ಬುರುಡೆ ಚೆನ್ನ ಅರೆಸ್ಟ್: ಎಸ್ಐಟಿ ತನಿಖೆ ಆರಂಭ

ಧರ್ಮಸ್ಥಳ ವ್ಯಾಪ್ತಿಯಲ್ಲಿ ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿಕೊಂಡಿದ್ದ “ಮಾಸ್ಕ್ ಮ್ಯಾನ್”ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈತನ ಗುರುತು ಸಿ.ಎನ್. ಚಿನ್ನಯ್ಯ ಅಲಿಯಾಸ್ ಚೆನ್ನ ಎಂದು ಪತ್ತೆಯಾಗಿದ್ದು, ತಲೆಬುರುಡೆ ತಂದ ಪ್ರಕರಣದಲ್ಲಿ ಪೊಲೀಸರು ಅವನನ್ನು ಅರೆಸ್ಟ್ ಮಾಡಿದ್ದಾರೆ.

Join Whatsapp Group NammaDavangere 04
Join Whatsapp Group NammaDavangere 05

ಬಂಧಿತನನ್ನು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಲು ಎಸ್‌ಐಟಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಯಲಿದೆ. ಎಸ್‌ಐಟಿ ಮೂಲಗಳ ಪ್ರಕಾರ, ಚಿನ್ನಯ್ಯ ವಿರುದ್ಧ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದಾರೆ.

ಹಿನ್ನೆಲೆ:
ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ “ಮಾಸ್ಕ್ ಮ್ಯಾನ್” ನೀಡಿದ್ದ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. 14 ಸ್ಥಳಗಳಲ್ಲಿ ಅಗೆದ ವೇಳೆ ಒಂದೆಡೆ ಅಸ್ಥಿಪಂಜರ ಪತ್ತೆಯಾ ಗಿದ್ದವು, ಆದರೆ ಆ ಅಸ್ಥಿಪಂಜರ ಗಳನ್ನು ಅಪರಾಧಿ ಚೆನ್ನನೇ ತೆಗೆದುಕೊಂಡು ಬಂದಿದ್ದನು ಎಂಬುದು ಗೊತ್ತಾಗಿದೆ. ನಂತರ ಉತ್ಖನನ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

“ಮಾಸ್ಕ್ ಮ್ಯಾನ್” ಚೆನ್ನ ವಿಚಾರಣೆಯಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿದ್ದರೂ, ಇತ್ತೀಚೆಗೆ ಅವನ ಜೊತೆ ಕೆಲಸ ಮಾಡಿದ್ದ ಮಂಡ್ಯದ ವ್ಯಕ್ತಿ “ದೂರುದಾರ ಹೇಳಿಕೆಗಳು ಸುಳ್ಳು” ಎಂದು ಬಾಯಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

  • Related Posts

    ಬಾಲ್ಯ ವಿವಾಹ ನಿಷೇಧ ಕುರಿತ ಚಿಂತನಾ-ಮಂಥನ ಕಾರ್ಯಗಾರ

    ನಮ್ಮ ದಾವಣಗೆರೆ ಆ.22: ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಅವಿರತವಾಗಿ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ…

    ಅಕ್ರಮ ಹಣದ ವ್ಯವಹಾರ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವೀರೇಂದ್ರ (ಪಪ್ಪಿ) ಇಡಿ ವಶಕ್ಕೆ.

    ಕಾಂಗ್ರೆಸ್ ಶಾಸಕ ವೀರೇಂದ್ರ ಅಲಿಯಾಸ್ ಪಪ್ಪಿ ಅವರನ್ನು ಅಕ್ರಮ ಆನ್‍ಲೈನ್ ಸಟ್ಟಾ ಮತ್ತು ಹಣದ ವ್ಯವಹಾರ ಪ್ರಕರಣದ ಸಂಬಂಧ ಎನ್ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ED) ಅಧಿಕಾರಿಗಳು ಬಂಧಿಸಿದ್ದಾರೆ. ಈ ದಾಳಿ ಸಂದರ್ಭದಲ್ಲಿ ತನಿಖಾ ತಂಡವು ಅವರ ನಿವಾಸ ಹಾಗೂ ಸಂಬಂಧಿತ ಸ್ಥಳಗಳಿಂದ ಸುಮಾರು…

    Leave a Reply

    Your email address will not be published. Required fields are marked *

    You Missed

    ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

    ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

    ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

    ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

    ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

    ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

    ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

    ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

    ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

    ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

    ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

    ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

    ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

    ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

    ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

    ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

    ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

    ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

    ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
    ×