ಮುಖ್ಯಮಂತ್ರಿ ತಾಲಿಬಾನಿ ಸರ್ಕಾರ ನಡೆಸುತ್ತಿದ್ದಾರೆ ಉಪ ಮುಖ್ಯಮಂತ್ರಿ ಗುಂಡಾ ರಾಜ್ ನಡೆಸುತ್ತಿದ್ದಾರೆ: ಪ್ರತಾಪ್ ಸಿಂಹ

ನನಗೆ ಈ ಕರ್ನಾಟಕ ಸರ್ಕಾರವನ್ನು ನೋಡಿದರೆ ಒಂದು ನಂಬರ್ 01 ಸಿದ್ದರಾಮಯ್ಯನವರು ನಂಬರ್ 02 ಡಿ ಕೆ ಶಿವಕುಮಾರ್ ಒಬ್ಬರು ಮುಖ್ಯಮಂತ್ರಿ ಇನ್ನೊಬ್ಬರು ಉಪಮುಖ್ಯಮಂತ್ರಿ ಮುಖ್ಯಮಂತ್ರಿ ತಾಲಿಬಾನಿ ಸರ್ಕಾರ ನಡೆಸುತ್ತಿದ್ದಾರೆ ಉಪ ಮುಖ್ಯಮಂತ್ರಿ ಗುಂಡಾ ರಾಜ್ ನಡೆಸುತ್ತಿದ್ದಾರೆ, ಅಲ್ಲ ನಟ್ಟು ಬೋಲ್ಟ್ ಟೈಟ್ ಮಾಡ್ತೀವಿ ಅಂದರೆ ಏನು ಕರ್ನಾಟಕ ಏನು ನಿಮ್ಮದೇನು ರಿಯಲ್ ಎಸ್ಟೇಟ್ ಆಸ್ತಿನ ಸರ್ ಡಿ ಕೆ ಶಿವಕುಮಾರ್ ಅವರೇ ಯಾರದು ನಟ್ಟು ಬೋಲ್ಟ್ ಟೈಟ್ ಮಾಡ್ತೀರಿ ಯಾವ ಹೋರಾಟವನ್ನು ಮಾಡಿದೀರಿ ನೀವು ?

Join Whatsapp Group NammaDavangere 04
Join Whatsapp Group NammaDavangere 05

ಏನು ನಮ್ಮ ನೀರು ನಮ್ಮ ಹಕ್ಕು ಅಂತ ಹೇಳಿ ನೀವು ಅಲ್ಲಿಂದ ಏನು ಮೇಕೆದಾಟುಯಿಂದ ಪಾದಯಾತ್ರೆಯನ್ನು ಬೆಂಗಳೂರಿಗೆ ತಗೊಂಡು ಹೋದ್ರಲ್ಲ ಅದಕ್ಕೆ ಸುದೀಪು, ಶಿವಣ್ಣ, ಯಶ್, ದರ್ಶನ್ ಎಲ್ಲರೂ ಬರಬೇಕಿತ್ತಾ ಅದು ನೀವೇನು ನೀವು ಕರ್ನಾಟಕದ ಜನರ ಪರವಾಗಿ ಗೋಕಾಕ್ ಚಳುವಳಿ ನಡೆದಿತ್ತಲ್ಲ ಆತರ ಮಾಡಿದ್ರಾ ನೀವೇನು ?

ನೀವು ಮಾಡಿದ್ದು ಮೇಕೆದಾಟಿಂದ ಬೆಂಗಳೂರು ವರೆಗೂ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಸಿದ್ದರಾಮಣ್ಣ, ಡಿ ಕೆ ಶಿವಕುಮಾರಣ್ಣ ನಿಮ್ಮ ಕಟೌಟ್ ಹಾಕೊಂಡು ಅದಕ್ಕೆ ಸುದೀಪ್ ಬಂದ್ಬಿಟ್ಟು ಪ್ಲಕಾರ್ಡ್ ಇಟ್ಕೊಂಡು ನಿಂತ್ಕೊಳ್ಳೋಕೆ ಆಗುತ್ತಾ ಅದಕ್ಕೆ ಶಿವಣ್ಣ ಬರಕಾಗುತ್ತಾ ಯಶ್ ಬರಕಾಗುತ್ತಾ ದರ್ಶನ್ ಬರಕಾಗುತ್ತಾ ಅಥವಾ ಇನ್ಯಾವುದೋ ನಟ್ರು ಬರಕಾಗುತ್ತಾ ಕಾಂಗ್ರೆಸ್ ಜಾತ್ರೆ ಮಾಡಿಕೊಂಡು ಅದು ಚುನಾವಣಾ ಪೂರ್ವಭಾವಿಯಾಗಿ ಮಾಡಿದ್ರಿ ನೀವು 2023 ರಲ್ಲಿ ಮಾಡಿದ್ದು ನೀವು ಆಗ ನೀವು ಚುನಾವಣೆ ಹತ್ತಿರ ಬಂದಿದೆ ಅಂತ ರಾಜಕೀಯ ಪ್ರೇರಿತವಾಗಿ ಮಾಡಿದ್ರಿ ನಿಮ್ಮ ಲೀಡರ್ಗಳು ಕಟೌಟ್ ಹಾಕೊಂಡು ಬೇರೆಯವರು ಬಂದು ನಿಂತುಕೊಳ್ಳೋಕೆ ನಿಮ್ಮ ಪಾರ್ಟಿ ಕಾರ್ಡ್ ಹೋಲ್ಡರ್ ಗಳ ಅವರು.

