮಾಡಿದರು. 1978 ರಲ್ಲಿ ಜನತಾ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧೆಮಾಡಿ ಪರಾಜಿತರಾದರು. 1979ರಲ್ಲಿ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಗೆ ಸ್ಪರ್ಧೆಮಾಡಿದಾಗ ಪರಾಜಯವಾಯಿತು. ಸೋಲು ಗೆಲುವನ್ನು ಲೆಕ್ಕಿಸದ ಪ್ರಕಾಶ್ ಸಾಹೇಬ್ರು 1983 ರಲ್ಲಿ ಜನತಾ ಪಕ್ಷ ದಿಂದ ಗೆದ್ದು ವಿಧಾನಸಭೆಗೆ ಪ್ರವೇಶಿಸಿದರು. ಆಗಿನ ರಾಮಕೃಷ್ಣ ಹೆಗ್ಗಡೆಯವರ ಮಂತ್ರಿ ಮಂಡಲದಲ್ಲಿ ಸಾರಿಗೆ ಮತ್ತು ಕಾರ್ಮಿಕ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದರು. ಪ್ರಕಾಶ್ ಅವರ ರಾಜಕಾರಣ ಯುವಕರಿಗೆ ಹಾಗೂ ಹಿರಿಯರಿಗೆ ಪ್ರೇರಣೆಯಾಗಿತ್ತು. ನಂತರ 2004ರಲ್ಲಿ ಧರಂಸಿಂಗ್ ರವರ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾದರು. ನಂತರ ಉಪಮುಖ್ಯಮಂತ್ರಿಗಳಾಗಿ ಅಪಾರ ಕೊಡುಗೆಯನ್ನು ನೀಡಿದರು. ಇವರ ರಾಜಕಾರಣ ನಿರಂತರವಾಗಿದ್ದು 2008 ರಲ್ಲಿ ಕಾಂಗ್ರೇಸ್ ಗೆ ಸೇರಿದರು. ನಂತರ ಹಡಗಲಿಯಲ್ಲಿ ಸ್ಪರ್ಧೆ ಮಾಡಿ ಪರಾಜಿತರಾದರು. ಪ್ರಕಾಶ್ ಅವರು ರಾಜಕೀಯ ಜೀವನದ ಸೋಲು ಗೆಲುವುಗಳನ್ನು ಏರು ಪೇರುಗಳನ್ನು ಚನ್ನಾಗಿ ಬಲ್ಲವರಾಗಿದ್ದರು. ಜನತಾ ಪರಿವಾರದಲ್ಲಿ ಕೆಲವು ಆಂತರಿಕ ಭಿನ್ನಭಿಪ್ರಾಯಗಳಿಂದ ಬೇಸತ್ತು 2008 ರಲ್ಲಿ ಶ್ರೀಮತಿ ಸೋನಿಯಾಗಾಂಧಿ ಯವರ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರಿದರು.ನಂತರ ಹರಪನಹಳ್ಳಿಯಲ್ಲಿ ಸ್ಪರ್ಧೆ ಮಾಡಿ ಸೋಲು ಕಂಡರೂ. ನಿರಂತರವಾಗಿ ಸೋಲು ಗೆಲುವಿನ ರಾಜಕಾರಣದಲ್ಲಿ ಧೀಮಂತ ನಾಯಕನೆಂದೇ ಪ್ರಖ್ಯಾತಿ ಪಡೆದರು.ಪ್ರಕಾಶ್ ಅವರು ಸಾರಿಗೆ,ಕಾರ್ಮಿಕ, ಕನ್ನಡ ಮತ್ತು ಸಂಸ್ಕೃತಿ ವಾರ್ತಾ ಮತ್ತು ಪ್ರವಾಸೋದ್ಯಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಕಾನೂನು ಮತ್ತು ಸಂಸದೀಯ ವ್ಯವಹಾರ ಕಂದಾಯ ಮತ್ತು ಮುಜರಾಯಿ ಗೃಹ, ಉಪಮುಖ್ಯಮಂತ್ರಿ ಗಳಾಗಿಯೂ ಸೇವೆ ಸಲ್ಲಿಸಿದರು.

