
ನಮ್ಮ ದಾವಣಗೆರೆ ಏ. 03: ಬಹಳಷ್ಟು ಜನ ತಮ್ಮ ವೈಯಕ್ತಿಕ ಫೋಟೋಗಳನ್ನು ಮೋಜಿಗಾಗಿ ಘಿಬ್ಲಿ ಶೈಲಿಯ ಚಿತ್ರಗಳನ್ನು ರಚಿಸಲು ಚಾಟ್ ಜಿಪಿಟಿ ಮತ್ತು ಗ್ರೋಕ್ 03 ನಂತಹ ಆರ್ಟಿಫಿಷಿಯಲ್ ಇಂಟೆಲ್ಲೇಜೆನ್ಸ ಪರಿಕರಗಳನ್ನು ಬಳಸುವುದರಲ್ಲಿ ಇತ್ತೀಚೆಗೆ ಕಂಡುಬಂದಿರುವ ಹೆಚ್ಚಳವು ಗಂಭೀರ ಗೌಪ್ಯತಾ ಕಾಳಜಿ ಇಲ್ಲದೆ ವರ್ತಿಸುತ್ತಿರುವುದು ಕಂಡುಬಂದಿದೆ.
ತಮ್ಮ ಅಥವಾ ಕುಟುಂಬದ ಚಿತ್ರಗಳನ್ನು ಅಪ್‌ಲೋಡ್ ಮಾಡುವುದರಿಂದ ಬಳಕೆದಾರರ ಒಪ್ಪಿಗೆಯಿಲ್ಲದೆಯೇ ಆರ್ಟಿಫಿಷಿಯಲ್ ಇಂಟೆಲ್ಲೇಜೆನ್ಸ ಕೈಗೆ ನಮ್ಮ ವಯಕ್ತಿಕ ಡೇಟಾ ಕೊಡುವುದು ಬಹಳ ತಪ್ಪು. ಯಾವುದೇ ಒಂದು ಸಾಫ್ಟ್‌ವೇರ್ ನ ಗೌಪ್ಯತಾ ನೀತಿ ಗೊತ್ತಿಲ್ಲದೇ ಅಥವಾ ಅದನ್ನು ನಾವು ಸರಿಯಾಗಿ ಓದಿಕೊಳ್ಳದೆ ನಮ್ಮ ಫೋಟೋಗಳನ್ನು ಅದಕ್ಕೆ ಅಪ್‌ಲೋಡ್ ಮಾಡುವುದು ಎಂದರೆ ನಮ್ಮನ್ನು ನಾವು ತೊಂದರೆಗೆ ನೂಕಿಕೊಳ್ಳುವುದು ಎಂದೇ ಅರ್ಥ. ಇಂತಹ ಒಂದು ಸಾಫ್ಟ್ವೇರ್ ಅಥವಾ ಅಪ್ ಗಳಿಂದ ದೂರವಿರಿ ಎಂದು ತಜ್ಞರು ಎಚ್ಚರಿಸಿದ್ದಾರೆ ಆದರೂ ಜನಕ್ಕೆ ಅರ್ಥವಾಗುತ್ತಿಲ್ಲ..! ತಮ್ಮ ಫೇಸ್ಬುಕ್ ಖಾತೆ ಅಥವಾ ವಾಟ್ಸಪ್ಪ್ ಸ್ಟೇಟಸ್ ಗೆ ಫೋಟೋಗಳನ್ನು ಹಾಕಿಕೊಂಡು ಲೈಕ್ಸ್ ಮತ್ತು ಶೇರ್ ಗೋಸ್ಕರವೇ ಕಾಯ್ದು ಕುಳಿತಿದ್ದಾರೆ..
ಘಿಬ್ಲಿ ಶೈಲಿಯ ಭಾವಚಿತ್ರಗಳ ಪ್ರವಾಹವೇ ಸಾಮಾಜಿಕ ಮಾಧ್ಯಮವನ್ನು ಆಕ್ರಮಿಸಿಕೊಂಡಿದೆ. ಬಳಕೆದಾರರು ತಮ್ಮ ಫೋಟೋಗಳನ್ನು ಘಿಬ್ಲಿ-ಫೈಡ್ ಚಿತ್ರಗಳನ್ನಾಗಿ ಮಾಡಿಕೊಂಡು ಸ್ನೇಹಿತರಲ್ಲಿ ಹಂಚಿಕೊಳ್ಳುವುದು ವಿಚಿತ್ರ ಇಂಟರ್ನೆಟ್ ಪ್ರವೃತ್ತಿಯಾಗಿ ಪ್ರಾರಂಭವಾದದ್ದು ಈಗ ಬಿಸಿ ಚರ್ಚೆಗೆ ನಾಂದಿ ಹಾಡಿದೆ.
ಸದ್ದಿಲ್ಲದೆ ಬೃಹತ್ ಪ್ರಮಾಣದಲ್ಲಿ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತಿರಬಹುದು ಎಂದು ಡಿಜಿಟಲ್ ಗೌಪ್ಯತಾ ಸಲಹೆಗಾರರು ಎಚ್ಚರಿಸಿದ್ದಾರೆ ಆದರೂ ಸಹ ಬಳಕೆದಾರರು ಎರಡನೇ ಆಲೋಚನೆಯಿಲ್ಲದೆ ಸ್ವಯಂಪ್ರೇರಣೆಯಿಂದ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ನಿಮ್ಮ ಫೋಟೋವನ್ನು ದುರುಪಯೋಗಪಡಿಸಿಕೊಳ್ಳಬಹುದು ಅಥವಾ ಬೇರೆ ಯಾವುದೇ ಕಾರ್ಯಗಳಿಗೆ ಅದನ್ನು ಬಳಸಿಕೊಳ್ಳಬಹುದು. ನಿಮ್ಮ ಒಪ್ಪಿಗೆಯಿಲ್ಲದೆ ಡೇಟಾ ಬ್ರೋಕರ್‌ಗಳಿಗೆ ನಿಮ್ಮ ಡಾಟಾವನ್ನು ಮಾರಾಟ ಮಾಡಬಹುದು. ಸೈಬರ್ ಸ್ಮಾರ್ಟ್ ಆಗಿರಿ. ನಿಮ್ಮ ಗೌಪ್ಯತೆ ಮುಖ್ಯವಾಗಿದೆ.
ಅಂಕಣಕಾರರು:
ವೇಣುಗೋಪಾಲ್ ಕೆ.
ನಮ್ಮ ದಾವಣಗೆರೆ ಸಂಪಾದಕರು.
ಮೈಕ್ರೋಸಾಫ್ಟ್ ಸರ್ಟಿಫೈಡ್ ಟೆಕ್ನಾಲಜಿ ಸ್ಪೆಷಲಿಸ್ಟ್.
