ಇಂದು ನಾವು ಭಾರತದಲ್ಲಿ ಟ್ರೇಡ್ಮಾರ್ಕ್ ನೋಂದಣಿ (Trademark Registration) 2025 ರಲ್ಲಿ ಹೇಗೆ ಮಾಡುವುದು? ಎಂಬುದನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ.
ನೀವು ಯಾವುದೇ ರೀತಿಯ ವ್ಯಾಪಾರ ಮಾಡುತ್ತಾ ಇದ್ದರೆ,, ಸ್ಟಾರ್ಟಪ್ ಶುರು ಮಾಡಿದ್ದರೆ, ಅಥವಾ ಫ್ರೀಲಾನ್ಸರ್ ಆದ್ರೂ, ಟ್ರೇಡ್ಮಾರ್ಕ್ ನಿಮಗೆ ತುಂಬಾ ಮುಖ್ಯ.

ಭಾಗ 1 – ಟ್ರೇಡ್ಮಾರ್ಕ್ ಯಾಕೆ ಬೇಕು?
👉 “ಮೊದಲಿಗೆ, ಟ್ರೇಡ್ಮಾರ್ಕ್ ಯಾಕೆ ಮುಖ್ಯ ಎಂದು ತಿಳಿದುಕೊಳ್ಳೋಣ:
- ಇದು ನಿಮ್ಮ ಬ್ರ್ಯಾಂಡ್ ಹೆಸರು, ಲೋಗೋ, ಅಥವಾ ಟ್ಯಾಗ್‍ಲೈನ್ ಅನ್ನು ಯಾರಾದರೂ ಕದಿಯುವುದರಿಂದ ಅಥವಾ ಗೊತ್ತಿಲ್ಲದೇ ಬೇರೊಬ್ಬರು ಕಾಪಿ ಮಾಡುವುದರಿಂದ ನಿಮ್ಮನ್ನು ರಕ್ಷಿಸುತ್ತದೆ.
- ಇದು ನಿಮಗೆ ಕಾನೂನು ಹಕ್ಕು (Legal Ownership) ಕೊಡುತ್ತದೆ.
- ಗ್ರಾಹಕರಲ್ಲಿ ವಿಶ್ವಾಸ (Trust) ಹುಟ್ಟಿಸುತ್ತದೆ, ಏಕೆಂದರೆ ಅವರು ನಿಮ್ಮ ಬ್ರ್ಯಾಂಡ್ ಅಸಲಿ ಎಂದು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ..
ಟ್ರೇಡ್ಮಾರ್ಕ್ ಇಲ್ಲದಿದ್ದರೆ, ಯಾರಾದರೂ ಅದೇ ಹೆಸರಿನಲ್ಲಿ ಅಥವಾ ಹೋಲಿಕೆಯ ಹೆಸರಿನಲ್ಲಿ ವ್ಯವಹಾರ ಶುರು ಮಾಡಬಹುದು. ಆಗ ನೀವು ಅವರನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ನೋಂದಣಿ ಮಾಡಿಸಿಕೊಳ್ಳುವುದು ಅನಿವಾರ್ಯ.”
ಭಾಗ 2 – ಏನನ್ನು ಟ್ರೇಡ್ಮಾರ್ಕ್ ಮಾಡಿಸಿಕೊಳ್ಳಬಹುದು?
👉 “ಟ್ರೇಡ್ಮಾರ್ಕ್ ಅಂದರೆ ಕೇವಲ ಹೆಸರು ಮಾತ್ರವಲ್ಲ.
- ನಿಮ್ಮ ಬ್ರ್ಯಾಂಡ್ ಹೆಸರು.
- ನಿಮ್ಮ ಲೋಗೋ ಅಥವಾ ಸಂಕೇತ.
- ನಿಮ್ಮ ಟ್ಯಾಗ್‍ಲೈನ್/ಸ್ಲೋಗನ್.
- ಕೆಲವೊಮ್ಮೆ ಉತ್ಪನ್ನದ ಆಕಾರ, ಪ್ಯಾಕೇಜಿಂಗ್ ಶೈಲಿ, ಅಥವಾ ಸೌಂಡ್ ಕೂಡ ಟ್ರೇಡ್ಮಾರ್ಕ್ ಮಾಡಿಸಿಕೊಳ್ಳಬಹುದು.”
ಭಾಗ 3 – ಬೇಕಾಗುವ ದಾಖಲೆಗಳು:
👉 “ಟ್ರೇಡ್ಮಾರ್ಕ್ ಫೈಲ್ ಮಾಡೋದಕ್ಕೆ ನೀವು ಈ ಡಾಕ್ಯುಮೆಂಟ್‍ಗಳನ್ನು ಸಿದ್ಧವಾಗಿಡಬೇಕು:
- ಆಧಾರ್ ಕಾರ್ಡ್, ಪಾನ್ ಕಾರ್ಡ್ (ವೈಯಕ್ತಿಕರಿಗೆ).