ಗೋಕಾಕ್ ಚಳುವಳಿ ತರದ್ದು ಮಾಡಿದ್ದಿದ್ರೆ ಬರೋರು ಆಮೇಲೆ ನಾನು ನಿಮ್ಮನ್ನ ಡಿ ಕೆ ಶಿವಕುಮಾರ್ ಅವರನ್ನು ಕೇಳಲಿಕ್ಕೆ ಬಯಸುತ್ತೇನೆ ಸರ್ ನೀವು ಹಿಂದೆ ಎಸ್ ಎಂ ಕೃಷ್ಣ ಅವರ ಸರ್ಕಾರದಲ್ಲೂ ಕೂಡ ಮಂತ್ರಿಯಾಗಿದ್ರಲ್ಲ ಸರ್ ನೀವು..! ಬೆಂಗಳೂರಿಗೆ ನೀರು ಕೊಡೋದಕ್ಕೆ ಅಂತ ತಮಿಳುನಾಡು ತಕ್ರಾರ್ ಆಯ್ತು ಆಮೇಲೆ 2012 ರಲ್ಲಿ ಬಿಜೆಪಿ ಸರ್ಕಾರ ಇರುವಂತಹ ಸಂದರ್ಭದಲ್ಲಿ ಅದನ್ನ ಜಲವಿದ್ಯುತ್ ಶಕ್ತಿ ಯೋಜನೆಯಾಗಿ ಮಾಡ್ತೀವಿ ಅಂತ ಹೇಳ್ಬಿಟ್ಟು ಡಿಪಿಆರ್ ಪ್ರಿಪರೇಷನ್ ಮಾಡೋಕೆ ಅಂತ ಹೊರಟ್ರು 2018ರಲ್ಲಿ ಮತ್ತೆ ನೀವು ಸರ್ಕಾರ ಇತ್ತು ನೀವು ಮಂತ್ರಿ ಇದ್ರಿ ಆ ಸಂದರ್ಭದಲ್ಲಿ ಡಿಪಿಆರ್ ಸಬ್ಮಿಟ್ ಆಯ್ತು ಸರ್ ಇದಕ್ಕೆ ಒಪ್ಪಿಗೆ ಯಾರ್ಯಾರು ಕೊಡಬೇಕು ಈಗ ಅದನ್ನ ಫಾರೆಸ್ಟ್ ಕ್ಲಿಯರೆನ್ಸ್ ಬೇಕು ಫಾರೆಸ್ಟ್ ಕ್ಲಿಯರೆನ್ಸ್ ಬರಬೇಕು ಅಂದ್ರೆ ಕಾವೇರಿ ವಾಟರ್ ಮ್ಯಾನೇಜ್ ಅಥಾರಿಟಿ ಇಂದ ಅದಕ್ಕೆ ಪರ್ಮಿಷನ್ ಬೇಕು ಅಲ್ಲಿ ತಮಿಳುನಾಡು ಇದೆ ಕೇರಳ ಇದೆ ಪಾಂಡಿಚೇರಿ ಇದೆ ಕರ್ನಾಟಕನು ಜೊತೆಗಿದೆ ಇವರಿಷ್ಟು ರಾಜ್ಯಗಳದ್ದು ಪರ್ಮಿಷನ್ ಬೇಕು ಆಯ್ತು ನೀವು ಪಕ್ಕದಲ್ಲಿ ಇರುವಂತಹ ಸ್ಟಾಲಿನ್ ಗೆ ಫೋನ್ ಮಾಡ್ಬಿಟ್ಟು ತಕ್ರಾರ್ ಎತ್ಬಿಡಪ್ಪ ಅಂತ ಹೇಳ್ರಿ ಅಥವಾ ನಿಮ್ಮಲ್ಲಿ ಪುದಿಚೇರಿ ಸರ್ಕಾರಕ್ಕೆ ಕೇಳಿ ಕೇರಳ ಸರ್ಕಾರಕ್ಕೆ ಹೇಳಿ ಈಗ ನೀವು ಮಾಡಿ ಈಗ ನಮ್ಮ ನೀರು ನಮ್ಮ ಹಕ್ಕು ಮೇಕೆದಾಟು ನಮಗೆ ಸೇರಿದ್ದು ಅಂತ ಇವಾಗ ಮಾಡಿ ಸರ್ ಯಾರ ವಿರುದ್ಧ ಮಾಡಬೇಕು ಸ್ಟಾಲಿನ್ ವಿರುದ್ಧ ಮಾಡಬೇಕಾಗುತ್ತೆ ಕೇರಳ ಸರ್ಕಾರದ ವಿರುದ್ಧ ಮಾಡಬೇಕಾಗುತ್ತೆ ಹಾಗೂ ಪುದುಚೇರಿ ಸರ್ಕಾರದ ವಿರುದ್ಧ ಮಾಡಬೇಕಾಗುತ್ತೆ.

