ದಾವಣಗೆರೆಯಲ್ಲಿ ನಿರ್ಬಂಧಿತ ಪ್ರದೇಶ.. !

ನಮ್ಮ ದಾವಣಗೆರೆ ಜ. 17: ದಾವಣಗೆರೆ ಮಹಾನಗರ ಪಾಲಿಕೆಯ ಅವರಗೊಳ್ಳ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಹಿನ್ನಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತುರ್ತು ಕ್ರಮಗಳಿಗೆ ಸೂಚನೆ ನೀಡಿದರು.

ನೆಲಭರ್ತಿ ಜಾಗದಲ್ಲಿ ಸಂಗ್ರಹವಾಗುವ ಪಾರಂಪರಿಕ ತ್ಯಾಜ್ಯವನ್ನು ವಿಲೇಮಾಡಲು ಈಗಾಗಲೇ ಕಾರ್ಯಾದೇಶ ನೀಡಿದ್ದು ತುರ್ತಾಗಿ ಕೆಲಸ ಪ್ರಾರಂಭ ಮಾಡುವ ಮೂಲಕ ಮುಂದಿನ 6 ತಿಂಗಳಲ್ಲಿ ತ್ಯಾಜ್ಯ ಬೇರ್ಪಡಿಸುವ ಕೆಲಸ ಮುಕ್ತಾಯ ಮಾಡಲು ಸೂಚನೆ ನೀಡಿ ಘನತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸುವುದರಿಂದ ಬೆಂಕಿ ಅವಘಡವನ್ನು ತಕ್ಷಣವೇ ತಡೆಗಟ್ಟಬಹುದಾಗಿದೆ.

Join Whatsapp Group NammaDavangere 04
Join Whatsapp Group NammaDavangere 05

ಬೆಂಕಿ ಅವಘಡ ಸಂಭವಿಸಲು ಕಿಡಿಗೇಡಿಗಳು ಇಲ್ಲಿಗೆ ಅನಾವಶ್ಯಕವಾಗಿ ಬಾರದಂತೆ ಮತ್ತು ಇಂತಹ ಕಿಡಿಗೇಡಿಗಳ ಮೇಲೆ ನಿಗಾವಹಿಸಲು ಸಿಸಿ ಕ್ಯಾಮೆರಾಗಳನ್ನು ತುರ್ತಾಗಿ ಅಳವಡಿಸುವ ಜೊತೆಗೆ 24*7 ಕಾವಲುಗಾರರನ್ನು ನೇಮಕ ಮಾಡಲು ಸೂಚಿಸಿ ಬೆಂಕಿ ನಂದಿಸಲು ಸುತ್ತಲೂ ನೀರನ ಪೈಪ್‍ಲೈನ್ ಅಳವಡಿಕೆ ಮಾಡಿ ಅಗ್ನಿ ನಂದಕ ಪರಿಕರ ಅಳವಡಿಸಲು ಮತ್ತು ನೆಲಭರ್ತಿ ಜಾಗ ಇನ್ನೂ ಅವಶ್ಯಕತೆ ಇರುವುದರಿಂದ ಖರೀದಿ ಮಾಡಲು ಪ್ರಕ್ರಿಯೆ ಆರಂಭಿಸಲು ತಿಳಿಸಿ ಆಕಸ್ಮಿಕ ಅಗ್ನಿ ಅವಘಡಗಳನ್ನು ತಡೆಗಟ್ಟಲು ಕ್ರಿಯಾ ಯೋಜನೆ ತಯಾರು ಮಾಡಲು ಪಾಲಿಕೆ ಆಯುಕ್ತರಿಗೆ ಮತ್ತು ಅಗ್ನಿಶಾಮಕ ಮತ್ತು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು.

ಅವರಗೊಳ್ಳ ಗ್ರಾಮದ ಹತ್ತಿರ ಇರುವ ಮಹಾನಗರಪಾಲಿಕೆ ಒಡೆತನದಲ್ಲಿರುವ 33 ಎಕರೆ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕದ ಸರ್ವೇ ನಂ 117/2, 119, 123, 129, 129/1, 129/2, 129/4, 130/1 ಪ್ರದೇಶಗಳು ಸಂಪೂರ್ಣವಾಗಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಯಾವುದೇ ಅನಧಿಕೃತ ವಾಹನಗಳಾಗಲಿ, ವ್ಯಕ್ತಿಗಳಾಗಲಿ, ಜಾನುವಾರುಗಳಾಗಲಿ ಪೂರ್ವಾನುಮತಿ ಇಲ್ಲದೇ ಪ್ರವೇಶವಿರುವುದಿಲ್ಲ. ಯಾವುದೇ ರೀತಿಯ ಅವಘಡಗಳಾದಲ್ಲಿ ಪಾಲಿಕೆ ಜವಾಬ್ದಾರಿಯಾಗಿರುವುದಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ರವರು ತಿಳಿಸಿದ್ದಾರೆ.

Related Posts

ಬುಧವಾರದ ರಾಶಿ ಭವಿಷ್ಯ 18 ಫೆಬ್ರವರಿ 2026

ಈ ರಾಶಿಯವರಿಗೆ ದಂಪತಿ ಕಲಹಗಳು ಕೊನೆಗೊಳ್ಳುವುದು ಯಾವಾಗ?ಅಂತೂ ಇಂತೂ ಈ ರಾಶಿಯವರ ಕಂಕಣ ಬಲ ಕೂಡಿ ಬಂತು, ಬುಧವಾರದ ರಾಶಿ ಭವಿಷ್ಯ 18 ಫೆಬ್ರವರಿ 2026 ಸೂರ್ಯೋದಯ – 6:44 ಬೆ.ಸೂರ್ಯಾಸ್ತ – 6:15 ಸಂಜೆ ಶಾಲಿವಾಹನ ಶಕೆ -1947ಸಂವತ್-2081ವಿಶ್ವಾವಸು ನಾಮ…

ನವಂಬರ್ 18 ರಂದು ದಾವಣಗೆರೆಯ ವಿವಿಧಢೆ ವಿದ್ಯುತ್ ವ್ಯತ್ಯಯ

ನಮ್ಮ ದಾವಣಗೆರೆ ನ. 17: ಕಾಡಜ್ಜಿ ಮತ್ತು ಮೇಳ್ಳೆಕಟ್ಟೆ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ನವಂಬರ್ 18 ರಂದು ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ Join Whatsapp Group NammaDavangere…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×