ನಮ್ಮ ದಾವಣಗೆರೆ ಜುಲೈ 28:: ಕರ್ನಾಟಕ ಪೊಲೀಸ್ ಇಲಾಖೆಯ ಜನಸ್ನೇಹಿ ಪ್ರಾಯೋಗಿಕ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮದ ಅಂಗವಾಗಿ ರಾಜ್ಯದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ದಾವಣಗೆರೆ ನಗರದ ರೈತರ ಬೀದಿಗೆ ಬೇಟಿ ನೀಡಿ, ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿದರು.
Join Whatsapp Group NammaDavangere 04
Join Whatsapp Group NammaDavangere 05
ಈ ಸಂದರ್ಭದಲ್ಲಿ ಗೃಹ ಸಚಿವರು ಮನೆ ಮನೆಗೆ ತೆರಳಿ ಜನರ ಅಹವಾಲುಗಳನ್ನು ಸ್ವಯಂ ಆಲಿಸಿ, ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಬಗ್ಗೆ ವಿವರಿಸಿದರು. ಅವರು ಈ ಕಾರ್ಯಕ್ರಮದಿಂದ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ನೇರ ಸಂಬಂಧ ಬೆಸೆದು, ಶಾಂತಿ ಮತ್ತು ಭದ್ರತೆ ಹೆಚ್ಚುವುದು ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದರು.

👥 ಅಧಿಕಾರಿಗಳ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಮಧ್ಯ ವಲಯದ ಐಜಿಪಿ ಶ್ರೀ ರವಿಕಾಂತೇಗೌಡ ಐಪಿಎಸ್, ಮತ್ತು ದಾವಣಗೆರೆ ಜಿಲ್ಲೆಯ ಪೊಲೀಸ್ ಅಧೀಕ್ಷಕ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ಉಪಸ್ಥಿತರಿದ್ದು, ಸ್ಥಳೀಯರ ಅಹವಾಲುಗಳನ್ನು ಆಲಿಸಿ ಸೂಕ್ತ ಮಾರ್ಗದರ್ಶನ ನೀಡಿದರು.

🎯 ಕಾರ್ಯಕ್ರಮದ ಉದ್ದೇಶ:
- ಜನಸಾಮಾನ್ಯರ ಜತೆ ನೇರ ಸಂಪರ್ಕ ಸಾಧಿಸುವುದು
- ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು
- ಸ್ಥಳೀಯ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವುದು
- ಪೊಲೀಸ್ ಇಲಾಖೆ ಮೇಲೆ ನಂಬಿಕೆ ಮತ್ತಷ್ಟು ಬಲಪಡಿಸುವುದು
ದಾವಣಗೆರೆ ನಗರದ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಸ್ಪಂದನೆ ದೊರೆತಿದ್ದು, ಈ ನೂತನ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರ ಪ್ರದೇಶಗಳಲ್ಲಿ ಕೂಡ ಜಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



