ದಾವಣಗೆರೆ ಆ.21: ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಆನಗೋಡು 66/11 ಕೆವಿ ಉಪಕೇಂದ್ರದ 11 ಕೆವಿ ಮಾರ್ಗಗಳ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಆಗಸ್ಟ್ 22 ಮತ್ತು 23 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
Join Whatsapp Group NammaDavangere 04
Join Whatsapp Group NammaDavangere 05
ಅತ್ತಿಗೆರೆ, ಬಾಡಾ, ಚಂದ್ರೇನಹಳ್ಳಿ, ಚಿಕ್ಕತೊಗಲೇರಿ, ದ್ಯಾಮೇನಹಳ್ಳಿ, ಗಂಧಮುಕ್ತೇನಹಳ್ಳಿ, ಗೋಪನಾಳು, ಹಿರೇತೊಗಲೇರಿ, ಕಾಶೀಪುರ, ಕುರ್ಕಿ, ರಾಜಗರ್ ಕ್ಯಾಂಪ್ ರಾಮಗೊಂಡನಹಳ್ಳಿ, ತೋಳಹುಣಸೆ, ವೆಂಕಟೇಶ್ವರ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
66/11 ಕೆವಿ ಅವರಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಆಗಸ್ಟ್ 22 ರಂದು ಬೆಳಿಗ್ಗೆ 8.30 ರಿಂದ ಸಂಜೆ 6.30 ರವರೆಗೆ ಶೇಖರಪ್ಪ ನಗರ, ಗುಜರಿ ಲೈನ್, ಬಿಟಿ ಲೇಔಟ್, ಬಂಬೂ ಬಜಾರ್, ಆನೆಕೊಂಡ, ಚೌಡೇಶ್ವರಿ ಟೆಂಪಲ್, ಮಹಾವೀರ ಭವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಬಿಟಿ ಲೇಔಟ್, ಕೆ.ಆರ್ ರೋಡ್, ಜಾಲಿನಗರ, ಅರಳಿಮರ ಸರ್ಕಲ್, ಮಾಗನಳ್ಳಿ ರಸ್ತೆ, ಬೇತೂರ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.


