ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಶಾಲೆಗಳಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

ನಮ್ಮ ದಾವಣಗೆರೆ ಜೂನ್.22: ರಾಜ್ಯ ಯುವನೀತಿ-2012ರ ಅನುಷ್ಟಾನದಡಿ “ನಮ್ಮೂರ ಶಾಲೆಗೆ ನಮ್ಮ ಯುವಜನರು” ಯೋಜನೆಯನ್ನು 2017-18ನೇ ಸಾಲಿನಿಂದ ಅನ್ವಯವಾಗುವಂತೆ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಾನ್ಯತೆ ಪಡೆದಿರುವ ಕ್ರೀಡಾ ಸಂಸ್ಥೆಗಳು ಆಯೋಜಿಸುವ ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಆಯ್ಕೆಯಾದ ಪ್ರತಿ ಶಾಲೆಗೆ ಸರ್ಕಾರದಿಂದ ಪ್ರೋತ್ಸಾಹವಾಗಿ ತಲಾ ರೂ.1.00 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು.

Join Whatsapp Group NammaDavangere 04
Join Whatsapp Group NammaDavangere 05

ಪ್ರೋತ್ಸಾಹಧನದಲ್ಲಿ ರೂ.10 ಸಾವಿರ ಆಯ್ಕೆಯಾದ ಶಾಲೆಯ ದೈಹಿಕ ಶಿಕ್ಷಕರಿಗೆ ಮತ್ತು ರೂ.90 ಸಾವಿರ ಶಾಲೆಯ ಎಸ್.ಡಿ.ಎಂ.ಸಿ.ಗೆ ಅಗತ್ಯ ಕ್ರೀಡಾ ಸಾಮಾಗ್ರಿಗಳ ಖರೀದಿ ಮಾಡಲು ನೀಡಲಾಗುತ್ತದೆ. ಇದರಡಿ ಪ್ರೋತ್ಸಾಹಧನ ಪಡೆಯ ಬಯಸುವ ಸರ್ಕಾರಿ ಶಾಲೆಗಳು ಆಯಾ ಜಿಲ್ಲೆಯ 2024-25ನೇ ಸಾಲಿನ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿರುವ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳನ್ನು ಹೊಂದಿದ ಜಿಲ್ಲೆಯ ಒಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಲಾಗುವುದು.

ಈ ಸಂಬಂಧ ಜಿಲ್ಲೆಯ ಸರ್ಕಾರಿ ಶಾಲೆಗಳು 2024-25ನೇ ಸಾಲಿನ ತಮ್ಮ ಶಾಲೆಗಳ ಕ್ರೀಡಾಪಟುಗಳ ಸಾಧನೆ ವಿವರ, ಪ್ರಶಸ್ತಿ ಪತ್ರಗಳು, ಶಾಲೆಯ ದಾಖಲೆಗಳು, ದೈಹಿಕ ಶಿಕ್ಷಕರ ಬ್ಯಾಂಕ್ ಪಾಸ್ ಬುಕ್ ಹಾಗೂ ಮುಖ್ಯೋಪಾಧ್ಯಾಯರ ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರ ಜಂಟಿ ಖಾತೆ ಪಾಸ್ ಬುಕ್ ನಕಲು ಪ್ರತಿಗಳನ್ನು ಜೂನ್ 25ರೊಳಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಗೆ ಸಲ್ಲಿಸಲು ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರ ಕಛೇರಿ ದೂರವಾಣಿ ಸಂಖ್ಯೆ 08192-237480 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Related Posts

ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳು.

ನಮ್ಮ ದಾವಣಗೆರೆ ನ.18: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ನವಂಬರ್ 21 ರಂದು ಬೆಳಿಗ್ಗೆ 11 ಗಂಟೆಗೆ ಗುಂಡಿ ಸರ್ಕಲ್ ಹತ್ತಿರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು…

ಅಂತರ್‍ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಯೂತ್ ಚಾಂಪಿಯನ್‍ಶಿಪ್ 2025 ರ ಸ್ಪರ್ಧೆಯಲ್ಲಿ ದಾವಣಗೆರೆ ಮಾರ್ಷಲ್ ಆಟ್ರ್ಸ್ ವಿದ್ಯಾರ್ಥಿಗಳಿಗೆ 01 ಬಂಗಾರ 02 ಬೆಳ್ಳಿ ಪದಕ.

ನಮ್ಮ ದಾವಣಗೆರೆ : ಅಂತರ್‍ರಾಷ್ಟ್ರೀಯ ಯೂತ್ ಸ್ಪೋಟ್ರ್ಸ್ ಮತ್ತು ಎಜುಕೇಷನ್ ಫೆಡರೇಷನ್ ಪಟ್ಟಾಯ ಥಾಯ್ಲೆಂಡ್ ಇಲ್ಲಿ ನಡೆದ 2025ನೇ ಸಾಲಿನ ನವಂಬರ್ 1 ಮತ್ತು 2 ರಂದು ನಡೆದ ಅಂತರ್‍ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಯೂತ್ ಚಾಂಪಿಯನ್‍ಶಿಪ್ 2025 ರ ಸ್ಪರ್ಧೆಯಲ್ಲಿ ಈಗಲ್…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×