ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಯಾರು?

ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ 20 ವರ್ಷದ ಪೆನ್ಸಿಲ್ವೇನಿಯನ್ ವ್ಯಕ್ತಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ್ದನು. ಕೂದಲೆಳೆ ಅಂತರದಿಂದ ಡೊನಾಲ್ಡ್ ಟ್ರಂಪ್ ಪಾರಾಗಿದ್ದರು.

ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ರನ್ನು ಕೊಳ್ಳಲಿ ಪ್ರಯತ್ನಪಟ್ಟ ಮ್ಯಾಥ್ಯೂ ಕ್ರೂಕ್ಸ್ (20) ನನ್ನ ಗುಂಡಿಕ್ಕಿ ಕೊಲ್ಲಲಾಯಿತು. ಈ ಘಟನೆಯಲ್ಲಿ 50 ವರ್ಷದ ವ್ಯಕ್ತಿ ಸಹ ಸಾವನ್ನಪ್ಪಿದ್ದಾರೆ, ಇಬ್ಬರು ಗಾಯಗೊಂಡಿದ್ದಾರೆ ಮತ್ತು ಟ್ರಂಪ್ ಅವರ ಬಲ ಕಿವಿಗೆ ಗಾಯವಾಗಿದೆ.

ಅಧಿಕಾರಿಗಳ ಪ್ರಕಾರ ಟ್ರಂಪ್ ಮಾತನಾಡುತ್ತಿದ್ದ ವೇದಿಕೆಯಿಂದ 150 ಗಜಗಳಷ್ಟು (140 ಮೀಟರ್) ಮೇಲ್ಛಾವಣಿಯ ಮೇಲೆ ಕುಳಿತುಕೊಂಡು ಕ್ರೂಕ್ಸ್ ಗುಂಡಿನ ಮಳೆಗರೆದಿದ್ದನು, ಆರೋಪಿ ಕ್ರೂಕ್ಸ್ ತಂದೆ ಕಾನೂನುಬದ್ಧವಾಗಿ ಖರೀದಿಸಿದ AR-15-ಶೈಲಿಯ ಸೆಮಿಯಾಟೊಮ್ಯಾಟಿಕ್ ರೈಫಲ್ ಅನ್ನು ಗುಂಡು ಹಾರಿಸಲು ಉಪಯೋಗಿಸಿದ್ದನು ಎನ್ನಲಾಗಿದೆ.

ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಯಾರು?
ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನ ನಿವಾಸಿಯಾಗಿರುವ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ನೋಂದಾಯಿತ ರಿಪಬ್ಲಿಕನ್ ಆಗಿದ್ದು, ಅವನು ಈ ವರ್ಷ ನವೆಂಬರ್ 5 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಮೊದಲ ಅಧ್ಯಕ್ಷೀಯ ಮತವನ್ನು ಚಲಾಯಿಸಲು ಅರ್ಹನಾಗಿದ್ದನು.

ಅವನು 2022 ರಲ್ಲಿ ಬೆಥೆಲ್ ಪಾರ್ಕ್ ಹೈಸ್ಕೂಲ್‌ನಿಂದ ಉತ್ತೀರ್ಣನಾಗಿದ್ದನು, ಅವನ ಗುರುಗಳು ಹೇಳುವಹಾಗೆ ಅವನು ಶಾಂತ ಸ್ವಭಾವದವನು ಹಾಗೂ ಒಳ್ಳೆಯ ವಿದ್ಯಾರ್ಥಿ ಎಂದಿದ್ದಾರೆ. ಕ್ರೂಕ್ಸ್ ನರ್ಸಿಂಗ್ ಹೋಮ್‌ನಲ್ಲಿ ಆಹಾರ ಸಹಾಯಕನಾಗಿಕೆಲಸ ಮಾಡುತ್ತಿದ್ದನು ಎಂದು ಮನೆಯ ನಿರ್ವಾಹಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ದಾಖಲೆಗಳ ಪ್ರಕಾರ, ಅವರ ತಂದೆ ನೋಂದಾಯಿತ ರಿಪಬ್ಲಿಕನ್ ಮತ್ತು ಅವರ ತಾಯಿ ನೋಂದಾಯಿತ ಡೆಮೋಕ್ರಾಟ್. ಅವನ ಈ ಘೋರ ನಡೆಗೆ ಕಾರಣವೇನು ಎಂದು ಇನ್ನೂ ಹೆಚ್ಚಿನ ತನಿಖೆಯಿಂದ ತಿಳಿದುಬರಬೇಕಿದೆ.

Related Posts

ಬಾಲ್ಯ ವಿವಾಹ ನಿಷೇಧ ಕುರಿತ ಚಿಂತನಾ-ಮಂಥನ ಕಾರ್ಯಗಾರ

ನಮ್ಮ ದಾವಣಗೆರೆ ಆ.22: ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಅವಿರತವಾಗಿ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ…

ಬುರುಡೆ ಚೆನ್ನ ಅರೆಸ್ಟ್: ಎಸ್ಐಟಿ ತನಿಖೆ ಆರಂಭ

ಧರ್ಮಸ್ಥಳ ವ್ಯಾಪ್ತಿಯಲ್ಲಿ ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿಕೊಂಡಿದ್ದ “ಮಾಸ್ಕ್ ಮ್ಯಾನ್”ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈತನ ಗುರುತು ಸಿ.ಎನ್. ಚಿನ್ನಯ್ಯ ಅಲಿಯಾಸ್ ಚೆನ್ನ ಎಂದು ಪತ್ತೆಯಾಗಿದ್ದು, ತಲೆಬುರುಡೆ ತಂದ ಪ್ರಕರಣದಲ್ಲಿ ಪೊಲೀಸರು ಅವನನ್ನು ಅರೆಸ್ಟ್ ಮಾಡಿದ್ದಾರೆ. Join Whatsapp Group NammaDavangere…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×