ಬಿಡುವಿನ ವೇಳೆಯಲ್ಲಿ ನಾಟಕ, ಕ್ರೀಡೆ, ಮತ್ತಿತರ ಸಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ರಂಗಭೂಮಿಯಲ್ಲಿ ಮೇರು ಕಲಾವಿದರಾದಾಗ್ಯೂ ತಮ್ಮ ದೊಡ್ಡಪ್ಪ, ಕೊಟ್ರಗೌಡರ ಪ್ರಭಾವಕ್ಕೊಳಗಾಗಿ ಹುಚ್ಚಿ ಕರಿಯಲ್ಲಪ್ಪ ಮತ್ತು ಕೆಲ ಯುವಕರೊಡಗೂಡಿ 60 ರ ದಶಕದಲ್ಲಿ ಹಡಗಲಿಯಲ್ಲಿ ’ರಂಗಭಾರತಿ’ಯೆಂಬ ‘ರಂಗತಂಡ’ವನ್ನು ಹುಟ್ಟುಹಾಕಿದ್ದರು ಈ ಸಂಸ್ಥೆ, ದೇಶದ ನಾನಾರಾಜ್ಯಗಳಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶಿಸಿದ ಹೆಗ್ಗಳಿಕೆ. ಅವರು, ಸ್ಥಾಪಕ ಅಧ್ಯಕ್ಷರಾಗಿ, ನಟರಾಗಿ,ನಿರ್ದೇಶಕರಾಗಿ ‘ಪರಿಪಕ್ವ ರಂಗಕರ್ಮಿ’ಯೆಂದು ಸಾಬೀತು ಪಡಿಸಿದರು. ‘ರಂಗಶಿಬರ’ವನ್ನೂ ಆಯೋಜಿಸಿದ್ದರು. ಪುಸ್ತಕ ಪ್ರೇಮಿ, ಓದುವ-ಬರೆಯುವ ಗೀಳು ವಿಪರೀತವಾಗಿತ್ತು. ‘ನಿಜಲಿಂಗಪ್ಪ’ನವರ ಇಂಗ್ಲೀಷ್ ಕೃತಿಯೊಂದನ್ನು ಕನ್ನಡಕ್ಕೆ ಭಾಷಾಂತರಿಸಿದ್ದರು. ಮನೆಯಲ್ಲಿ ‘ಪುಸ್ತಕಭಂಡಾರ’ವನ್ನೇ ಸ್ಥಾಪಿಸಿದ್ದು, ‘ಲಾರಿಲೋಡಿ’ನಷ್ಟು ಅತ್ಯಮೂಲ್ಯ ಪುಸ್ತಕಗಳನ್ನು ಹೊಂದಿದ್ದರು. ಪ್ರೀತಿವಿಶ್ವಾಸದ ಮಾತುಗಳು, ಯಾರನ್ನೂ ಲಭುವಾಗಿ ಕಾಣದ ಸದ್ವರ್ತನೆ,ಅವರ ರಾಜಕೀಯ ವಲಯದಲ್ಲಿ ಯಶಸ್ವಿಯಾಗಲು ಕಾರಣ. ‘ಕ್ಯಾನ್ಸರ್’ ನಂತಹ ಭಯಾನಕ ರೋಗದ ಶಿಕಾರಿಯಾಗಿಯೂ ಸಹಿತ, ಅದರ ವಿರುದ್ಧ ‘ಸ್ಥಿತಪ್ರಜ್ಞ’ರಾಗಿಯೇ ಹೋರಾಡಿ ಆ ಕಾಯಿಲೆಯನು ತಮ್ಮ ದೇಹದಿಂದ ದೂರ ಅಟ್ಟುವ ಕಾರ್ಯದಲ್ಲಿ ಹಲವು ವರ್ಷಗಳ ಕಾಲ ಯಶನ್ನು ಕಂಡಿದ್ದರು. ಯಾವಾಗಲೂ ಲವಲವಿಕೆಯಿಂದಿರುತ್ತಿದ್ದ, ಯಾರಬಗ್ಗೆಯೂ ಕೆಟ್ಟಮಾತಾಡದ, ಸದಾ ಹಸನ್ಮುಖಿ ಅಜಾತಶತೃವೆಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡ ಪ್ರಕಾಶ್, ಒಳ್ಳೆಯ ವಾಗ್ಮಿಗಳು. 1971 ರಿಂದ 81 ರವರೆಗೆ ಜೆ.ಬಿ.ಆರ್ ಕಾಲೇಜ್ ನ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. ಜನಪದ ಕಲೆಗಳಾದ ‘ಯಕ್ಷಗಾನ’, ‘ಬಯಲಾಟ’, ಪ್ರದರ್ಶಿಸಿ ‘ಹೂವಿನ ಹಡಗಲಿ’ಯಹೆಸರನ್ನು 2002 ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದ ಆಯೋಜಿಸಿ ಆ ಪ್ರದೇಶದ ಅಭಿವೃದ್ಧಿಯ ‘ಹರಿಕಾರ’ರೆಂದು ಹೆಸರಾದರು. ಸಿಂಗಟಾಲೂರು ನೀರಾವರಿ ಯೋಜನೆ ಚಾಲನೆಮಾಡಿದರು. ಹಿಂದುಳಿದ ಪ್ರದೇಶದಲ್ಲಿ ‘ಸರಕಾರಿ ಇಂಜಿನಿಯರಿಂಗ್ ಕಾಲೇಜ್’ ಸ್ಥಾಪಿಸಿದರು. ‘ಪಾಲಿಟೆಕ್ನಿಕ್’ ಆರಂಭವಾಯಿತು. ಪೋಲೀಸ್ ತರಬೇತಿ ಕೆಂದ್ರ ದ ಸ್ಥಾಪನೆಯಾಯಿತು.ಕೊಯಿಲಾರಗಟ್ಟಿಗ್ರಾಮದ ಹತ್ತಿರ ಚಂಡೀಘರ್ ನ ಮಾದರಿಯಲ್ಲಿ ದೊಡ್ಡ ನಗರ ನಿರ್ಮಾಣದ ಕಲ್ಪನೆಯಿತ್ತು. ಕರ್ನಾಟಕದ ಎರಡನೆಯ ರಾಜಧಾನಿಮಾಡುವ ಸಾಹಸದ ಕೆಲಸದ ಆರಂಭವಾಯಿತು. ಉದ್ಯಾನವನದ ನಿರ್ಮಾಣಕಾರ್ಯವನ್ನು ಆರಂಭಿಸಿದರು.

