ನಗರದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಮಾಡುವವರ ವಿರುದ್ಧ ಸಂಚಾರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ

ದಿನಾಂಕ: 21-06-2024 ರಂದು ದಾವಣಗೆರೆ ನಗರದಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಸಂಚಾರ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಮಂಜುನಾಥ ನಲವಾಗಲು ರವರ ನೇತೃತ್ವದಲ್ಲಿ ದಕ್ಷಿಣ ಸಂಚಾರ ಹಾಗೂ ಉತ್ತರ ಸಂಚಾರ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡಗಳು ನಗರದ ವಿವಿಧ ಭಾಗಗಳಲ್ಲಿ ಸಂಚಾರ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಿದರು. ಇಂದು ನಗರದ ವಿವಿಧ ಕಡೆ ಕರ್ಕಶ ದ್ವನಿ ಸೂಸುವ ಸೈಲೆನ್ಸರ್, ಕರ್ಕಶ ದ್ವನಿ ಸೂಸುವ ಹಾರ್ನ್ ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ವಾಹನ ಸವಾರರಿಗೆ ಸ್ಥಳದಂಡವನ್ನುವಿಧಿಸಲಾಗಿರುತ್ತದೆ ಅಲ್ಲದೇ ಇತರೆ ಸಂಚಾರ ನಿಯಮಗಳ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಸ್ಥಳದಂಡವನ್ನು ವಿಧಿಸಲಾಗಿದ್ದು, ವಾಹನ ಸವಾರರಿಗೆ ಸಂಚಾರ ನಿಯಮಗಳ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಲಾಯಿತು.

*ಕರ್ಕಶ ದ್ವನಿ ಸೂಸುವ ಹಾರ್ನ್ ಗಳಿಗೆ ಸಂಬಂಧಿಸದಂತೆ ಒಟ್ಟು 25 ಪ್ರಕರಣಗಳಲ್ಲಿ 12,500/- ಸಾವಿರ ರೂ ದಂಡ,

*ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಸಂಬಂಧಿಸದಂತೆ ಒಟ್ಟು 105 ಪ್ರಕರಣಗಳಲ್ಲಿ 53,000/- ಸಾವಿರ ರೂ ದಂಡ,

* ಟ್ರಿಪಲ್ ರೈಡಿಂಗ್ ಸಂಬಂಧಿಸಿದಂತೆ 20 ಪ್ರಕರಣಗಳಲ್ಲಿ 10,000/- ಸಾವಿರ ರೂ ದಂಡ,

* ಅಜಾಗರೂಕ ಚಾಲನೆ ಸಂಬಂಧಿಸಿದಂತೆ 2 ಪ್ರಕರಣಗಳಲ್ಲಿ 3000/- ಸಾವಿರ ರೂ ದಂಡ,

* ಸೀಟ್ ಬೆಲ್ಟ್ ಗೆ ಸಂಬಂಧಿಸಿದಂತೆ 12 ಪ್ರಕರಣಗಳಲ್ಲಿ 6000/- ಸಾವಿರ ರೂ ದಂಡ,

*ಬೈಕ್ ಮತ್ತು ಆಟೋಗಳಲ್ಲಿ ಹೆಚ್ಚುವರಿ ಪ್ರಯಾಣಿಕರು ಚಾಲನೆ ಮಾಡಿದ್ದರಲ್ಲಿ 35 ಪ್ರಕರಣಗಳಲ್ಲಿ 7000/- ಸಾವಿರ ರೂ ದಂಡ ಸೇರಿದಂತೆ ಇತರೆ ಸಂಚಾರ ನಿಯಮ ಲ್ಲಂಘನೆ ಪ್ರಕರಣಗಳು ದಾಖಲಾಗಿರುತ್ತವೆ.

ಇನ್ನೂ ಮುಂದೆಯೂ ಇದೇ ರೀತಿಯ ಕಾರ್ಯಚರಣೆಯು ದಾವಣಗೆರೆ ಜಿಲ್ಲೆಯಲ್ಲಿ ನಡೆಯಲಿದ್ದು ವಾಹನ ಸವಾರರು ಕಡ್ಡಾಯವಾಗಿ ಚಾಲನಾ ಪರವಾನಿಗೆ, ವಾಹನದ ಇನ್ಶೂರೆನ್ಸ್, ಹೊಂದಿರಬೇಕು, ವಾಹನಗಳಲ್ಲಿ ಕರ್ಕಶ ದ್ವನಿ ಸೂಸುವ ಸೈಲೆನ್ಸರ್, ಕರ್ಕಶ ದ್ವನಿ ಸೂಸುವ ಹಾರ್ನ್ ಗಳ ನ್ನು ಹಾಕಬಾರದು ಹಾಗೂ ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸ ಬೇಕು, ಟ್ರಿಪಲ್ ರೈಡಿಂಗ್, ಏಕಮುಖ ಸಂಚಾರ ಮಾಡಬಾರದು, ವಾಹನ ಸವಾರರು ಸೀಟ್ ಬ್ಯಾಲ್ಟ್ ಧರಿಸಿರಬೇಕು.

