ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳು.

ನಮ್ಮ ದಾವಣಗೆರೆ ನ.18: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ನವಂಬರ್ 21 ರಂದು ಬೆಳಿಗ್ಗೆ 11 ಗಂಟೆಗೆ ಗುಂಡಿ ಸರ್ಕಲ್ ಹತ್ತಿರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ್ ಕ್ರೀಡಾಕೂಟ ಉದ್ಘಾಟಿಸುವರು. ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಅಧ್ಯಕ್ಷತೆ ವಹಿಸುವರು. ಮೋತಿ ವೀರಪ್ಪ ಕಾಲೇಜಿನ ಪ್ರಾಂಶುಪಾಲರಾದ ಶಿವಾನಂದ ಆರ್ ಕುಡಪಲಿ ಭಾಗವಹಿಸುವರು.

ಸ್ಪರ್ಧೆಗಳ ವಿವರ; ಮಹಿಳಾ ಮತ್ತು ಪುರಷರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಕ್ರೀಡಾ ಸ್ಪರ್ಧೆಯಲ್ಲಿ ದೈಹಿಕ ವಿಕಲಚೇತನರಿಗೆ – ನಿಧಾನಗತಿ ಬೈಕ್ ರೇಸ್, ಶಾಟ್‍ಪುಟ್, ಜಾವಲಿನ್ ಥ್ರೋ, ಮ್ಯೂಸಿಕಲ್ ಚೇರ್ (ಮಹಿಳೆಯರಿಗೆ), ಸಂಪೂರ್ಣ ದೃಷ್ಟಿದೋಷವುಳ್ಳವರಿಗೆ 50ಮೀ. ರನ್ನಿಂಗ್ ರೇಸ್, ಶಾಟ್‍ಪುಟ್, ಮ್ಯೂಸಿಕಲ್ ಚೇರ್, ಚೆಸ್, ಕೇರಂ ವಾಕ್ ಮತ್ತು ಶ್ರವಣದೋಷವುಳ್ಳವರಿಗೆ –100ಮೀ ರನ್ನಿಂಗ್ ರೇಸ್, ಜಾವಲಿನ್ ಥ್ರೋ, ಶಾಟ್‍ಪುಟ್, ಕೇರಂ, ಚೆಸ್ ಬೆನ್ನುಹುರಿ ಅಪಘಾತ ಹೊಂದಿರುವವರಿಗೆ ಚೆಸ್, ಕೇರಂ ಮತ್ತು ವ್ಹೀಲ್‍ಚೇರ್ ರೇಸ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.

ಆಸಕ್ತ ವಿಕಲಚೇತನರು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ದೂರವಾಣಿ ಸಂಖ್ಯೆಗೆ ಕರೆಮಾಡಿ ನೊಂದಣಿ ಮಾಡಿಸಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ; ಕೆ.ಕೆ ಪ್ರಕಾಶ ತಿಳಿಸಿದ್ದಾರೆ.

Related Posts

ಅಂತರ್‍ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಯೂತ್ ಚಾಂಪಿಯನ್‍ಶಿಪ್ 2025 ರ ಸ್ಪರ್ಧೆಯಲ್ಲಿ ದಾವಣಗೆರೆ ಮಾರ್ಷಲ್ ಆಟ್ರ್ಸ್ ವಿದ್ಯಾರ್ಥಿಗಳಿಗೆ 01 ಬಂಗಾರ 02 ಬೆಳ್ಳಿ ಪದಕ.

ನಮ್ಮ ದಾವಣಗೆರೆ : ಅಂತರ್‍ರಾಷ್ಟ್ರೀಯ ಯೂತ್ ಸ್ಪೋಟ್ರ್ಸ್ ಮತ್ತು ಎಜುಕೇಷನ್ ಫೆಡರೇಷನ್ ಪಟ್ಟಾಯ ಥಾಯ್ಲೆಂಡ್ ಇಲ್ಲಿ ನಡೆದ 2025ನೇ ಸಾಲಿನ ನವಂಬರ್ 1 ಮತ್ತು 2 ರಂದು ನಡೆದ ಅಂತರ್‍ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಯೂತ್ ಚಾಂಪಿಯನ್‍ಶಿಪ್ 2025 ರ ಸ್ಪರ್ಧೆಯಲ್ಲಿ ಈಗಲ್…

ದಾವಣಗೆರೆಯ ಪ್ರತಿಷ್ಠಿತ ಸಂತ ಪೌಲರ ಸಿಬಿಎಸ್ಇ ಶಾಲೆ ದಸರಾ ಸಿಎಂ ಕಪ್ 2025 ಖೋ ಖೋ ಚಾಂಪಿಯನ್ಸ್.

ನಮ್ಮ ದಾವಣಗೆರೆ ಆ. 26: ದಾವಣಗೆರೆಯ ಪ್ರತಿಷ್ಠಿತ ಸಂತ ಪೌಲರ ಸಿಬಿಎಸ್ಇ ಶಾಲೆ ದಸರಾ ಸಿಎಂ ಕಪ್ 2025 ಖೋ ಖೋ ಚಾಂಪಿಯನ್ಸ್ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಹಾಗೆಯೇ ಸಂತ ಪೌಲರ ಸಿಬಿಎಸ್ಇ ಶಾಲೆ 6 ನೇ ತರಗತಿ…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×