- ಬಿಸಿನೆಸ್ ರಿಜಿಸ್ಟ್ರೇಷನ್ ಪ್ರಮಾಣ ಪತ್ರ (ಕಂಪನಿ / ಎಲ್ಎಲ್ ಪಿ ಆಗಿದ್ದರೆ).
- ಲೋಗೋ ಸಾಫ್ಟ್ ಕಾಪಿ.
- ಪವರ್ ಆಫ್ ಅಟಾರ್ನಿ / ಅಧಿಕಾರ ಪತ್ರ/ಫಾರ್ಮ್ (ಪ್ರೊಫೆಷನಲ್ ಮೂಲಕ ಫೈಲ್ ಮಾಡಿಸ್ತಿದ್ರೆ).”
ಭಾಗ 4 – ಆನ್‍ಲೈನ್ ಅರ್ಜಿ ಹಂತಗಳು:
👉 “ಇಗ ಹಂತ ಹಂತದ ಪ್ರಕ್ರಿಯೆ ನೋಡೋಣ:
ಹಂತ 1: ಅಧಿಕೃತ ಐಪಿ ಇಂಡಿಯಾ ಟ್ರೇಡ್‌ಮಾರ್ಕ್ ಪೋರ್ಟಲ್ (IP India Trademark Portal) ಗೆ ಹೋಗಿ.
ಹಂತ 2: ನಿಮ್ಮ ಬ್ರ್ಯಾಂಡ್ ಹೆಸರು ಲಭ್ಯವಿದೆಯಾ ಅಂತ ಟ್ರೇಡ್‌ಮಾರ್ಕ್ ಹುಡುಕಾಟ (Trademark Search) ಮಾಡಿ.
ಹಂತ 3: ಸರಿಯಾದ ಕ್ಲಾಸ್ (Class) ಆರಿಸಿ (ಉದಾ: Class 25 – ಬಟ್ಟೆ, Class 30 – ಆಹಾರ, Class 43 – ಹೋಟೆಲ್/ರೆಸ್ಟಾರಂಟ್).
ಹಂತ 4: ಅರ್ಜಿ ಫಾರ್ಮ್ ನಲ್ಲಿ ಬ್ರ್ಯಾಂಡ್ ವಿವರಗಳನ್ನು ತುಂಬಿ, ಡಾಕ್ಯುಮೆಂಟ್‍ಗಳನ್ನು ಅಟ್ಯಾಚ್ ಮಾಡಿ.
ಹಂತ 5: ಆನ್‍ಲೈನ್ ಫೀ ಪೇ ಮಾಡಿ – ಸಾಮಾನ್ಯವಾಗಿ ಸ್ವಂತ ಮಾಲೀಕತ್ವ/ಸ್ಟಾರ್ಟಪ್‍ಗೆ ರೂ. 4,500, ಕಂಪನಿಗಳಿಗೆ ರೂ. 9,000.
ಹಂತ 6: ಅರ್ಜಿ ಸಲ್ಲಿಸಿ ಮತ್ತು ಅಕ್ನಾಲೆಡ್ಜ್‌ಮೆಂಟ್ ರಸೀದಿ ಡೌನ್‍ಲೋಡ್ ಮಾಡಿ.
ಹೀಗೆ ಮಾಡಿದ್ರೆ ನಿಮ್ಮ ಟ್ರೇಡ್ಮಾರ್ಕ್ ಅರ್ಜಿ ಫೈಲ್ ಆಗುತ್ತದೆ.”
“ನೀವೇ ಟ್ರೇಡ್ ಮಾರ್ಕ್ ಫೈಲ್ ಮಾಡಿಕೊಳ್ಳುವುದು ಸ್ವಲ್ಪ ಕಷ್ಟಕರವಾದ ಕೆಲಸ, ನಿಮಗೆ ಸಹಾಯಬೇಕೆಂದರೆ ನಮ್ಮ ಮೊಬೈಲ್ ಸಂಪರ್ಕಿಸಿ: 9945971204”

ಭಾಗ 5 – ಅರ್ಜಿಯ ನಂತರ ಏನು ನಡೆಯುತ್ತದೆ?
👉 “ಅರ್ಜಿ ಸಲ್ಲಿಸಿದಮೇಲೆ ಪ್ರಕ್ರಿಯೆ ಹೀಗೆ ನಡೆಯುತ್ತದೆ:
- ಪರಿಶೀಲನೆ (Examination): ಅಧಿಕಾರಿ ನಿಮ್ಮ ಅರ್ಜಿಯನ್ನು ಕೂಲಂಕುಷ ಪರಿಶೀಲನೆ ಮಾಡುತ್ತಾರೆ..
- ಪ್ರಕಟನೆ (Publication): ನಿಮ್ಮ ಟ್ರೇಡ್ಮಾರ್ಕ್ ಅನ್ನು ಜರ್ನಲ್ ನಲ್ಲಿ ಪ್ರಕಟ ಮಾಡ್ತಾರೆ.
