ಬಿಜೆಪಿ ಕಾಲದ 21 ಹಗರಣಗಳ ತನಿಖೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಬಿಜೆಪಿ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ಹಗರಣಗಳಿವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 42.16 ಕೋಟಿ ರೂ. ಎಪಿಎಂಸಿ ದೊಡ್ಡ ಹಗರಣವಾಗಿದೆ. ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದಾಗ ಭೋವಿ ನಿಗಮಕ್ಕೆ 87 ಕೋಟಿ ರೂ. ಹಗರಣ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಬಿಜೆಪಿ ಹಾಗೂ ಜೆಡಿಎಸ್ ಸಂಸದರು ಕಾಂಗ್ರೆಸ್ ಮೇಲೆ ಟೀಕೆ ಮಾಡುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಗರಣದ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದಾಗ ಭೋವಿ ನಿಗಮದ 87 ಕೋಟಿ ರೂ. ಅದೊಂದು ಹಗರಣ. ದೇವರಾಜು ಅರಸ್ ಟ್ರಕ್ ಟರ್ಮಿನಲ್‌ನಲ್ಲಿ 47.10 ಕೋಟಿ ರೂ. ಅದು ಇನ್ನೊಂದು ಹಗರಣ. ಅದಕ್ಕೆ ತಾನೇ ಆಗಿನ ಅಧ್ಯಕ್ಷರಾಗಿದ್ದ ವೀರಯ್ಯ ಬಂಧನವಾಗಿದ್ದರು ನಿಮ್ಮ ಯೋಗ್ಯತೆಗೆ ನಿಮಿಗೆ ನಾಚಿಕೆ ಆಗಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣದಲ್ಲಿ ಬಡವರ ಹಾಗೂ ಹಿಂದುಳಿದ ಜನರ ಕೋಟ್ಯಂತರ ರೂಪಾಯಿ ಲೂಟಿಮಾಡಿದ್ದೀರಿ ಆದರೆ ಇಡಿ, ಐಟಿ ಮತ್ತು ಸಿಬಿಐ ಲೂಟಿಕೋರರನ್ನು ಬಂಧಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಜಯನಗರ ಮತ್ತು ಬಸವನಗುಡಿಯಲ್ಲಿ ಬೀದಿ ಬದಿಯ ಕೆಲ ಕಳ್ಳರು ಹಾಗೂ ದರೋಡೆಕೋರರು ವಿಧಾನಸೌಧ, ಸಂಸತ್ ಗೂ ಆಯ್ಕೆಯಾಗಿ ಹೋಗಿದ್ದಾರೆ, ನಿಮಗೆ ನಾಚಿಕೆ ಆಗಬೇಕು ಎಂದರು.

ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧದ ಭೂ ವಂಚನೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ, ಕೃಷಿ ಇಲಾಖೆ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಕೃಷಿ ಸಚಿವರಾಗಿದ್ದ ಬಿ. ಸಿ. ಪಾಟೀಲ್ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ಇತರೆ ನಿಗಮಗಳಲ್ಲಿ 437 ಕೋಟಿ ರೂ. ಹಗರಣವಾಗಿದೆ. ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಸಚಿವರಾಗಿದ್ದಾಗ ಕಿಯೋನಿಕ್ಸ್ ನಲ್ಲಿ 500 ಕೋಟಿ ರೂ. ಹಗರಣ ನಡೆದಿದೆ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಕರ್ನಾಟಕ ಬಿಜೆಪಿ ಭ್ರಷ್ಟಾಚಾರದ ಪಿತಾಮಹ. ನಮ್ಮ ಹಗರಣಗಳು ಬಯಲಾಗಬಾರದು ಎಂದು ಸಧನದಲ್ಲಿ ಗಲಾಟೆ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ವಿರೋಧ ಪಕ್ಷಗಳು ಇಷ್ಟು ಕೆಟ್ಟದಾಗಿ ನಡೆದುಕೊಂಡಿದ್ದನ್ನು ನಾನು ನೋಡಿಲ್ಲ. ಕೇಂದ್ರ ಹಾಗೂ ಆರ್‌ಎಸ್‌ಎಸ್ ಪ್ರಚೋದನೆಯಿಂದ ಕೇವಲ ಪ್ರಚಾರಕ್ಕಾಗಿ ಕರ್ನಾಟಕ ಬಿಜೆಪಿ ಇಂತಹ ಗಲಾಟೆ ಮಾಡುತ್ತಿದ್ದಾರೆ.
ಬಿಜೆಪಿ ಕಾಲದ 21 ಹಗರಣಗಳ ತನಿಖೆ ಮಾಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Related Posts

ಸ್ವದೇಶೀ ಬಳಿಸಿ – ದೇಶ ಉಳಿಸಿ

“ಸ್ವದೇಶೀ” ಎಂಬ ಪದವು ಕೇವಲ ಉತ್ಪನ್ನ ಅಥವಾ ವಸ್ತುವಿನ ಆಯ್ಕೆ ಅಲ್ಲ, ಅದು ನಮ್ಮ ರಾಷ್ಟ್ರಭಕ್ತಿಯ ಪ್ರತಿಬಿಂಬ, ದೇಶದ ಅಭಿವೃದ್ಧಿಗೆ ಕೊಡುವ ಒಂದು ಅಮೂಲ್ಯ ಕೊಡುಗೆ. “ಸ್ವದೇಶೀ” ಎಂದರೆ ಅದರಲ್ಲಿ ಸ್ವಾವಲಂಬನೆ, ಆತ್ಮಗೌರವ, ಆರ್ಥಿಕ ಶಕ್ತಿ ಮತ್ತು ರಾಷ್ಟ್ರೀಯ ಏಕತೆಯ ತತ್ವ…

ಗ್ರಾಹಕರ ವಿಶ್ವಾಸಕ್ಕೆ ಹೆಸರಾಗಿರುವ ‘ರತನ್ ಗೋಲ್ಡ್’ – ನಿಮ್ಮ ಚಿನ್ನವನ್ನು ಒಳ್ಳೆ ಬೆಲೆಗೆ ಖರೀದಿಸಲಾಗುತ್ತದೆ.

ಭಾರತದಲ್ಲಿ ಚಿನ್ನ ಎಂದರೆ ಅದು ಕೇವಲ ಒಂದು ಲೋಹವಲ್ಲ, ಅದು ಸಂಸ್ಕೃತಿ, ಸಂಪ್ರದಾಯ, ಭದ್ರತೆ ಮತ್ತು ಬದುಕಿನ ಆಧಾರವೆಂದು ಕಾಣಲಾಗುತ್ತದೆ. ಆದರೆ ತುರ್ತು ಅವಶ್ಯಕತೆಯಲ್ಲಿ ಚಿನ್ನವನ್ನು ಮಾರಾಟ ಮಾಡಬೇಕಾದಾಗ, ಅನೇಕರು ವಂಚನೆಗೆ ಗುರಿಯಾಗಿರುವುದನ್ನು ನಾವು ಕಂಡಿದ್ದೇವೆ. ಜನರಿಗೆ ನ್ಯಾಯಯುತ ಬೆಲೆ ದೊರೆಯದೇ…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×