ಇವತ್ತು ಮಾಡಿ ಸರ್ ನಾನು ಬರ್ತೀನಿ ಸರ್ ನಾನು ಬಿಜೆಪಿ ಕಾರ್ಯಕರ್ತನಾಗಿ ನಿಮ್ಮ ಯಾರು ಸೋನಿಯಾ ಗಾಂಧಿ ರಾಹುಲ್ ಗಾಂಧಿ ಫೋಟೋ ಇಟ್ಕೊಳ್ಳದಲೆ ಇದು ರಾಜ್ಯದ ಹಿತದೃಷ್ಟಿಯಿಂದ ನೀವು ಮಾಡಿ ಎಲ್ಲಾ ಸ್ಟಾರ್ ಗಳು ಬರ್ತಾರೆ ಪ್ರತಿಯೊಬ್ಬ ಕರ್ನಾಟಕದ ಎಲ್ಲಾ ಸ್ಟಾರ್ ಗಳು ಅಲ್ಲಿ ಬರ್ತಾರೆ ನಾವು ಬರ್ತೀವಿ ಬಿಜೆಪಿ ಕಾರ್ಯಕರ್ತರು ಬರ್ತಾರೆ ಇದು ನಿಮ್ಮ ರಾಜಕೀಯ ಪ್ರೇರಿತವಾದಂತಹ ನಮ್ಮ ನೀರು ನಮ್ಮ ಹಕ್ಕು ಅಂತ ಮೇಕೆದಾಟು ಹೋರಾಟಕ್ಕೆ ಸುದೀಪ್ ಬರಬೇಕು ಅಂತ ಹೇಳ್ತಿಲ್ಲ ನಾವು ಕೂಡ ಇತ್ತೀಚೆಗೆ ನಮ್ಮ ರಾಜ್ಯಾಧ್ಯಕ್ಷರಾಗಿರುವಂತಹ ವಿಜಯೇಂದ್ರ ಅವರ ನೇತೃತ್ವದಲ್ಲಿ ಬೆಂಗಳೂರಿಂದ ಮೈಸೂರಿಗೆ ನಾವು ಮೂಡಾಕೋಸ್ಕರವಾಗಿ ಮೈಸೂರು ಚಲೋ ಅಂತ ಮಾಡೋದು ಅವತ್ತು ಬಂದಿದ್ರೇನ್ರಿ ಯಾರೋ ಚಲನಚಿತ್ರ ನಟ್ರು ಯಾಕೆ ಬರ್ಲಿಲ್ಲ ಅಂತ ಕೇಳಿದ್ವ ಮೈಸೂರನ್ನು ಉಳಿಸಬೇಕು ಮೂಡ ಉಳಿಸಬೇಕು ಅಂತ ನಾವು ಹೊರಟಿದ್ದು ಅದು ಪೊಲಿಟಿಕಲ್ ಪ್ರೋಗ್ರಾಮ್ ಅದು ಅದಕ್ಕೆ ಹೆಂಗ್ರಿ ಬೇರೆ ಪಾರ್ಟಿಯವರು ಬರಕಾಗುತ್ತೆ ಅಥವಾ ಬೇರೆ ನಟರು ಬರಕಾಗುತ್ತೆ ಏನ್ ಏನು ಡಿ ಕೆ ಶಿವಕುಮಾರ್ ಅವರೇ ನಿಮ್ಮ ಉಪ ಮುಖ್ಯಮಂತ್ರಿ ಇದ್ದೀರಿ ನಟ್ಟು ಬೋಲ್ಟು ಏನು ನಿಮ್ಮ ಬ್ರದರ್ಸ್ ಅವರು ಹೇಳಿಕೊಟ್ರಾ ನಿಮಗೆ?

