ಜೂನ್ 30 ರಂದು ಪ್ರತೀ ವರ್ಷವೂ ಅಂತಾರಾಷ್ಟ್ರೀಯ ಖೋ- ಖೋ ದಿನ ಆಚರಿಸಲಾಗುತ್ತದೆ,
ದಾವಣಗೆರೆಯ ಸ್ಟೇಡಿಯಂ ನಲ್ಲಿ ಅಂತಾರಾಷ್ಟ್ರೀಯ ಖೋ- ಖೋ ದಿನದ ಪ್ರಯುಕ್ತ ಜೂನಿಯರ್ ಹಾಗೂ ಸೀನಿಯರ್ ಖೋ- ಖೋ ಪಂದ್ಯಾವಳಿಗಳು ಜರುಗಿದವು.

ಗೆದ್ದ ತಂಡಗಳಿಗೆ ಹಾಗೂ ಆಟಗಾರರಿಗೆ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಯಿತು. ಈ ಪಂದ್ಯಾವಳಿಗೆ ಮುಖ್ಯ ಅತಿಥಿಗಳಾಗಿ ನಿವೃತ್ತ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶ್ರೀ ಗೋಪಾಲಕೃಷ್ಣಮೂರ್ತಿ ಮತ್ತು ಶ್ರೀ ಮಲ್ಲೇಶಪ್ಪ ರವರು ಉಪಸ್ಥಿತರಿದ್ದರು.

ಜೆ. ರಾಮಲಿಂಗಪ್ಪ ಖೋ-ಕೆಗೋ ಕೋಚ್ ಡಿವೈಇಎಸ್ ದಾವಣಗೆರೆ, ಇವರು ಉದ್ಘಾಟಿಸಿದರು.
ವಿಶೇಷ ಆಹ್ವಾನಿತರಾಗಿ ನಮ್ಮ ದಾವಣಗೆರೆ ಡಿಜಿಟಲ್ ಪತ್ರಿಕೆಯ ಸಂಪಾದಕರಾದ ಶ್ರೀ ವೇಣುಗೋಪಾಲ್ ಕೆ. ಮತ್ತು ಶ್ರೀ ಸತೀಶ್ ರವರು ಸಹ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಅತಿಥಿಗಳಾಗಿ ರವಿ ಕೆ, ರಘು ಎಚ್ ಎಂ ನಾಗರಾಜ್, ಲಿಂಗರಾಜ್, ಸಿದ್ದೇಶ್ ಎ ಬಿ
ಮತ್ತು ಪ್ರವೀಣ್ ಕೆ.ಓ ರವರು ಸಹಾ ಉಪಸ್ಥಿತರಿದ್ದರು.




