ನವದೆಹಲಿ, ಜುಲೈ 27 – ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕತ್ವದಲ್ಲಿ ಮತ್ತೊಮ್ಮೆ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕ ಆಧಾರಿತ ಬಿಸಿನೆಸ್ ಇಂಟೆಲಿಜೆನ್ಸ್ ಸಂಸ್ಥೆ ಮೋರ್ನಿಂಗ್ ಕಾನ್ಸಲ್ಟ್ ನೀಡಿರುವ ವರದಿಯ ಪ್ರಕಾರ, ಪ್ರಧಾನಿ ಮೋದಿಯವರು 75% ಅನುಮೋದನೆ (ಅಪ್ರೂವಲ್ ರೇಟಿಂಗ್) ಪಡೆದು ವಿಶ್ವದ ಅತ್ಯಂತ ವಿಶ್ವಾಸಾರ್ಹ ಹಾಗೂ ಅತ್ಯಧಿಕ ಮೆಚ್ಚುಗೆ ಪಡೆದ ನಾಯಕರಲ್ಲಿ ಮೊದಲ ಸ್ಥಾನವನ್ನು ಗಳಿಸಿದ್ದಾರೆ.

ಅಂತರರಾಷ್ಟ್ರೀಯ ನಾಯಕತ್ವದ ಮೌಲ್ಯಮಾಪನದಲ್ಲಿ ಭಾರತ ಪ್ರಧಾನಿಗೆ ಅಗ್ರಸ್ಥಾನ:
ಈ ಸಮೀಕ್ಷೆಯು 2025ರ ಜುಲೈ 4 ರಿಂದ 10ರ ವರೆಗೆ ವಿವಿಧ ದೇಶಗಳ ಪ್ರಜಾಪ್ರಭುತ್ವಾಧಾರಿತ ರಾಷ್ಟ್ರಗಳಲ್ಲಿ ನಡೆದಿದ್ದು, ಪ್ರತಿ ದೇಶದ ಪ್ರಜ್ಞಾವಂತ ನಾಗರೀಕರಿಂದ ಅಭಿಪ್ರಾಯಗಳನ್ನು ಏಳು ದಿನಗಳ ಸರಾಸರಿ ಸಮೀಕ್ಷೆಯ ಪ್ರಕಾರ, ಮೋದಿಯವರಿಗೆ 75% ಅನುಮೋದನೆ, ಕೇವಲ 18% ವಿರೋಧ, ಮತ್ತು 7% ಜನರಿಂದ ನಿರ್ಧಾರವಿಲ್ಲದ ಅಭಿಪ್ರಾಯ ಲಭಿಸಿದೆ.
Join Whatsapp Group NammaDavangere 04
Join Whatsapp Group NammaDavangere 05

ಪ್ರಮುಖ ನಾಯಕರುಗಳ ಅನುಮೋದನೆ ಹೀಗಿದೆ:
| ನಾಯಕರು | ದೇಶ | ಅನುಮೋದನೆ ಶೇಕಡಾವಾರು |
|---|---|---|
| ನರೇಂದ್ರ ಮೋದಿ | ಭಾರತ | 75% |
| ಲೀ ಜೆ ಮಿಯೂಂಗ್ | ದಕ್ಷಿಣ ಕೊರಿಯಾ | 59% |
| ಜೇವಿಯರ್ ಮೈಲೆಇ | ಅರ್ಜೆಂಟೀನಾ | 57% |
| ಮಾರ್ಕ್ ಕಾರ್ನಿ | ಕೆನಡಾ | 56% |
| ಆಂಥನಿ ಅಲ್ಬಾನೀಸ್ | ಆಸ್ಟ್ರೇಲಿಯಾ | 54% |
| ಕ್ಲಾಡಿಯಾ ಶೈನ್ಬಾವಮ್ | ಮೆಕ್ಸಿಕೋ | 53% |
| ಕರಿನ್ ಕೆಲ್ಲರ್-ಸೂಟರ್ | ಸ್ವಿಟ್ಜರ್ಲ್ಯಾಂಡ್ | 48% |
| ಡೊನಾಲ್ಡ್ ಟ್ರಂಪ್ | ಅಮೆರಿಕ | 44% |
ದೀರ್ಘಾವಧಿಯ ಪ್ರಧಾನಿ: ಇಂದಿರಾ ಗಾಂಧಿಯ ದಾಖಲೆಯನ್ನು ಹಿಂದಿಕ್ಕಿದ ಮೋದಿ
ಜುಲೈ 25, 2025ರಂದು ಪ್ರಧಾನಿ ಮೋದಿ ಅವರು ತಮ್ಮ ಪ್ರಧಾನಮಂತ್ರಿ ಸ್ಥಾನವನ್ನು 4078 ದಿನಗಳ ಕಾಲ ನಿರ್ವಹಿಸಿದ ದಾಖಲೆ ಬರೆದಿದ್ದಾರೆ. ಇದರಿಂದ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 4077 ದಿನಗಳ ನಿರಂತರ ಸೇವಾ ದಾಖಲೆವನ್ನು ಹಿಂದಿಕ್ಕಿದ್ದಾರೆ.
ಇದೀಗ ಮೋದಿ ಅವರು ಪಂಡಿತ ಜವಾಹರಲಾಲ್ ನೆಹರು (16 ವರ್ಷ 286 ದಿನ) ಅವರ ನಂತರ ಎರಡನೇ ದೀರ್ಘಾವಧಿಯ ಪ್ರಧಾನಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಮೋದಿಯವರು ನೆಹರೂ ಅವರ ದಾಖಲೆಯನ್ನು ಕೂಡಾ ಮುರಿಯಲಿದ್ದಾರೆ ಎಂದು ಅಂದಾಜಿಸಲಾಗಿದೆ.