ಪ್ರಕಾಶ್ ರವರ ಬಹುಮುಖಿ, ಕ್ರಿಯಾಶೀಲಾ,ಮಲ್ಲಿಗೆ ಮುಡಿಲು,ಅಭಿನಂದನ ಗ್ರಂಥಗಳು. ಹಾಗೂ ಕಳಿಂಗ ಸೂರ್ಯ, ಥೈಲ್ಯಾಂಡ್ ಪ್ರವಾಸ,ಅಮೇರಿಕಾ ಪ್ರವಾಸ ಪ್ರವಾಸ ಕಥನಗಳು.ರಂಗಾಯಣದ ಕುಸುಮ ಬಾಲೆ,ಯಾರ ತಲೆದಂಡ,ಯಾತಕ್ಕೆ ಮಳೆ ಹೋದಾವು ಇವು ಪ್ರಕಾಶ್ ಅವರ ಸಾಂಸ್ಕೃತಿಕ ಲೇಖನಗಳು.

ಹೀಗೆ ಬರೆಯುತ್ತ ಹೋದ್ರೆ ಸಾಕಷ್ಟು ಲೇಖನಗಳು ಕವನಗಳು ಸನ್ಮಾನಗಳು ಪ್ರಶಸ್ತಿಗಳು ಪ್ರಕಾಶ್ ರವರಿಗೆ ಲಭಿಸಿವೆ. ನಮ್ಮ ದುರದೃಷ್ಟ ಪ್ರಕಾಶ್ ರವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನಮ್ಮನ್ನೆಲ್ಲ ಬಿಟ್ಟು ಅಪಾರ ಅಭಿಮಾನಿಗಳನ್ನು ಬಿಟ್ಟು,ಫೆಬ್ರವರಿ 9 -2011 ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಪ್ರಕಾಶ್ ಸಾಹೇಬ್ರು ಸದಾ ನಮ್ಮೊಂದಿಗೆ ಇದ್ದಾರೆ ಎಂಬ ಆಶಾ ಮನೋಭಾವನೆ ಈಗಲೂ ಹಡಗಲಿ ಮತ್ತು ಹರಪನಹಳ್ಳಿ ಕ್ಷೇತ್ರದ ಜನರ ಮನಸ್ಸಿನಲ್ಲಿದೆ. ಮತ್ತೊಮ್ಮೆ ಹುಟ್ಟಿ ಬನ್ನಿ ಸಾಹೇಬ್ರೆ ಇಂದು ನಾವೆಲ್ಲ ಪ್ರಕಾಶ್ ಸಾಹೇಬ್ರು ಅವರ 84 ನೇ ಹುಟ್ಟುಹಬ್ಬದ ಆಚರಣೆ ಮಾಡುತ್ತಿದ್ದೇವೆ. ಪ್ರಕಾಶ್ ರವರು ಎಲ್ಲೂ ಹೋಗಿಲ್ಲ ಅಭಿರುದ್ಧಿ ಕೆಲಸಗಳಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಇದ್ದಾರೆ ಎಂಬ ಮನೋಭಾವನೆ ಲೇಖಕರದ್ದಾಗಿದೆ.

ಗಂಗಜ್ಜಿ. ನಾಗರಾಜ್
ಲೇಖಕರು ಹಾಗೂ ಹವ್ಯಾಸಿ ಬರಹಗಾರರು
ಸಾಸ್ವಿಹಳ್ಳಿ.

Related Posts

ರಾಷ್ಟ್ರೀಯ, ಅಂತರಾಷ್ಟ್ರೀಯ ಯೋಗ ಪ್ರಶಸ್ತಿ : ಅರ್ಜಿ ಆಹ್ವಾನ

ಪ್ರಧಾನ ಮಂತ್ರಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ಯೋಗ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಈ ಸಂಬಂಧ ಯೋಗ ಕ್ರೀಡೆಗೆ ಅತ್ಯುನ್ನತವಾದ ಕೊಡುಗೆ ನೀಡಿರುವಂತಹ ಕ್ರೀಡಾಪಟುಗಳು ಅಥವಾ ಯೋಗ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾ.31 ಕೊನೆಯ ದಿನವಾಗಿದೆ. ಪ್ರಶಸ್ತಿಗಾಗಿ ಜಿಲ್ಲೆಯ ಅರ್ಹ…

2025ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನೆಚ್ಚಿನ ಟ್ಯಾಬ್ಲೋ ಮತ್ತು ಮಾರ್ಚಿಂಗ್ ತಂಡದ ವಿಜೇತರ ಘೋಷಣೆ.