ಅಲ್ಲದೇ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್ಇಡಿ ದೀಪಗಳನ್ನು ವಾಹನಗಳಿಗೆ ಅಳವಡಿಸುತ್ತಿದ್ದು, ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಕೇಂದ್ರ ಮೋಟಾರು ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡದಂತೆ ವಾಹನ ಸವಾರರು ಹೆಡ್ಲೈಟ್ ಅಳವಡಿಕೆ ಮಾಡಿಕೊಳ್ಳಬೇಕು, ಕಾಯ್ದೆ ಉಲ್ಲಂಘಿಸಿದರೆ ಅಂತಹ ವಾಹನ ಸವಾರರ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಲಾಗುವುದು , ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ವಾಹನ ಚಾಲನೆ ಮಾಡುವ ಎಲ್ಲರೂ ಪಾಲಿಸಬೇಕು – ಒಂದು ವೇಳೆ ಸಂಚಾರ ನಿಯಮ ಪಾಲಿಸದೇ ಹೋದರೆ ಅಂತಹ ಚಾಲಕರ ಮೇಲೆ ಇದೇ ರೀತಿ ಕ್ರಮಜರುಗಿಸಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಟರು ಸೂಚಿಸಿರುತ್ತಾರೆ.

Related Posts

ನಾಯಿಗಳ ಹೆಚ್ಚಳಕ್ಕೆ ಕಡಿವಾಣ ಹಾಕಲು ಸಂತಾನಹರಣ ಚಿಕತ್ಸೆ ಕೈಗೊಳ್ಳಲು ಸೂಚನೆ

ನಮ್ಮ ದಾವಣಗೆರೆ ಸೆ.10: ನಾಯಿಗಳು ಮಹಿಳೆ ಮತ್ತು ಮಕ್ಕಳ ಮೇಲೆ ದಾಳಿ ಮಾಡುವುದನ್ನು ಕಾಣಲಾಗಿದೆ. ಇದರ ನಿಯಂತ್ರಣಕ್ಕಾಗಿ ನಾಯಿಗಳು ಹೆಚ್ಚಾಗದಂತೆ ಸಂತಾನಹರಣ ಚಿಕಿತ್ಸೆ ಮತ್ತು ಸಂತತಿ ಹೆಚ್ಚಳವಾಗಂತೆ ಲಸಿಕೆ ಹಾಕುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚಿಸಿದರು. ಬುಧವಾರ(ಸೆ.10) ರಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗದಲ್ಲಿ…

ಗ್ರಾಹಕರ ವಿಶ್ವಾಸಕ್ಕೆ ಹೆಸರಾಗಿರುವ ‘ರತನ್ ಗೋಲ್ಡ್’ – ನಿಮ್ಮ ಚಿನ್ನವನ್ನು ಒಳ್ಳೆ ಬೆಲೆಗೆ ಖರೀದಿಸಲಾಗುತ್ತದೆ.

ಭಾರತದಲ್ಲಿ ಚಿನ್ನ ಎಂದರೆ ಅದು ಕೇವಲ ಒಂದು ಲೋಹವಲ್ಲ, ಅದು ಸಂಸ್ಕೃತಿ, ಸಂಪ್ರದಾಯ, ಭದ್ರತೆ ಮತ್ತು ಬದುಕಿನ ಆಧಾರವೆಂದು ಕಾಣಲಾಗುತ್ತದೆ. ಆದರೆ ತುರ್ತು ಅವಶ್ಯಕತೆಯಲ್ಲಿ ಚಿನ್ನವನ್ನು ಮಾರಾಟ ಮಾಡಬೇಕಾದಾಗ, ಅನೇಕರು ವಂಚನೆಗೆ ಗುರಿಯಾಗಿರುವುದನ್ನು ನಾವು ಕಂಡಿದ್ದೇವೆ. ಜನರಿಗೆ ನ್ಯಾಯಯುತ ಬೆಲೆ ದೊರೆಯದೇ…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×