ಬಜೆಟ್ 2024ರ ಮುಖ್ಯಾಂಶಗಳು: ಮಧ್ಯಮ ವರ್ಗ, ಉದ್ಯೋಗ ಕೌಶಲ್ಯ, ಯುವಕರು ಮತ್ತು ರೈತರ ಮೇಲೆ ಬಜೆಟ್ ಕೇಂದ್ರೀಕರಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಬಜೆಟ್ 2024 ಅನ್ನು ಮಂಡಿಸಿದರು. ಬಡವರು, ಮಹಿಳೆಯರು, ಯುವಕರು ಮತ್ತು ರೈತರು ಎಂಬ ನಾಲ್ಕು ಪ್ರಮುಖ ವರ್ಗಗಳ ಮೇಲೆ ಬಜೆಟ್ ಕೇಂದ್ರೀಕರಿಸಿದೆ ಎಂದು ಸೀತಾರಾಮನ್ ಹೇಳಿದರು. ಉದ್ಯೋಗ, ಕೌಶಲ್ಯ ಮತ್ತು ಇತರ ಅವಕಾಶಗಳಿಗಾಗಿ ರೂ 2 ಲಕ್ಷ ಕೋಟಿ ವೆಚ್ಚದ ಐದು ಯೋಜನೆಗಳ ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅನ್ನು ಅವರು ಘೋಷಿಸಿದರು.

2024 ರ ಲೋಕಸಭಾ ಚುನಾವಣೆಯ ನಂತರ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿದೆ ಅದನ್ನು ಹೊರತುಪಡಿಸಿ ಸೀತಾರಾಮನ್ ಅವರಿಗೆ ಇದು ದಾಖಲೆಯ ಏಳನೇ ಬಜೆಟ್ ಭಾಷಣವಾಗಿದೆ.

ಕೇಂದ್ರ ಬಜೆಟ್ 2024 ರ ಮುಖ್ಯಾಂಶಗಳು ಇಲ್ಲಿವೆ:
1) 1.52 ಮಿಲಿಯನ್ ರೂ. ಕೃಷಿ ಕ್ಷೇತ್ರಕ್ಕೆ ಹಣ ಮೀಸಲಿಡಲಾಗಿದೆ.
2) ದೇಶದ 100 ಜಿಲ್ಲೆಗಳಲ್ಲಿ ಬೆಳೆಗಳ ಡಿಜಿಟಲ್ ಸಮೀಕ್ಷೆ ನಡೆಸಲು ಯೋಜನೆ ರೂಪಿಸಲಾಗಿದೆ.
3) 5 ರಾಜ್ಯಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಕೇಂದ್ರದ ಇಚ್ಛೆ.
4)  ನೈಸರ್ಗಿಕ ಕೃಷಿಗೆ ಆದ್ಯತೆ ನೀಡಲು ಸರ್ಕಾರದ ಸರ್ವ ಕ್ರಮ.
5) ತರಕಾರಿ ಬೆಳೆಗಳ ಉತ್ಪಾದನೆ, ಸಂಗ್ರಹ ಉತ್ತೇಜನಕ್ಕಾಗಿ ರೈತರಿಗೆ ಕೇಂದ್ರದ ನೆರವು.
6)26 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂತ ರೈಲ್ವೆಯ ಹತ್ತು ಹಲವು ಯೋಜನೆಗಳು,
7)  ಮುಂದಿನ 5 ವರ್ಷಗಳವರೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ.
8)  ಮಧ್ಯಮ ವರ್ಗ, ಉದ್ಯೋಗ ಕೌಶಲ್ಯ, ಯುವಕರು ಮತ್ತು ರೈತರ ಗುರಿಯಾಗಿಸಿಕೊಂಡು ಹಲವು ಯೋಜನೆಗಳ ಜಾರಿ.
9) ಬಡವರು, ಮಹಿಳೆಯರು, ರೈತರು ಮತ್ತು ಯುವಕರ ಬಗ್ಗೆ ಸರ್ಕಾರದ ಕಾಳಜಿ.
10) ವಿಕಸಿತ ಭಾರತದ ಭರವಸೆಯೊಂದಿಗೆ ಅನೇಕ ಆರ್ಥಿಕ ಸುಧಾರಣಾ ಕ್ರಮಗಳು.
11)  ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ 1.48 ಲಕ್ಷ ಕೋಟಿ ಅನುದಾನ.
12) ಕೃಷಿ, ಉದ್ಯೋಗ, ಸಾಮಾಜಿಕ ನ್ಯಾಯ, ಸೇವೆಗಳು, ನಗರಾಭಿವೃದ್ಧಿ, ಇಂಧನ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ.

13) ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಗೆ ಆದ್ಯತೆ.
14) 300 ಯುನಿಟ್‌ವರೆಗೆ ಉಚಿತ ವಿದ್ಯುತ್ ಬಳಕೆಗೆ ಅವಕಾಶ ಕೊಡಲಾಗುವುದು.
15) ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಸೌರ ವಿದ್ಯುತ್ ಉತ್ಪಾದನಾ ಯೋಜನೆ.
16) ಬಿಹಾರದಲ್ಲಿ ರಸ್ತೆ ಅಭಿರುದ್ದಿಗೆ 26,000 ಕೋಟಿ ಮೀಸಲು.
17) ದೇಶೀಯ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ.
18) ಬೆಂಗಳೂರು – ಹೈದರಾಬಾದ್ ಹೆದ್ದಾರಿ ಅಭಿವೃದ್ದಿ ಯೋಜನೆ ಪ್ರಾರಂಭ.

ಕೊನೆಗೂ ಈ ಬಜೆಟ್‌ನಲ್ಲಿ ಚಿನ್ನ ಪ್ರಿಯರಿಗೆ ಸಮಾಧಾನ ತಂದಿದ. ಬೆಲೆ ಏರಿಕೆಯಿಂದ ಬೆಚ್ಚಿಬಿದ್ದಿದ್ದ ಬಂಗಾರ ಪ್ರಿಯರಿಗೆ ಮೋದಿ ಸರ್ಕಾರ ಭರ್ಜರಿ ಸುದ್ದಿ ತಂದಿದೆ. ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಮೇಲೆ ಕಸ್ಟಮ್ಸ್ ಶೇ.6ರಷ್ಟು ಇಳಿಕೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಚಿನ್ನ, ಬೆಳ್ಳಿ, ಪ್ಲಾಟಿನಂ ಬೆಲೆ ಇಳಿಕೆಯಾಗುವುದು ನಿಶ್ಚಿತ ಎನ್ನಲಾಗುತ್ತಿದೆ.

ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಹೊಸ ತೆರಿಗೆ ಪದ್ಧತಿ ಆಯ್ದುಕೊಂಡಿದ್ದ ತೆರಿಗೆದಾರರ ಮೂಗಿಗೆ ತುಪ್ಪ ಸವರಿದೆ. ಇದೇ ವೇಳೆ ಹಳೆ ತೆರಿಗೆ ಪದ್ಧತಿ ಆಯ್ದುಕೊಂಡಿದ್ದ ತೆರಿಗೆದಾರರನ್ನು ಸಂಪೂರ್ಣ ನಿರ್ಲಕ್ಷಿಸಿದೆ.
ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 50,000 ರೂ.ನಿಂದ 75,000 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇದರಿಂದ 4 ಕೋಟಿ ವೇತನದಾರರು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

 

Related Posts

ಸ್ವದೇಶೀ ಬಳಿಸಿ – ದೇಶ ಉಳಿಸಿ

“ಸ್ವದೇಶೀ” ಎಂಬ ಪದವು ಕೇವಲ ಉತ್ಪನ್ನ ಅಥವಾ ವಸ್ತುವಿನ ಆಯ್ಕೆ ಅಲ್ಲ, ಅದು ನಮ್ಮ ರಾಷ್ಟ್ರಭಕ್ತಿಯ ಪ್ರತಿಬಿಂಬ, ದೇಶದ ಅಭಿವೃದ್ಧಿಗೆ ಕೊಡುವ ಒಂದು ಅಮೂಲ್ಯ ಕೊಡುಗೆ. “ಸ್ವದೇಶೀ” ಎಂದರೆ ಅದರಲ್ಲಿ ಸ್ವಾವಲಂಬನೆ, ಆತ್ಮಗೌರವ, ಆರ್ಥಿಕ ಶಕ್ತಿ ಮತ್ತು ರಾಷ್ಟ್ರೀಯ ಏಕತೆಯ ತತ್ವ…

ರಿಲಯನ್ಸ್ ಫೌಂಡೇಷನ್‌ ನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; 5100 ವಿದ್ಯಾರ್ಥಿಗಳಿಗೆ ಅವಕಾಶ

ರಿಲಯನ್ಸ್ ಫೌಂಡೇಷನ್‌ನ ವಾರ್ಷಿಕ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳು ಮತ್ತೊಮ್ಮೆ ತೆರೆದಿವೆ. 2025-26ರ ಶೈಕ್ಷಣಿಕ ವರ್ಷಕ್ಕೆ ರಿಲಯನ್ಸ್ ಫೌಂಡೇಷನ್ 5100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಪ್ರಥಮ ವರ್ಷದ ಪೂರ್ಣಾವಧಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಭಾರತದಲ್ಲಿ ಉನ್ನತ…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×