ಕೋಳಿ ಶೀತ ಜ್ವರ : ಸಾರ್ವಜನಿಕರು, ಕೋಳಿ ಫಾರಂ ಹಾಗೂ ಕೋಳಿ ಅಥವಾ ಮೊಟ್ಟೆ ಮಾರಾಟಗಾರರಿಗೆ ರೋಗ ಹರಡದಂತೆ ಎಚ್ಚರವಹಿಸಿ

ನಮ್ಮ ದಾವಣಗೆರೆ, ಮಾ.06: ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅವೈಜ್ಞಾನಿಕ ಮಾಹಿತಿಗೆ ಕಿವಿಗೊಡಬೇಡಿ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೆವಿಸುವುದರಿಂದ ಈ ರೋಗ ಬರುವುದಿಲ್ಲ, ಆದ್ದರಿಂದ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದ್ದಾರೆ.

Join Whatsapp Group NammaDavangere 04
Join Whatsapp Group NammaDavangere 05

ಕೋಳಿ ಫಾರಂ ಹಾಗೂ ಮಾಂಸದ ಕೋಳಿ ಅಥವಾ ಮೊಟ್ಟೆ ಕೋಳಿ ಫಾರಂ, ಹಾಗೂ ಅಂಗಡಿ ಸುತ್ತಮುತ್ತ ಕಚ್ಚಾವಸ್ತುಗಳನ್ನು ಇಟ್ಟುಕೊಳ್ಳದೇ ಸುತ್ತಮುತ್ತಲೂ ಸೋಂಕು ನಿವಾರಕಗಳೊಂದಿಗೆ ಸ್ವಚ್ಚವಾಗಿಟ್ಟುಕೊಳ್ಳಬೇಕು. ತ್ಯಾಜ್ಯವನ್ನು ಆಗಿಂದಾಗ್ಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರೊಂದಿಗೆ ಕೋಳಿ ಫಾರಂಗಳಲ್ಲಿ ಕೆಲಸ ಮಾಡುತ್ತಿರುವವರ ಆರೋಗ್ಯದ ಬಗ್ಗೆ ನಿಗಾವಹಿಸಿ, ಬಟ್ಟೆ, ಶೂ, ಕೈ ಕಾಲುಗಳಿಗೆ ನಂಜುನಾಶಕ ದ್ರಾವಣವನ್ನು ಕಡ್ಡಾಯವಾಗಿ ಬಳಸಬೇಕು. ಅಷ್ಟೇ ಅಲ್ಲದೇ ಫಾರಂಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಪಿಪಿಇ ಕಿಟ್‍ಗಳನ್ನು ಧರಿಸುವಂತೆ ಕ್ರಮವಹಿಸಬೇಕು. ಕೋಳಿ ಶೀತಜ್ವರ ಕಂಡುಬಂದ ಜಿಲ್ಲೆಗಳಿಂದ ಯಾವುದೆ ಕೋಳಿ, ಕೋಳಿ ಉತ್ಪನ್ನಗಳನ್ನು ಖರೀದಸಬಾರದು ಎಂದರು.

ಹಾಗೆಯೇ ಅಡಕೆ ಬೆಳೆಗಾರರು ಸದ್ಯಕ್ಕೆ ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಕೋಳಿ ಗೊಬ್ಬರವನ್ನು ಖರೀದಿಸಿ ಸಾಗಾಣೆ ಮಾಡಬಾರದು. ಕೋಳಿ ಫಾರಂ, ಇತರೆ ಪಕ್ಷಿಗಳು ಹಾಗೂ ಕೋಳಿ ಉತ್ಪನ್ನಗಳೊಂದಿಗೆ ಸಂಪರ್ಕದಲ್ಲಿರುವವರು ಮಾಸ್ಕ್ ಮತ್ತು ಗ್ಲೌಸ್‍ಗಳನ್ನು ಉಪಯೋಗಿಸಬೇಕು. ಆರೋಗ್ಯವಂತ ಕೋಳಿ, ಶಂಕಾಸ್ಪದವಾಗಿ ಮರಣ ಹೊಂದಿದ ಪಕ್ಷಿಗಳು ಗಮನಕ್ಕೆ ಬಂದ ತಕ್ಷಣ ಇಲಾಖೆಯ ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

Related Posts

ಸ್ವದೇಶೀ ಬಳಿಸಿ – ದೇಶ ಉಳಿಸಿ

“ಸ್ವದೇಶೀ” ಎಂಬ ಪದವು ಕೇವಲ ಉತ್ಪನ್ನ ಅಥವಾ ವಸ್ತುವಿನ ಆಯ್ಕೆ ಅಲ್ಲ, ಅದು ನಮ್ಮ ರಾಷ್ಟ್ರಭಕ್ತಿಯ ಪ್ರತಿಬಿಂಬ, ದೇಶದ ಅಭಿವೃದ್ಧಿಗೆ ಕೊಡುವ ಒಂದು ಅಮೂಲ್ಯ ಕೊಡುಗೆ. “ಸ್ವದೇಶೀ” ಎಂದರೆ ಅದರಲ್ಲಿ ಸ್ವಾವಲಂಬನೆ, ಆತ್ಮಗೌರವ, ಆರ್ಥಿಕ ಶಕ್ತಿ ಮತ್ತು ರಾಷ್ಟ್ರೀಯ ಏಕತೆಯ ತತ್ವ…

ನಾಯಿಗಳ ಹೆಚ್ಚಳಕ್ಕೆ ಕಡಿವಾಣ ಹಾಕಲು ಸಂತಾನಹರಣ ಚಿಕತ್ಸೆ ಕೈಗೊಳ್ಳಲು ಸೂಚನೆ

ನಮ್ಮ ದಾವಣಗೆರೆ ಸೆ.10: ನಾಯಿಗಳು ಮಹಿಳೆ ಮತ್ತು ಮಕ್ಕಳ ಮೇಲೆ ದಾಳಿ ಮಾಡುವುದನ್ನು ಕಾಣಲಾಗಿದೆ. ಇದರ ನಿಯಂತ್ರಣಕ್ಕಾಗಿ ನಾಯಿಗಳು ಹೆಚ್ಚಾಗದಂತೆ ಸಂತಾನಹರಣ ಚಿಕಿತ್ಸೆ ಮತ್ತು ಸಂತತಿ ಹೆಚ್ಚಳವಾಗಂತೆ ಲಸಿಕೆ ಹಾಕುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚಿಸಿದರು. ಬುಧವಾರ(ಸೆ.10) ರಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗದಲ್ಲಿ…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×