- ಎದುರಾಳಿಗಳ ಅವಧಿ (Opposition Period): 4 ತಿಂಗಳೊಳಗೆ ಯಾರಾದರೂ ವಿರೋಧಿಸುತ್ತಾರಾ ಎಂದು ಕಾಯುತ್ತಾರೆ..
- ಅನುಮೋದನೆ ಮತ್ತು ನೋಂದಣಿ (Approval & Registration): ಯಾರೂ ವಿರೋಧಿಸದಿದ್ದರೆ, ನಿಮಗೆ ನೋಂದಣಿ ಪ್ರಮಾಣಪತ್ರ (Registration Certificate) ಸಿಗುತ್ತದೆ.
ಇಡೀ ಪ್ರಕ್ರಿಯೆಗೆ ಸಾಮಾನ್ಯವಾಗಿ 12 ರಿಂದ 18 ತಿಂಗಳು ಬೇಕಾಗಬಹುದು. ಆದರೆ ಒಮ್ಮೆ ರಿಜಿಸ್ಟ್ರೇಶನ್ ಆದಮೇಲೆ ಅದು 10 ವರ್ಷಗಳಿಗೆ ಮಾನ್ಯ, ಮತ್ತು ಮರುನೋಂದಣಿ ಮಾಡಿಸಿಕೊಳ್ಳಬಹುದು.” ಮರುನೋಂದಣಿಗೆ ಪ್ರತ್ಯೇಕ ಶುಲ್ಕ ವಿರುತ್ತದೆ ಅದು 10 ವರ್ಷ ಆದ ನಂತರ ಸರ್ಕಾರ ಯಾವ ಮೊತ್ತ ನಿಗದಿ ಮಾಡುತ್ತದೆಯೋ ಅದನ್ನು ಕಟ್ಟಿ ನವೀಕರಿಸುಕೊಳ್ಳಬಹುದು.
ಭಾಗ 6 – ಶುಲ್ಕ ಮತ್ತು ಅವಧಿ ಸಂಕ್ಷಿಪ್ತ
👉 “ಒಮ್ಮೆ ಸಂಕ್ಷಿಪ್ತವಾಗಿ:
- ಸರ್ಕಾರಿ ಶುಲ್ಕ: ವೈಯಕ್ತಿಕರಿಗೆ ರೂ. 4,500* / ಕಂಪನಿಗಳಿಗೆ ರೂ. 9,000* (*ಹೆಚ್ಚುವರಿ ಸೇವಾ ಶುಲ್ಕಗಳು ಅನ್ವಯವಾಗುತ್ತವೆ)
- ಅವಧಿ: 12–18 ತಿಂಗಳು.
- ಮಾನ್ಯತೆ: 10 ವರ್ಷ, ನಂತರ ಮರುನೋಂದಣಿ ಮಾಡಿಸಿಕೊಳ್ಳಬಹುದು.”
ನೀವು ಸ್ವತಃ ಟ್ರೇಡ್ಮಾರ್ಕ್ ನೋಂದಣಿ ಮಾಡಿಕೊಳ್ಳಬೇಕು ಅಂದರೆ ಈ ಹಂತಗಳನ್ನು ಫಾಲೋ ಮಾಡಿ. ಆದರೆ ಡಾಕ್ಯುಮೆಂಟ್ ತಪ್ಪು, ಕ್ಲಾಸ್ ತಪ್ಪು, ಇಲ್ಲವೇ ತಾಂತ್ರಿಕ ದೋಷಗಳಿಂದ ಅರ್ಜಿಯನ್ನು ನಿರಾಕರಿಸುವ ಸಾಧ್ಯತೆ ಬಹಳವಿರುತ್ತದೆ.
👉 “ಹೀಗಾಗಿ ಸ್ನೇಹಿತರೇ, ನೀವು ಖಚಿತ ಮತ್ತು ಸುರಕ್ಷಿತವಾಗಿ ಟ್ರೇಡ್ಮಾರ್ಕ್ ನೋಂದಣಿ ಮಾಡಿಸಿಕೊಳ್ಳಬೇಕು ಅಂದರೆ, ನಾವು ಪ್ರೊಫೆಷನಲ್ ಸಹಾಯ ಮಾಡುತ್ತೇವೆ.
📲 ನಮಗೆ ವಾಟ್ಸಾಪ್ ನಲ್ಲಿ ಸಂಪರ್ಕಿಸಿ: 9945971204
👉 ಈಗಲೇ ನಿಮ್ಮ ಬ್ರ್ಯಾಂಡ್ ಅನ್ನು ಟ್ರೇಡ್ಮಾರ್ಕ್ ನೋಂದಣಿ ಮಾಡಿ ಹಾಗೂ ನಿಮ್ಮ ಬ್ರ್ಯಾಂಡ್ ಅನ್ನು ರಕ್ಷಿಸಿ.