ನಟ್ಟು ಬೋಲ್ಟ್ ಟೈಟ್ ಮಾಡೋದು ಅವರ ಬ್ರದರ್ಸ್ ಅದೇ ಮಾಡ್ತಾರೆ ಅಲ್ವಾ ಅದನ್ನ ಹೇಳ್ಕೊಂಡು ಬಿಟ್ಟು ನೀವು ನಟ್ಟು ಬೋಲ್ಟ್ ಟೈಟ್ ಮಾಡ್ತೀವಿ ಅಂದ್ರೆ ಬ್ರದರ್ಸ್ ಬಿಟ್ಟು ಟೈಟ್ ಮಾಡ್ತೀರಿ ಅಂತ ಹೇಳ್ತೀರಾ ಸರ್ ಇದು ಭಾಷೆ ಅಲ್ಲ ಸರ್ ಇದು ನಿಮಗೆ ಅಧಿಕಾರ ಕೊಟ್ಟಿದ್ದಾರೆ ಹುಲಿ ಏರಿದಿರಿ ಅಧಿಕಾರ ಇಳಿದಾದ್ಮೇಲೆ ಹುಲಿ ಹುಲಿಗೆ ಜನ ಗೌರವ ಕೊಡ್ತಾ ಇರೋದು ಕೆಳಗೆ ಇಳಿದು ಕೂಡಲೇ ಹುಲಿನೇ ನಿಮ್ಮನ್ನು ತಿಂದು ಹಾಕಿಬಿಡುತ್ತೆ ದಯವಿಟ್ಟು ಅಧಿಕಾರದಲ್ಲಿ ಇರುವಾಗ ದರ್ಪವನ್ನು ತೋರಿಸಬೇಡಿ ಕನ್ನಡ ಸಿನಿಮಾ ಆಕ್ಟರ್ ಗಳ ಬಗ್ಗೆ ಮಾತಾಡಬೇಡಿ ಕನ್ನಡ ಸಿನಿಮಾ ಆಕ್ಟರ್ಗಳು ಇವತ್ತು ಕೂಡ ಸುದೀಪ್ ಇರಬಹುದು ಶಿವಣ್ಣ ಇರಬಹುದು ಯಶ್ ಇರಬಹುದು ದರ್ಶನ್ ಇರಬಹುದು ಅಥವಾ ನಮ್ಮ ರಮೇಶ್ ಅವರು ಇರಬಹುದು ಎಲ್ಲಾ ನಮಗೆ ನಟ್ರುಗಳು ನಮ್ಮ ಕನ್ನಡ ಚಲನಚಿತ್ರಕ್ಕೆ ದೊಡ್ಡ ಕಾಂಟ್ರಿಬ್ಯೂಷನ್ ಕೊಟ್ಟಿದ್ದಾರೆ ನೀವು ಮಾಡೋ ಯಾವುದೋ ಪ್ರೋಗ್ರಾಮ್ ಗೆ ಬಂದಿಲ್ಲ ಅಂತ ಹೇಳೋಕೆ ಹೋಗಬೇಡಿ ನೀವು ಬೇರೆ ಬೇರೆ ಭಾಷೆಗಳಿಗೂ ಹೋಗ್ಬಿಟ್ಟು ನಮ್ಮ ಕನ್ನಡದ ನಟ್ರು ಒಳ್ಳೆ ಕೆಲಸವನ್ನು ಮಾಡಿದ್ದಾರೆ ಇತ್ತೀಚೆಗೆ ಡಾಲಿ ಧನಂಜಯ್ ಅವರು ಬಂದ್ರು ಕೂಡ ಬೇರೆ ಬೇರೆ ಭಾಷೆನಲ್ಲೂ ಕೂಡ ಹೋಗಿ ಪರ್ಫಾರ್ಮ್ ಮಾಡಿ ಸಹಿ ಅನಿಸಿಕೊಂಡಿದ್ದಾರೆ ಇದನ್ನೆಲ್ಲ ನಮ್ಮ ಕನ್ನಡದವರನ್ನ ನಾವು ಅಪ್ರಿಶಿಯೇಟ್ ಮಾಡಬೇಕು.