ದೆಹಲಿಯ ರಾಷ್ಟ್ರೀಯ ರಂಗಶಾಲಾ ಶಿಬಿರದಲ್ಲಿ 2025 ರ ಗಣರಾಜ್ಯೋತ್ಸವ ಪರೇಡ್‌ನ ಅತ್ಯುತ್ತಮ ಮಾರ್ಚಿಂಗ್ ತುಕಡಿಗಳು ಮತ್ತು ಟ್ಯಾಬ್ಲೋಗಳಿಗೆ ರಕ್ಷಾ ರಾಜ್ಯ ಮಂತ್ರಿ ಶ್ರೀ ಸಂಜಯ್ ಸೇಠ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಸೇವೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF)/ಇತರ ಸಹಾಯಕ…

Leave a Reply

Your email address will not be published. Required fields are marked *

You Missed

ಭಾನುವಾರದ ರಾಶಿ ಭವಿಷ್ಯ 20 ಏಪ್ರಿಲ್ 2025

  • By admin
  • April 19, 2025
  • 6 views
ಭಾನುವಾರದ ರಾಶಿ ಭವಿಷ್ಯ 20 ಏಪ್ರಿಲ್ 2025

ಶನಿವಾರದ ರಾಶಿ ಭವಿಷ್ಯ 19 ಏಪ್ರಿಲ್ 2025

  • By admin
  • April 18, 2025
  • 21 views
ಶನಿವಾರದ ರಾಶಿ ಭವಿಷ್ಯ 19 ಏಪ್ರಿಲ್ 2025

ಶುಕ್ರವಾರದ ರಾಶಿ ಭವಿಷ್ಯ 18 ಏಪ್ರಿಲ್ 2025

  • By admin
  • April 17, 2025
  • 29 views
ಶುಕ್ರವಾರದ ರಾಶಿ ಭವಿಷ್ಯ 18 ಏಪ್ರಿಲ್ 2025

ಗುರುವಾರದ ರಾಶಿಭವಿಷ್ಯ 17 ಏಪ್ರಿಲ್ 2025

  • By admin
  • April 16, 2025
  • 28 views
ಗುರುವಾರದ ರಾಶಿಭವಿಷ್ಯ 17 ಏಪ್ರಿಲ್ 2025

ಬುಧವಾರದ ರಾಶಿ ಭವಿಷ್ಯ 16 ಏಪ್ರಿಲ್ 2025

  • By admin
  • April 15, 2025
  • 39 views
ಬುಧವಾರದ ರಾಶಿ ಭವಿಷ್ಯ 16 ಏಪ್ರಿಲ್ 2025

25 ವರ್ಷಗಳ ನಂತರ ಸಾಕಾರಗೊಂಡ ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ.

  • By admin
  • April 14, 2025
  • 88 views
25 ವರ್ಷಗಳ ನಂತರ ಸಾಕಾರಗೊಂಡ ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ.

ಭಾನುವಾರದ ರಾಶಿ ಭವಿಷ್ಯ 13 ಏಪ್ರಿಲ್ 2025

  • By admin
  • April 12, 2025
  • 35 views
ಭಾನುವಾರದ ರಾಶಿ ಭವಿಷ್ಯ 13 ಏಪ್ರಿಲ್ 2025

ಯಾವೆಲ್ಲಾ ಜಾತಿಗಳ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು..?

  • By admin
  • April 12, 2025
  • 121 views
ಯಾವೆಲ್ಲಾ ಜಾತಿಗಳ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು..?

ಡಾ. ಬಿ.ಆರ್. ಅಂಬೇಡ್ಕರ್ ರವರ ಸಮುದಾಯ ಭವನದ ಶಂಕುಸ್ಥಾಪನೆ.

  • By admin
  • April 12, 2025
  • 66 views
ಡಾ. ಬಿ.ಆರ್. ಅಂಬೇಡ್ಕರ್ ರವರ ಸಮುದಾಯ ಭವನದ ಶಂಕುಸ್ಥಾಪನೆ.

ಏಪ್ರಿಲ್ 16, 17 ರಂದು ಸಿಇಟಿ ಪರೀಕ್ಷೆ; ಶೂಗಳು, ಕಿವಿಯೋಲೆ, ಉಂಗುರ, ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.

  • By admin
  • April 12, 2025
  • 183 views
ಏಪ್ರಿಲ್ 16, 17 ರಂದು ಸಿಇಟಿ ಪರೀಕ್ಷೆ; ಶೂಗಳು, ಕಿವಿಯೋಲೆ, ಉಂಗುರ, ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.