ನಿಮ್ಮದು ಯಾವುದೋ ಪೊಲಿಟಿಕಲ್ ಕಾರ್ಯಕ್ರಮಕ್ಕೆ ಬರಲಿಲ್ಲ ಅಂದ ಕೂಡಲೇ ನಟ್ಟು ಬೋಲ್ಟ್ ಟೈಟ್ ಮಾಡ್ತೀವಿ ನೀವು ಶೂಟಿಂಗ್ ಮಾಡೋದಕ್ಕೆ ನಾವು
ಪರ್ಮಿಷನ್ ಕೊಡಬೇಕು ಎಂದು ಹೇಳ್ಬಿಟ್ರೆ ಸಾಕು ನಿಲ್ಲಿಸಿಬಿಡ್ತಾರೆ ಅಂತ ಏನು ಶಾಶ್ವತವಾಗಿ ನೀವೇ ಇರ್ತೀರಾ ಈಗ ನೀವೇ ಇದ್ರಾ 2023 ವರೆಗೂ ನಿಮ್ಮದು ಟೈಮ್ ಮುಗಿತದೆ ನಿಮ್ಮದು ಮುಗಿತದೆ ಆನಂತರ ಬೇರೆಯವರು ಬರ್ತಾರೆ ಆದರೆ ಕನ್ನಡ ಚಲನಚಿತ್ರರಂಗ ಇರಬೇಕು ಅದು ನಾನ್ ಪೊಲಿಟಿಕಲ್ ಆಗಿರಬೇಕು ಕನ್ನಡದ ವಿಚಾರಕ್ಕೋಸ್ಕರವಾಗಿ ಈ ನೆಲಜಲದ ವಿಚಾರಕ್ಕೋಸ್ಕರವಾಗಿ ಅವರನ್ನ ನಾವು ಬಳಕೆ ಮಾಡಿಕೊಳ್ಳಬೇಕು ನಿಮ್ಮ ರಾಜಕೀಯ ಉದ್ದೇಶಕ್ಕಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

Related Posts

ಸ್ವದೇಶೀ ಬಳಿಸಿ – ದೇಶ ಉಳಿಸಿ

“ಸ್ವದೇಶೀ” ಎಂಬ ಪದವು ಕೇವಲ ಉತ್ಪನ್ನ ಅಥವಾ ವಸ್ತುವಿನ ಆಯ್ಕೆ ಅಲ್ಲ, ಅದು ನಮ್ಮ ರಾಷ್ಟ್ರಭಕ್ತಿಯ ಪ್ರತಿಬಿಂಬ, ದೇಶದ ಅಭಿವೃದ್ಧಿಗೆ ಕೊಡುವ ಒಂದು ಅಮೂಲ್ಯ ಕೊಡುಗೆ. “ಸ್ವದೇಶೀ” ಎಂದರೆ ಅದರಲ್ಲಿ ಸ್ವಾವಲಂಬನೆ, ಆತ್ಮಗೌರವ, ಆರ್ಥಿಕ ಶಕ್ತಿ ಮತ್ತು ರಾಷ್ಟ್ರೀಯ ಏಕತೆಯ ತತ್ವ…

ಗ್ರಾಹಕರ ವಿಶ್ವಾಸಕ್ಕೆ ಹೆಸರಾಗಿರುವ ‘ರತನ್ ಗೋಲ್ಡ್’ – ನಿಮ್ಮ ಚಿನ್ನವನ್ನು ಒಳ್ಳೆ ಬೆಲೆಗೆ ಖರೀದಿಸಲಾಗುತ್ತದೆ.

ಭಾರತದಲ್ಲಿ ಚಿನ್ನ ಎಂದರೆ ಅದು ಕೇವಲ ಒಂದು ಲೋಹವಲ್ಲ, ಅದು ಸಂಸ್ಕೃತಿ, ಸಂಪ್ರದಾಯ, ಭದ್ರತೆ ಮತ್ತು ಬದುಕಿನ ಆಧಾರವೆಂದು ಕಾಣಲಾಗುತ್ತದೆ. ಆದರೆ ತುರ್ತು ಅವಶ್ಯಕತೆಯಲ್ಲಿ ಚಿನ್ನವನ್ನು ಮಾರಾಟ ಮಾಡಬೇಕಾದಾಗ, ಅನೇಕರು ವಂಚನೆಗೆ ಗುರಿಯಾಗಿರುವುದನ್ನು ನಾವು ಕಂಡಿದ್ದೇವೆ. ಜನರಿಗೆ ನ್ಯಾಯಯುತ ಬೆಲೆ ದೊರೆಯದೇ…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×